IPL Trophies: ಈ ಆರ್​ಸಿಬಿ ಆಟಗಾರನ ಮನೆಯಲ್ಲಿವೆ 9 ಐಪಿಎಲ್​​ ಟ್ರೋಫಿಗಳು! 11 ವರ್ಷಗಳಲ್ಲಿ 9 ಟ್ರೋಫಿ ಗೆದ್ದ ಸಹೋದರರು | rcb s IPL Glory Krunal Pandya Makes a Statement with 9 Trophies in 11 Years

IPL Trophies: ಈ ಆರ್​ಸಿಬಿ ಆಟಗಾರನ ಮನೆಯಲ್ಲಿವೆ 9 ಐಪಿಎಲ್​​ ಟ್ರೋಫಿಗಳು! 11 ವರ್ಷಗಳಲ್ಲಿ 9 ಟ್ರೋಫಿ ಗೆದ್ದ ಸಹೋದರರು | rcb s IPL Glory Krunal Pandya Makes a Statement with 9 Trophies in 11 Years

2 ಫೈನಲ್​​ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ

ಹೀಗಾಗಿ, ಅವರು ಐಪಿಎಲ್ ಇತಿಹಾಸದಲ್ಲಿ ಅಂತಿಮ ಪಂದ್ಯಗಳಲ್ಲಿ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2017 ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ವೇಳೆ ಮೊದಲ ಬಾರಿಗೆ ಆರ್‌ಪಿಎಸ್ ವಿರುದ್ಧದ ಫೈನಲ್‌ನಲ್ಲಿ ಕೃನಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

11 ವರ್ಷಗಳಲ್ಲಿ 9 ಟ್ರೋಫಿ

ಈ ಋತುವಿನ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ನಂತರ, ಕೃಣಾಲ್ ಪಾಂಡ್ಯ ನಿರೂಪಕ ರವಿಶಾಸ್ತ್ರಿ ಅವರೊಂದಿಗೆ ಮಾತನಾಡುವಾಗ ಒಂದು ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡರು. 11 ವರ್ಷಗಳಲ್ಲಿ ಪಾಂಡ್ಯ ಕುಟುಂಬವು 9 ಐಪಿಎಲ್ ಟ್ರೋಫಿಗಳನ್ನು ಗೆಲ್ಲುತ್ತದೆ ಎಂದು ಹಾರ್ದಿಕ್‌ಗೆ ಹೇಳಿದ್ದೆ ಎಂದು ಅವರು ಬಹಿರಂಗಪಡಿಸಿದರು. ಈ ವಿಷಯವನ್ನು ಪ್ರಸ್ತಾಪಿಸುವಾಗ ಕೃನಾಲ್ ತುಂಬಾ ಭಾವುಕರಾದರು. ಹಾರ್ದಿಕ್ ಮತ್ತು ನಾನು ಈ ಮಟ್ಟಕ್ಕೆ ತಲುಪಲು ಸಾಕಷ್ಟು ಶ್ರಮಿಸಿದ್ದೇವೆ ಎಂದು ಅವರು ಹೇಳಿದರು. ಇದು ಕೃನಾಲ್ ಅವರ ನಾಲ್ಕನೇ ವೈಯಕ್ತಿಕ ಪ್ರಶಸ್ತಿಯಾಗಿದ್ದು, ಹಾರ್ದಿಕ್ ಈಗಾಗಲೇ 5 ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಮುಂಬೈ ಇಂಡಿಯನ್ಸ್ ನಿಂದ ಪಯಣ

ಕೃನಾಲ್ ಅವರ ಐಪಿಎಲ್ ಪ್ರಯಾಣವು 2016 ರಲ್ಲಿ ಮುಂಬೈ ಇಂಡಿಯನ್ಸ್ ಪರ ಪ್ರಾರಂಭವಾಯಿತು. ಅವರು 2017, 2019 ಮತ್ತು 2020 ರ ಋತುಗಳಲ್ಲಿ ಆ ಫ್ರಾಂಚೈಸಿಗಾಗಿ ಮೂರು ಪ್ರಶಸ್ತಿಗಳನ್ನು ಗೆದ್ದರು.

ಇದೀಗ ಆರ್​ಸಿಬಿ ಪರವಾಗಿ ಅವರು ಆರ್‌ಸಿಬಿ ಪರ ನಾಲ್ಕನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 34 ವರ್ಷದ ಬರೋಡಾ ಆಫ್ ಸ್ಪಿನ್ನರ್, ಆರ್‌ಸಿಬಿ ಪರ ತಮ್ಮ ನಾಲ್ಕನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಬಯಸುವುದಾಗಿ ಫ್ರಾಂಚೈಸಿಗೆ ಸೇರಿದ ಮೊದಲ ದಿನದಂದೇ ಹೇಳಿದ್ದರು. ಇದೀಗ ಮಾಡಿ ತೋರಿಸಿದ್ದಾರೆ.

ಹಾರ್ದಿಕ್ 5 ಪ್ರಶಸ್ತಿ ವಿಜೇತ

ಹಾರ್ದಿಕ್ ಬಗ್ಗೆ ಹೇಳುವುದಾದರೆ, ಅವರು 2015 ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು ಮತ್ತು 2015, 2017, 2019 ಮತ್ತು 2020 ರ ಋತುಗಳಲ್ಲಿ ಆ ಫ್ರಾಂಚೈಸಿಗಾಗಿ ಪ್ರಶಸ್ತಿಗಳನ್ನು ಗೆದ್ದರು. ನಂತರ ಅವರು 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ತಮ್ಮ ಐದನೇ ಪ್ರಶಸ್ತಿಯನ್ನು ಗೆದ್ದರು. ಪಾಂಡ್ಯ ಸಹೋದರರು ಒಟ್ಟಿಗೆ 9 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಹೆಚ್ಚು ಟ್ರೋಫಿ ಗೆದ್ದವರು

ಆಟಗಾರರಾಗಿ ಅತಿ ಹೆಚ್ಚು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಆಟಗಾರರ ಬಗ್ಗೆ ನೋಡುವುದಾದರೆ, ರೋಹಿತ್ ಶರ್ಮಾ -6 (ಡೆಕ್ಕನ್ ಚಾರ್ಜರ್ಸ್, ಮುಂಬೈ)

ಅಂಬಟಿ ರಾಯುಡು-6 (ಮುಂಬೈ, ಸಿಎಸ್‌ಕೆ), ಎಂಎಸ್ ಧೋನಿ-5 (ಸಿಎಸ್‌ಕೆ), ಕೀರನ್ ಪೊಲಾರ್ಡ್ -5 (ಮುಂಬೈ), ಹಾರ್ದಿಕ್ ಪಾಂಡ್ಯ-5 (ಮುಂಬೈ, ಗುಜರಾತ್) ಟಾಪ್ 5ರ ಲಿಸ್ಟ್​ನಲ್ಲಿದ್ದಾರೆ.