Last Updated:
ಜಾಕೋಬ್ ಬೆಥೆಲ್‌ಗೆ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ 2.6 ಕೋಟಿಗೆ ಖರೀದಿಸಿದೆ. ಫಿಲ್ ಸಾಲ್ಟ್ ಗಾಯಗೊಂಡ ಕಾರಣ 2 ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತ್ತು. ವಿರಾಟ್ ಕೊಹ್ಲಿ ಜೊತೆಗೆ ಆರಂಭಿಕನಾಗಿ ಆಡುವ ಅವಕಾಶ ಪಡೆದಿದ್ದರು.
ಐಪಿಎಲ್ 2025ರಲ್ಲಿ (IPL 2025) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪ್ಲೇ ಆಫ್ ಪ್ರವೇಶಿಸಿದೆ. ಆದರೆ ಪ್ಲೇ ಆಫ್ಗೂ ಮುನ್ನ ರಾಷ್ಟ್ರೀಯ ತಂಡದ ಕರ್ತವ್ಯಕ್ಕಾಗಿ ತವರಿಗೆ ಮರಳಿರುವ ಜಾಕೋಬ್ ಬೆಥೆಲ್ (Jacob Bethel) ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಪಂದ್ಯದಲ್ಲಿ ಆಕರ್ಷಕ್ 82 ರನ್ಗಳಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದೀಗ ಅವರು ತಮ್ಮ ಈ ಭರ್ಜರಿ ಆಟದ ಕ್ರೆಡಿಟ್ಅನ್ನು ಆರ್‌ಸಿಬಿ ಲೆಜೆಂಡ್ ವಿರಾಟ್ ಕೊಹ್ಲಿಗೆ ನೀಡಿದ್ದಾರೆ. ಕಳೆದ 2 ತಿಂಗಳಲ್ಲಿ ವಿರಾಟ್ ಕೊಹ್ಲಿಯಿಂದ (Virat Kohli)ಪಡೆದ ಸಲಹೆ ಮತ್ತು ಸ್ಫೂರ್ತಿಯನ್ನು ಪಂದ್ಯದ ನಂತರ ಹಂಚಿಕೊಂಡಿದ್ದಾರೆ. ಈ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
2 ಪಂದ್ಯಗಳನ್ನಾಡಿದ್ದ ಬೆಥೆಲ್
ಜಾಕೋಬ್ ಬೆಥೆಲ್‌ಗೆ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ 2.6 ಕೋಟಿಗೆ ಖರೀದಿಸಿದೆ. ಫಿಲ್ ಸಾಲ್ಟ್ ಗಾಯಗೊಂಡ ಕಾರಣ 2 ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತ್ತು. ವಿರಾಟ್ ಕೊಹ್ಲಿ ಜೊತೆಗೆ ಆರಂಭಿಕನಾಗಿ ಆಡುವ ಅವಕಾಶ ಪಡೆದಿದ್ದರು. ಈ ಋತುವಿನಲ್ಲಿ ಅವರು ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 55 ರನ್ ಗಳಿಸಿದ್ದರು. ವಿರಾಟ್ ಜೊತೆ 97 ರನ್ ಗಳ ಆರಂಭಿಕ ಪಾಲುದಾರಿಕೆ ಹಂಚಿಕೊಂಡಿದ್ದ ಬೆಥೆಲ್, ಕೊಹ್ಲಿ ಸಲಹೆ ತಮ್ಮ ಬ್ಯಾಟಿಂಗ್ ನಲ್ಲಿ ಸುಧಾರಣೆ ತಂದಿದೆ ಎಂದು ಹೇಳಿದರು.
“ವಿರಾಟ್ ತಮ್ಮ ಅನುಭವವನ್ನು ಹಂಚಿಕೊಂಡರು. ವಿಭಿನ್ನ ಪರಿಸ್ಥಿತಿಗಳಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಅವರು ನನಗೆ ಕಲಿಸಿದರು. ಎರಡು ತಿಂಗಳ ಹಿಂದಿನ ಆಟಕ್ಕೆ ನಾನು ಈಗ ಉತ್ತಮ ಆಟಗಾರನಾಗಿದ್ದೇನೆ” ಎಂದು ಬೆಥೆಲ್ ಬಹಿರಂಗಪಡಿಸಿದರು.
ವಿರಾಟ್ ಕೊಹ್ಲಿ ಆಟಕ್ಕೆ ಹೊಂದಿಕೆ ತುಂಬಾ ಕಷ್ಟ
ವಿರಾಟ್ ಕೊಹ್ಲಿ ಆಟದ ತೀವ್ರತೆಯನ್ನ ಜಾಕೋಬ್ ಬೆಥೆಲ್ ಶ್ಲಾಘಿಸಿದರು. ” ವಿರಾಟ್ ಜೊತೆ ಬ್ಯಾಟಿಂಗ್ ತುಂಬಾ ಕೂಲ್ ಆಗಿರುತ್ತದೆ. ಅವರ ಇಂಟೆನ್ಸಿಟಿಗೆ ಹೊಂದಿಕೆಯಾಗುವುದು ಕಷ್ಟ. ಅವರೊಂದಿಗೆ ಬ್ಯಾಟಿಂಗ್ ಮಾಡುವುದರಿಂದ ದೀರ್ಘಕಾಲ ಆಡಬೇಕೆಂಬ ಆಸೆ ಮೂಡುತ್ತದೆ” ಎಂದು ಬೆಥೆಲ್ ಹೇಳಿದರು. ಐಪಿಎಲ್ ನಲ್ಲಿ ವಿರಾಟ್ ಜೊತೆ ಕಳೆದ ಸಮಯ ತಮಗೆ ಅಮೂಲ್ಯವಾದ ಅನುಭವವಾಗಿದ್ದು, ಕೊಹ್ಲಿ ಅವರ ಸಲಹೆ ಬ್ಯಾಟಿಂಗ್ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.
2025ರಲ್ಲಿ ಕೊಹ್ಲಿ ಅದ್ಭುತ ಆಟ
ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದರೂ, ಅವರು ತಂಡದ ನಾಯಕರಾಗಿ ಮುಂದುವರೆದಿದ್ದಾರೆ. ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ 8 ವಿಕೆಟ್‌ಗಳ ಜಯ ಸಾಧಿಸಿದಾಗ, ಕೊಹ್ಲಿ ಮೈದಾನದಲ್ಲಿ ತೋರಿದ ಉತ್ಸಾಹ ಮತ್ತು ಬೌಲರ್‌ಗಳಿಗೆ ನೀಡಿದ ಸಲಹೆಗಳು ತಂಡದ ಮನೋಸ್ಥೈರ್ಯವನ್ನು ಹೆಚ್ಚಿಸಿದವು. ಈ ಋತುವಿನಲ್ಲಿ ಕೊಹ್ಲಿ 548 ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ, 7 ಅರ್ಧಶತಕಗಳೊಂದಿಗೆ ತಂಡವನ್ನು ಮುನ್ನಡೆಸುತ್ತಿದ್ದಾರೆ.
4ನೇ ಬಾರಿಗೆ ಫೈನಲ್
ಐಪಿಎಲ್ 2025 ರಲ್ಲಿ ಆರ್‌ಸಿಬಿ ನಾಲ್ಕನೇ ಫೈನಲ್ ತಲುಪಿದ್ದು, ಇದರಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 101 ರನ್‌ಗಳಿಗೆ ಸೀಮಿತಗೊಳಿಸಿದ್ದ ಆರ್‌ಸಿಬಿ, ಕೇವಲ 10 ಓವರ್‌ಗಳಲ್ಲಿ 102 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಮೈದಾನದಲ್ಲಿ ವಿರಾಟ್ ಅವರ ಉತ್ಸಾಹ ಮತ್ತು ಬೌಲರ್‌ಗಳಿಗೆ ನೀಡಿದ ಸಲಹೆಗಳು ತಂಡವನ್ನು ಫೈನಲ್ ತಲುಪಲು ಸಹಾಯ ಮಾಡಿತು.