Jalaj Saxena: 7000 ರನ್, 450+ ವಿಕೆಟ್! ಪ್ರತಿಭಾನ್ವಿತನಿಗೆ ಒಂದೂ ಅವಕಾಶ ಕೊಡದಿದ್ದಕ್ಕೆ ತಮ್ಮನ್ನ ತಾವೇ ಟ್ರೋಲ್​ ಮಾಡಿಕೊಂಡ ಮಾಜಿ ಆಯ್ಕೆಗಾರರು | Former Selectors Troll Themselves Over Missing Jalaj Saxena’s Talent | ಕ್ರೀಡೆ

Jalaj Saxena: 7000 ರನ್, 450+ ವಿಕೆಟ್! ಪ್ರತಿಭಾನ್ವಿತನಿಗೆ ಒಂದೂ ಅವಕಾಶ ಕೊಡದಿದ್ದಕ್ಕೆ ತಮ್ಮನ್ನ ತಾವೇ ಟ್ರೋಲ್​ ಮಾಡಿಕೊಂಡ ಮಾಜಿ ಆಯ್ಕೆಗಾರರು | Former Selectors Troll Themselves Over Missing Jalaj Saxena’s Talent | ಕ್ರೀಡೆ

Last Updated:

ಪ್ರಸ್ತುತ, ಇದಕ್ಕೆ ಸಂಬಂಧಿಸಿದ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ ಮತ್ತು ನೆಟಿಜನ್‌ಗಳು ಈ ಇಬ್ಬರು ಮಾಜಿ ಆಯ್ಕೆದಾರರ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ನೀವು ಒಬ್ಬ ಮಹಾನ್ ಆಲ್‌ರೌಂಡರ್‌ನ ವೃತ್ತಿಜೀವನವನ್ನು ಹಾಳುಮಾಡಿದ್ದೀರಾ, ಆದರೆ ಈಗ ಅಚ್ಚರಿ ವ್ಯಕ್ತಪಡಿಸುತ್ತಿದ್ದೀರಾ, ಅಲ್ಲದೆ ನಿಮ್ಮ ನೋಡಿ ನಗುತ್ತೀರಾ? ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಲಜ್ ಸಕ್ಸೇನಾಜಲಜ್ ಸಕ್ಸೇನಾ
ಜಲಜ್ ಸಕ್ಸೇನಾ

ಬುಧವಾರ ಮಹಾರಾಷ್ಟ್ರದ (Maharashtra) ಕೇರಳ ವಿರುದ್ಧದ ರಣಜಿ ಟ್ರೋಫಿ (Ranji Trophy) ಪಂದ್ಯದ ಸಂದರ್ಭದಲ್ಲಿ ನಡೆದಂತಹ ವಿಚಿತ್ರ ಮಾತುಕತೆ ಸಾಮಾಜಿಕ ಜಾಲತಾಣದಲ್ಲಿ (Social Media) ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಮಾಜಿ ಮುಖ್ಯ ಆಯ್ಕೆದಾರರು ಚೇತನ್ ಶರ್ಮಾ (Chetan Sharma) ಮತ್ತು ಮಾಜಿ ಆಯ್ಕೆದಾರರು ಸಲೀಲ್ ಅಂಕೋಲಾ ಅವರು ರಣಜಿ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ ಆಲ್‌ರೌಂಡರ್ ಜಲಜ್ ಸಕ್ಸೇನಾ ಅವರ ಅಂಕಿಅಂಶಗಳನ್ನು ನೋಡಿ ಆಶ್ಚರ್ಯಚಕಿತರಾದರು. ದೇಶೀಯ ಕ್ರಿಕೆಟ್‌ನಲ್ಲಿ ಇಷ್ಟೊಂದು ಉತ್ತಮ ಪ್ರದರ್ಶನ ನೀಡಿದ್ದರೂ.. ಅವರಿಗೆ ಟೀಮ್ ಇಂಡಿಯಾ ಪರ ಆಡಲು ಅವಕಾಶ ಸಿಗಲಿಲ್ಲವೇ? ಅವರು ಅಚ್ಚರಿ ವ್ಯಕ್ತಿಪಡಿಸಿದ್ದರು. ಆದರೆ ಈ ಇಬ್ಬರು ಸಕ್ಸೇನಾ ಪೀಕ್​​ನಲ್ಲಿದ್ದ ಸಂದರ್ಭದಲ್ಲಿ ಆಯ್ಕೆಸಮಿತಿಯಲ್ಲಿದ್ದರು. ಆದರೆ ಕಾಮೆಂಟರಿ ವೇಳೆ ಏನೋ ಅನ್ಯಾಯವಾಗಿದೆ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬುಧವಾರದಿಂದ ಪ್ರಾರಂಭವಾದ 2025-26 ರ ರಣಜಿ ಟ್ರೋಫಿಯ ಭಾಗವಾಗಿ ಕೇರಳ ಮತ್ತು ಮಹಾರಾಷ್ಟ್ರ ನಡುವಿನ ಪಂದ್ಯಕ್ಕೆ ಕಾಮೆಂಟೇಟರ್​ಗಳಾಗಿ ಚೇತನ್ ಶರ್ಮಾ ಹಾಗೂ ಸಲೀಲ್ ಕಾರ್ಯನಿರ್ವಹಿಸಿದ್ದರು.

ಶಾಕಿಂಗ್ ವ್ಯಕ್ತಪಡಿಸಿದ ಕಾಮೆಂಟೇಟರ್ಸ್

ಕೇರಳ ಮತ್ತು ಮಹಾರಾಷ್ಟ್ರ ನಡುವಿನ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ ಮಹಾರಾಷ್ಟ್ರ ಕೇವಲ 5 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಕೇವಲ 18 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಗಾಯಕ್ವಾಡ್ ಜೊತೆಗೂಡಿದ ಜಲಜ್ ಸಕ್ಸೇನಾ ಏಳನೇ ಬ್ಯಾಟರ್ ಆಗಿ ಮೈದಾನಕ್ಕೆ ಬಂದರು. ಈ ಅನುಕ್ರಮದಲ್ಲಿ, ಅವರ ಅಂಕಿಅಂಶಗಳನ್ನು ಟಿವಿಯಲ್ಲಿ ಪ್ರದರ್ಶಿಸಲಾಯಿತು. ದೇಶೀಯ ಕ್ರಿಕೆಟ್‌ನಲ್ಲಿ 7000ಕ್ಕೂ ಹೆಚ್ಚು ರನ್‌ ಹಾಗೂ 450ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವುದು ಕಂಡುಬಂದಿತು.

ಈ ಅಂಕಿ ಅಂಶಗಳನ್ನ ನೋಡಿದ ಕಾಮೆಂಟೇಟರ್​ ಜಲಜ್ ಸಕ್ಸೇನಾ ಅವರಿಗೆ ಒಂದೂ ಅವಕಾಶ ಸಿಗಲಿಲ್ಲವೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ನಂತರ ತಾವೇ ಆಯ್ಕೆ ಸಮಿತಿಯಲ್ಲಿದ್ದದ್ದು ಎಂದು ಪರಸ್ಪರ ತಮಾಷೆಯಾಗಿ ವ್ಯಂಗ್ಯವಾಡಿದರು.

“ಅವರಿಗೆ (ಸಕ್ಸೇನಾ) ಇನ್ನೂ ಟೀಮ್ ಇಂಡಿಯಾ ಪರ ಆಡಲು ಅವಕಾಶ ಸಿಕ್ಕಿಲ್ಲವೇ?” ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಚೇತನ್ ಶರ್ಮಾ ತಕ್ಷಣ ಮಧ್ಯಪ್ರವೇಶಿಸಿ, “ಸಲೀಲ್.. ನೀವು ‘ಆಶ್ಚರ್ಯಕರ’ ಪದವನ್ನು ಬಳಸುತ್ತಿದ್ದೀರಿ. ಆದರೆ ನಾವಿಬ್ಬರೂ ಮಾಜಿ ಆಯ್ಕೆದಾರರು” ಎಂದರು. ತಕ್ಷಣ ಸಲೀಲ್ ತಕ್ಷಣ ನಕ್ಕರು ಮತ್ತು “ನಾನು ಆಯ್ಕೆದಾರನಾಗಿದ್ದರೆ.. ನೀವು ಮುಖ್ಯ ಆಯ್ಕೆದಾರರು” ಎಂದು ಉತ್ತರಿಸಿದರು. ಇಬ್ಬರೂ ನಂತರ ನಗಾಡಿದರು.

ಅಭಿಮಾನಿಗಳಿಂದ ಅಸಮಾಧಾನ

ಪ್ರಸ್ತುತ, ಇದಕ್ಕೆ ಸಂಬಂಧಿಸಿದ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ ಮತ್ತು ನೆಟಿಜನ್‌ಗಳು ಈ ಇಬ್ಬರು ಮಾಜಿ ಆಯ್ಕೆದಾರರ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ನೀವು ಒಬ್ಬ ಮಹಾನ್ ಆಲ್‌ರೌಂಡರ್‌ನ ವೃತ್ತಿಜೀವನವನ್ನು ಹಾಳುಮಾಡಿದ್ದೀರಾ, ಆದರೆ ಈಗ ಅಚ್ಚರಿ ವ್ಯಕ್ತಪಡಿಸುತ್ತಿದ್ದೀರಾ, ಅಲ್ಲದೆ ನಿಮ್ಮ ನೋಡಿ ನಗುತ್ತೀರಾ? ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಆಲ್‌ರೌಂಡರ್

38 ವರ್ಷದ ಜಲಜ್ ಸಕ್ಸೇನಾ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಆಲ್‌ರೌಂಡರ್. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 7000 ಕ್ಕೂ ಹೆಚ್ಚು ರನ್‌ಗಳು ಮತ್ತು 450 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಗಳಿಸಿದ ನಾಲ್ಕನೇ ಆಟಗಾರ. ಅವರಿಗಿಂತ ಮೊದಲು, ಕಪಿಲ್ ದೇವ್, ಮದನ್ ಲಾಲ್ ಮತ್ತು ರವೀಂದ್ರ ಜಡೇಜಾ ಈ ಸಾಧನೆ ಮಾಡಿದ್ದಾರೆ. 2005 ರಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ ಜಲಜ್ ಸಕ್ಸೇನಾ, 150 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದರು, 7060 ರನ್ ಗಳಿಸಿದರು ಮತ್ತು 484 ವಿಕೆಟ್‌ಗಳನ್ನು ಪಡೆದರು. ಆದರೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಗದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಚೇತನ್ ಶರ್ಮಾ 2020 ರಿಂದ 2023 ರವರೆಗೆ ಮುಖ್ಯ ಆಯ್ಕೆದಾರರಾಗಿ ಸೇವೆ ಸಲ್ಲಿಸಿದ್ದರು. ಸಲೀಲ್ ಅಂಕೋಲಾ 2023 ರಿಂದ 2024 ರವರೆಗೆ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಆದರೆ ಇಬ್ಬರೂ ಜಲಜ್ ಸಕ್ಸೇನಾ ಅವರನ್ನು ನಿರ್ಲಕ್ಷಿಸಿದ್ದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Jalaj Saxena: 7000 ರನ್, 450+ ವಿಕೆಟ್! ಪ್ರತಿಭಾನ್ವಿತನಿಗೆ ಒಂದೂ ಅವಕಾಶ ಕೊಡದಿದ್ದಕ್ಕೆ ತಮ್ಮನ್ನ ತಾವೇ ಟ್ರೋಲ್​ ಮಾಡಿಕೊಂಡ ಮಾಜಿ ಆಯ್ಕೆಗಾರರು