Jamie Smith: 14 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲಿಗ! ಸಿಡಿಲಬ್ಬರದ ಹಲವು ದಾಖಲೆ ಬರೆದ ಜೇಮೀ ಸ್ಮಿತ್ | Smith Keeps Record: First Wicketkeeper to Score Test Century in 14 Years

Jamie Smith: 14 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲಿಗ! ಸಿಡಿಲಬ್ಬರದ ಹಲವು ದಾಖಲೆ ಬರೆದ ಜೇಮೀ ಸ್ಮಿತ್ | Smith Keeps Record: First Wicketkeeper to Score Test Century in 14 Years

Last Updated:

ಏಕದಿನ ಶೈಲಿಯ ಬ್ಯಾಟಿಂಗ್ ಆಡುತ್ತಿದ್ದ ಜೇಮೀ ಸ್ಮಿತ್, ಆಟದ ಮೂರನೇ ದಿನದಂದು ಜಡೇಜಾ ಅವರ ಓವರ್‌ನಲ್ಲಿ ಭೋಜನ ವಿರಾಮಕ್ಕೂ ಮುನ್ನ ಕೇವಲ 80 ಎಸೆತಗಳಲ್ಲಿ ಶತಕದ ಗಡಿ ತಲುಪಿದರು. ಈ ಶತಕದೊಂದಿಗೆ, ಜೇಮೀ ಸ್ಮಿತ್ ತಮ್ಮ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ.

ಜೇಮೀ ಸ್ಮಿತ್ಜೇಮೀ ಸ್ಮಿತ್
ಜೇಮೀ ಸ್ಮಿತ್

ಇಂಗ್ಲೆಂಡ್ ವಿಕೆಟ್ ಕೀಪರ್ ಜೇಮೀ ಸ್ಮಿತ್ (Jamie Smith) ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ವೇಳೆ ಇತಿಹಾಸ ಸೃಷ್ಟಿಸಿದ್ದಾರೆ. 14 ವರ್ಷಗಳ ದೀರ್ಘ ಅಂತರದ ನಂತರ, ಭಾರತ ತಂಡದ ವಿರುದ್ಧ ಶತಕ ಗಳಿಸಿದ ಮೊದಲ ಇಂಗ್ಲೆಂಡ್ ವಿಕೆಟ್ ಕೀಪರ್ (Wicket Keeper) ಎನಿಸಿಕೊಂಡಿದ್ದಾರೆ. ಐದು ಟೆಸ್ಟ್‌ಗಳ ಆಂಡರ್ಸನ್-ಸಚಿನ್ ಟ್ರೋಫಿಯ ಭಾಗವಾಗಿ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಜೇಮೀ ಸ್ಮಿತ್ ಶತಕ ಗಳಿಸಿದರು. ಏಕದಿನ ಶೈಲಿಯ ಬ್ಯಾಟಿಂಗ್ ಆಡುತ್ತಿದ್ದ ಜೇಮೀ ಸ್ಮಿತ್, ಆಟದ ಮೂರನೇ ದಿನದಂದು ಜಡೇಜಾ ಅವರ ಓವರ್‌ನಲ್ಲಿ ಭೋಜನ ವಿರಾಮಕ್ಕೂ ಮುನ್ನ ಕೇವಲ 80 ಎಸೆತಗಳಲ್ಲಿ ಶತಕದ ಗಡಿ ತಲುಪಿದರು. ಈ ಶತಕದೊಂದಿಗೆ, ಜೇಮೀ ಸ್ಮಿತ್ ತಮ್ಮ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ.

14 ವರ್ಷಗಳ ನಂತರ ಶತಕ

ಇಂಗ್ಲೆಂಡ್ ವಿಕೆಟ್ ಕೀಪರ್ ಜೇಮೀ ಸ್ಮಿತ್ 14 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಭಾರತದ ವಿರುದ್ಧ ಟೆಸ್ಟ್ ಶತಕ ಗಳಿಸಿದ್ದಾರೆ. ವಿಕೆಟ್ ಕೀಪರ್ ಮ್ಯಾಟ್ ಪ್ರಿಯರ್ (ಅಜೇಯ 103) 2011 ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಶತಕ ಸಿಡಿಸಿದ್ದ ಕೊನೆಯ ವಿಕೆಟ್ ಕೀಪರ್ ಆಗಿದ್ದರು. ಇಲ್ಲಿಯವರೆಗೆ, ಕೇವಲ ನಾಲ್ಕು ಇಂಗ್ಲೆಂಡ್ ವಿಕೆಟ್ ಕೀಪರ್‌ಗಳು ಭಾರತದ ವಿರುದ್ಧ ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. 1952 ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಗಾಡ್ಫ್ರೇ ಇವಾನ್ಸ್ (104) ಇಂಗ್ಲೆಂಡ್ ವಿಕೆಟ್ ಕೀಪರ್ ಆಗಿ ಭಾರತದ ವಿರುದ್ಧ ಶತಕ ಗಳಿಸಿದರು. 1996 ರಲ್ಲಿ ಲಾರ್ಡ್ಸ್‌ನಲ್ಲಿ ಜ್ಯಾಕ್ ರಸೆಲ್ (124) ಶತಕ ಗಳಿಸಿದರು.

ಗಾಡ್ಫ್ರೇ ಇವಾನ್ಸ್ (104), ಲಾರ್ಡ್ಸ್, 1952

ಜ್ಯಾಕ್ ರಸೆಲ್ (124), ಲಾರ್ಡ್ಸ್, 1996

ಮ್ಯಾಟ್ ಪ್ರಿಯರ್ (103*), ಲಾರ್ಡ್ಸ್, 2011

ಜೇಮೀ ಸ್ಮಿತ್ (102*), ಬರ್ಮಿಂಗ್ಹ್ಯಾಮ್, 2025

ನಾಲ್ಕನೇ ಅತಿ ವೇಗದ ಶತಕ

ಇಂಗ್ಲೆಂಡ್ ಪರ ಟೆಸ್ಟ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಜೇಮೀ ಸ್ಮಿತ್ ಪಾತ್ರರಾದರು. ಈ ಮೂಲಕ ಅವರು ಹ್ಯಾರಿ ಬ್ರೂಕ್ ಅವರ ದಾಖಲೆಯನ್ನು ಸರಿಗಟ್ಟಿದರು. ಗಿಲ್ಬರ್ಟ್ ಜೆಸ್ಸಾಪ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 1902 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು 76 ಎಸೆತಗಳಲ್ಲಿ ಶತಕ ಗಳಿಸಿದರು. 2002 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಜಾನಿ ಬೈರ್‌ಸ್ಟೋವ್ 77 ಎಸೆತಗಳಲ್ಲಿ ಶತಕ ಸಿಡಿಸಿದ್ದರು. 2022ರಲ್ಲಿ ಪಾಕಿಸ್ತಾನ ವಿರುದ್ಧ ಹ್ಯಾರಿ ಬ್ರೂಕ್ 80 ಎಸೆತಗಳಲ್ಲಿ ಶತಕ ಸಿಡಿಸಿದ್ದರು. 2015 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಬೆನ್ ಸ್ಟೋಕ್ಸ್ 85 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ಬೃಹತ್ ಸ್ಕೋರ್ ಪಡೆಯುವ ಸನಿಹದಲ್ಲಿ ಇಂಗ್ಲೆಂಡ್

ಮೂರನೇ ದಿನದಾಟವನ್ನು 77/3 ಸ್ಕೋರ್‌ನೊಂದಿಗೆ ಆರಂಭಿಸಿದ ಇಂಗ್ಲೆಂಡ್, ಆರಂಭದಲ್ಲೇ ದೊಡ್ಡ ಆಘಾತವನ್ನು ಅನುಭವಿಸಿತು. ಮೊಹಮ್ಮದ್ ಸಿರಾಜ್, ಜೋ ರೂಟ್ (22) ಮತ್ತು ಬೆನ್ ಸ್ಟೋಕ್ಸ್ (0) ಅವರ ಸತತ ಎಸೆತಗಳಲ್ಲಿ ಪೆವಿಲಿಯನ್ ತಲುಪಿದರು. ಅನುಭವಿಗಳು ಭಾರತೀಯ ಬೌಲರ್‌ಗಳು ಈ ಆರಂಭವನ್ನು ನಿಭಾಯಿಸಲು ವಿಫಲರಾದರು. ಆ ನಂತರ ಒಂದಾದ ಹ್ಯಾರಿ ಬ್ರೂಕ್ ಮತ್ತು ಬೆನ್ ಸ್ಟೋಕ್ಸ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಭಾರತೀಯ ಬೌಲರ್​ಗಳನ್ನ ಧೂಳೀಪಟ ಮಾಡಿದರು. ಇದರೊಂದಿಗೆ, ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 249/5 ಸ್ಕೋರ್‌ ಗಳಿಸಿತು. ಮೊದಲ ಸೆಷನ್‌ನಲ್ಲಿ, ಇಂಗ್ಲೆಂಡ್ 27 ಓವರ್‌ಗಳಲ್ಲಿ 172 ರನ್ ಗಳಿಸಿತು.