Jio AirFiber: ಜಿಯೋ ನಂಬರ್ ಒನ್: ರಾಜ್ಯದಲ್ಲಿ ಬಳಕೆದಾರರ ಸಂಖ್ಯೆ 3,61,122ಕ್ಕೆ ಹೆಚ್ಚಳ!, Jio adds 12 lakh new subscribers in Karnataka leads the market

Jio AirFiber: ಜಿಯೋ ನಂಬರ್ ಒನ್: ರಾಜ್ಯದಲ್ಲಿ ಬಳಕೆದಾರರ ಸಂಖ್ಯೆ 3,61,122ಕ್ಕೆ ಹೆಚ್ಚಳ!, Jio adds 12 lakh new subscribers in Karnataka leads the market

Last Updated:

ಕರ್ನಾಟಕದಲ್ಲಿ ಜಿಯೋ ಸ್ಥಿರ ವೈರ್‌ಲೆಸ್ ಸಂಪರ್ಕದಲ್ಲಿ (FWA) ತನ್ನ ನಾಯಕತ್ವ ಸ್ಥಾನವನ್ನು ಬಲಪಡಿಸುತ್ತಿದ್ದು, ಜಿಯೋ ಏರ್‌ಫೈಬರ್ ಸೇವೆಯು ಸ್ಪಷ್ಟವಾಗಿ ಮಾರುಕಟ್ಟೆ ನಾಯಕನಾಗಿ ಹೊರಹೊಮ್ಮುತ್ತಿದೆ. ಕರ್ನಾಟಕದಲ್ಲಿ ಸಕ್ರಿಯ ಜಿಯೋ ಏರ್‌ಫೈಬರ್ ಬಳಕೆದಾರರ ಸಂಖ್ಯೆ ಏಪ್ರಿಲ್‌ ತಿಂಗಳಿನಲ್ಲಿ 3,61,122 (3.61 ಲಕ್ಷ)ಕ್ಕೆ ಏರಿಕೆಯಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು(ಮೇ 31): ರಿಲಯನ್ಸ್ ಜಿಯೋ ಕರ್ನಾಟಕದಲ್ಲಿ ತನ್ನ ಗಟ್ಟಿಯಾದ ಬೆಳವಣಿಗೆಯ ಹಾದಿಯನ್ನು ಮುಂದುವರಿಸಿದೆ. 2025ರ ಏಪ್ರಿಲ್ ನಲ್ಲಿ 1.2 ಲಕ್ಷ ಹೊಸ ಮೊಬೈಲ್ ಚಂದಾದಾರರನ್ನು ಜಿಯೋ ಸೇರ್ಪಡೆ ಮಾಡಿಕೊಂಡಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ಇತ್ತೀಚಿನ ಮಾಹಿತಿಯ ಪ್ರಕಾರ, ರಾಜ್ಯದ ಎಲ್ಲ ಟೆಲಿಕಾಂ ಆಪರೇಟರ್‌ಗಳ ಪೈಕಿಯೇ ಈ ಸಂಖ್ಯೆ ಅತ್ಯಧಿಕ ಎನಿಸಿಕೊಂಡಿದೆ.

ಕರ್ನಾಟಕದಲ್ಲಿ ಜಿಯೋ ಸ್ಥಿರ ವೈರ್‌ಲೆಸ್ ಸಂಪರ್ಕದಲ್ಲಿ (FWA) ತನ್ನ ನಾಯಕತ್ವ ಸ್ಥಾನವನ್ನು ಬಲಪಡಿಸುತ್ತಿದ್ದು, ಜಿಯೋ ಏರ್‌ಫೈಬರ್ ಸೇವೆಯು ಸ್ಪಷ್ಟವಾಗಿ ಮಾರುಕಟ್ಟೆ ನಾಯಕನಾಗಿ ಹೊರಹೊಮ್ಮುತ್ತಿದೆ. ಕರ್ನಾಟಕದಲ್ಲಿ ಸಕ್ರಿಯ ಜಿಯೋ ಏರ್‌ಫೈಬರ್ ಬಳಕೆದಾರರ ಸಂಖ್ಯೆ ಏಪ್ರಿಲ್‌ ತಿಂಗಳಿನಲ್ಲಿ 3,61,122 (3.61 ಲಕ್ಷ)ಕ್ಕೆ ಏರಿಕೆಯಾಗಿದೆ. ಇದು 2025ರ ಮಾರ್ಚ್ ತಿಂಗಳಿನಲ್ಲಿ 3,38,177 (3.38 ಲಕ್ಷ) ರಷ್ಟಿತ್ತು. ಇನ್ನು ಜಿಯೋದ ಸಂಖ್ಯೆಗೆ ಹೋಲಿಸಿದರೆ ಭಾರ್ತಿ ಏರ್‌ಟೆಲ್ 1,23,393 ಸ್ಥಿರ ವೈರ್‌ಲೆಸ್ ಸಂಪರ್ಕದ ಚಂದಾದಾರರನ್ನು ಹೊಂದಿದೆ.

ಏಪ್ರಿಲ್ ತಿಂಗಳಿನಲ್ಲಿ ದೇಶಾದ್ಯಂತ ಸಕಾರಾತ್ಮಕವಾದ ಸಕ್ರಿಯ ಚಂದಾದಾರರ ಸೇರ್ಪಡೆ ಹೊಂದಿದ ಏಕೈಕ ಟೆಲಿಕಾಂ ಆಪರೇಟರ್ ಕೂಡ ಜಿಯೋ ಆಗಿದೆ. 55 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಬಳಕೆದಾರರ ಸೇರ್ಪಡೆಗಳನ್ನು ಹೊಂದಿದ್ದು, ಇದು ಸತತ ಎರಡನೇ ತಿಂಗಳು 50 ಲಕ್ಷಕ್ಕಿಂತಲೂ ಹೆಚ್ಚು ವಿಎಲ್ಆರ್ (ವಿಸಿಟರ್ ಲೊಕೇಶನ್ ರಿಜಿಸ್ಟರ್) ಸೇರಿಸಿದೆ. ಇದೇ ವೇಳೆ ವಿಐ (Vi) ಮತ್ತು ಬಿಎಸ್ಎನ್ಎಲ್ (BSNL) ಸೇರಿ ಇತರ ಟೆಲಿಕಾಂ ಆಪರೇಟರ್‌ಗಳು ನಿವ್ವಳ ಚಂದಾದಾರರ ಸಂಖ್ಯೆಯಲ್ಲಿ you ಕುಸಿತವನ್ನು ಕಂಡಿವೆ.

ರಾಷ್ಟ್ರೀಯ ಮಟ್ಟದಲ್ಲಿ, ಜಿಯೋ ಶೇ 82ರಷ್ಟು ಪಾಲು ಮತ್ತು 61.4 ಲಕ್ಷ ಚಂದಾದಾರರೊಂದಿಗೆ ಸ್ಥಿರ ವೈರ್‌ಲೆಸ್ ಸಂಪರ್ಕದಲ್ಲಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ.

2025ರ ಏಪ್ರಿಲ್ ತಿಂಗಳಲ್ಲಿ ಒಟ್ಟಾರೆ ಸ್ಥಿರ ಬ್ರಾಡ್‌ಬ್ಯಾಂಡ್ ಬೆಳವಣಿಗೆಗೆ ದಾಖಲೆಯ ತಿಂಗಳಾಗಿದ್ದು, ಜಿಯೋದ ವೈರ್‌ಲೈನ್ ಮತ್ತು ಸ್ಥಿರ ವೈರ್‌ಲೆಸ್ ಸಂಪರ್ಕ ಸೇವೆಗಳಲ್ಲಿ ಸುಮಾರು 9.10 ಲಕ್ಷ ಹೊಸ ಗ್ರಾಹಕರನ್ನು ಸೇರಿಸಲಾಗಿದೆ. ಕೇವಲ 2.30 ಲಕ್ಷ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿರುವ ಏರ್‌ಟೆಲ್‌ಗಿಂತ ಜಿಯೋದ ಈ ಅಂಕಿ- ಅಂಶವು ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ.

ರಾಷ್ಟ್ರೀಯ ಮಟ್ಟದಲ್ಲಿ ಹೇಳಬೇಕು ಅಂದರೆ, ಜಿಯೋ ಏಪ್ರಿಲ್ ನಲ್ಲಿ 26.44 ಲಕ್ಷ ಒಟ್ಟು ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡಿದ್ದು, ಒಟ್ಟು ಬಳಕೆದಾರರ ಸಂಖ್ಯೆಯನ್ನು 47.24 ಕೋಟಿಗೆ ಹೆಚ್ಚಿಸಿದೆ ಮತ್ತು ಮೊಬೈಲ್ ವಿಭಾಗದಲ್ಲಿ ಶೇ 40.76ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಏರ್‌ಟೆಲ್ ಶೇ 33.65ರಷ್ಟು (ಸುಮಾರು 39 ಕೋಟಿ ಬಳಕೆದಾರರು) ಇದ್ದರೆ, ವೊಡಾಫೋನ್ ಐಡಿಯಾ ಶೇ 17.66ರಷ್ಟು (20.47 ಕೋಟಿ ಬಳಕೆದಾರರು) ಹೊಂದಿದೆ. ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಒಟ್ಟಾಗಿ ಶೇ 7.84ರಷ್ಟು ಪಾಲನ್ನು ಹೊಂದಿವೆ.

ಜಿಯೋದ ಬಹಳ ವೇಗವಾದ ನೆಟ್‌ವರ್ಕ್ ವಿಸ್ತರಣೆ, ಕೈಗೆಟುಕುವ ಬೆಲೆಯ ಪ್ಲಾನ್ ಗಳು ಮತ್ತು ಸಂಯೋಜಿತ ಡಿಜಿಟಲ್ ಸೇವೆಗಳು ಕರ್ನಾಟಕ ಮತ್ತು ಭಾರತದ ಉಳಿದ ಭಾಗಗಳಲ್ಲಿ ಮನೆ ಮತ್ತು ಬಿಜಿನೆಸ್ ಸಂಪರ್ಕವನ್ನು ಮರುರೂಪಿಸುತ್ತಾ ಇವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವೇಗದ ಇಂಟರ್ ನೆಟ್ ಬೇಡಿಕೆ ಹೆಚ್ಚುತ್ತಿರುವುದರಿಂದ ಡಿಜಿಟಲ್ ವಿಭಜನೆಯನ್ನು ನಿವಾರಣೆ ಮಾಡುವಲ್ಲಿ ಜಿಯೋ ಪ್ರಮುಖ ಪಾತ್ರ ವಹಿಸುತ್ತಿದೆ.