Joe Root: ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ಗರಿಷ್ಠ ಶತಕ! ಸಂಗಕ್ಕಾರ ಹಿಂದಿಕ್ಕಿ ಹಲವು ಮೈಲುಗಲ್ಲು ನಿರ್ಮಿಸಿದ ರೂಟ್ | Joe Root Breaks Kumar Sangakkara after Scoring Most 100s In Tests | ಕ್ರೀಡೆ

Joe Root: ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ಗರಿಷ್ಠ ಶತಕ! ಸಂಗಕ್ಕಾರ ಹಿಂದಿಕ್ಕಿ ಹಲವು ಮೈಲುಗಲ್ಲು ನಿರ್ಮಿಸಿದ ರೂಟ್ | Joe Root Breaks Kumar Sangakkara after Scoring Most 100s In Tests | ಕ್ರೀಡೆ

Last Updated:

ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ, ಸಚಿನ್ ತೆಂಡೂಲ್ಕರ್ (51), ಜಾಕ್ವೆಸ್ ಕಾಲಿಸ್ (45), ಮತ್ತು ರಿಕಿ ಪಾಂಟಿಂಗ್ (41) ಮಾತ್ರ ಜೋ ರೂಟ್ (39) ಗಿಂತ ಮುಂದಿದ್ದಾರೆ. ಭಾರತದ ವಿರುದ್ಧವೇ ರೂಟ್ 13 ಶತಕ ಸಿಡಿಸಿದ್ದಾರೆ.

ಜೋ ರೂಟ್ಜೋ ರೂಟ್
ಜೋ ರೂಟ್

ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಭಾರತದ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಜೋ ರೂಟ್ (Joe Root) ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾನುವಾರ ಓವಲ್‌ನಲ್ಲಿ ಕೊನೆಗೊಂಡ ಭಾರತ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ 137 ಎಸೆತಗಳಲ್ಲಿ ಶತಕ ಗಳಿಸಿದ ಜೋ ರೂಟ್, ತಮ್ಮ ವೃತ್ತಿಜೀವನದಲ್ಲಿ 39ನೇ ಟೆಸ್ಟ್ ಶತಕವನ್ನು ದಾಖಲಿಸಿದ್ದಾರೆ. ಈ ಮೂಲಕ ಶ್ರೀಲಂಕಾದ ದಂತಕಥೆ ಕುಮಾರ್ ಸಂಗಕ್ಕಾರ (Kumar Sangakkara) ಅವರ 38 ಶತಕಗಳ ದಾಖಲೆಯನ್ನು ಅವರು ಮೀರಿಸಿದ್ದಾರೆ. ಭಾರತ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಸಂಗಕ್ಕಾರ ಅವರ ದಾಖಲೆಯನ್ನು ಸರಿಗಟ್ಟಿದ ಜೋ ರೂಟ್, ಈ ಪಂದ್ಯದಲ್ಲಿ ಶತಕದೊಂದಿಗೆ ಅವರನ್ನು ಮೀರಿಸಿದ್ದಾರೆ.

ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ, ಸಚಿನ್ ತೆಂಡೂಲ್ಕರ್ (51), ಜಾಕ್ವೆಸ್ ಕಾಲಿಸ್ (45), ಮತ್ತು ರಿಕಿ ಪಾಂಟಿಂಗ್ (41) ಮಾತ್ರ ಜೋ ರೂಟ್ (39) ಗಿಂತ ಮುಂದಿದ್ದಾರೆ. ಭಾರತದ ವಿರುದ್ಧವೇ ರೂಟ್ 13 ಶತಕ ಸಿಡಿಸಿದ್ದಾರೆ.

ಅಂತಿಮ ಟೆಸ್ಟ್‌ನಲ್ಲಿ 374 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 106 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಕಠಿಣ ಸಂದರ್ಭಗಳಲ್ಲಿ, ಕ್ರೀಸ್‌ಗೆ ಬಂದ ಜೋ ರೂಟ್, ಹ್ಯಾರಿ ಬ್ರೂಕ್ (111) ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ 195 ರನ್‌ಗಳ ಬೃಹತ್ ಜೊತೆಯಾಟ ಒದಗಿಸಿದರು. ಈ ಪ್ರಕ್ರಿಯೆಯಲ್ಲಿ, ಜೋ ರೂಟ್ ತಮ್ಮ ಹೆಸರಿಗೆ ಹಲವಾರು ದಾಖಲೆಗಳನ್ನು ಬರೆದರು.

ಭಾರತದ ಹೆಚ್ಚು ಬಾರಿ 500+ ಸ್ಕೋರ್

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಅತಿ ಹೆಚ್ಚು 500+ ರನ್ ಗಳಿಸಿದ ಬ್ಯಾಟ್ಸ್‌ಮನ್ ಆದರು. 2021-22ರಲ್ಲಿ ಭಾರತದ ವಿರುದ್ಧದ ಐದು ಟೆಸ್ಟ್ ಸರಣಿಯಲ್ಲಿ ಜೋ ರೂಟ್ 737 ರನ್ ಗಳಿಸಿದ್ದರು. 2014ರಲ್ಲಿ ಭಾರತದ ವಿರುದ್ಧ ಏಳು ಇನ್ನಿಂಗ್ಸ್‌ಗಳಲ್ಲಿ 518 ರನ್ ಮತ್ತು ಇತ್ತೀಚಿನ ಸರಣಿಯಲ್ಲಿ 500+ ರನ್ ಗಳಿಸಿದ್ದರು. ಜೋ ರೂಟ್ 2012ರಲ್ಲಿ ನಾಗ್ಪುರದಲ್ಲಿ ಭಾರತದ ವಿರುದ್ಧ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದರು. ಇದೀಗ 3383ಕ್ಕೂ ಹೆಚ್ಚು ರನ್​ಗಳಿಸಿದ್ದಾರೆ.

ಭಾರತದ ವಿರುದ್ಧ ರೂಟ್ 3 ಬಾರಿ ಈ ಸಾಧನೆ ಮಾಡಿದ್ದಾರೆ. ಇದು ಇತಿಹಾಸದಲ್ಲಿ ಯಾವುದೇ ಆಟಗಾರನಿಂದ ಸಾಧಿತವಾದ ಅತ್ಯಂತ ದಾಖಲೆಯಾಗಿದೆ. ಇವರ್ಟನ್ ವೀಕ್ಸ್, ರಿಕಿ ಪಾಂಟಿಂಗ್, ಗ್ಯಾರಿ ಸೋಬರ್ಸ್ ಮತ್ತು ಯೂನಿಸ್ ಖಾನ್‌ರಂತಹ ಶ್ರೇಷ್ಠ ಆಟಗಾರರನ್ನು ರೂಟ್ ಹಿಂದಿಕ್ಕಿದ್ದಾರೆ, ಇವರೆಲ್ಲರೂ ಈ ಸಾಧನೆಯನ್ನು ಎರಡು ಬಾರಿ ಮಾತ್ರ ಮಾಡಿದ್ದರು.

ತವರಿನಲ್ಲಿ ಒಂದೇ ತಂಡದಿಂದ ಹೆಚ್ಚು 50+ ಸ್ಕೋರ್

ಸರ್ ಡಾನ್ ಬ್ರಾಡ್ಮನ್ (AUS) vs ಇಂಗ್ಲೆಂಡ್ -17

ಹರ್ಬಿ ಟೇಲರ್ (SA) vs ಇಂಗ್ಲೆಂಡ್-17

ಜೋ ರೂಟ್ (ENG) vs ಭಾರತ- 16

  • ಜೋ ರೂಟ್ (ಇಂಗ್ಲೆಂಡ್) ತವರಿನಲ್ಲಿ 24 ಶತಕಗಳನ್ನು ಗಳಿಸಿದ್ದಾರೆ ಮತ್ತು ಒಟ್ಟಾರೆ 39 ಶತಕಗಳನ್ನು  ಸಿಡಿಸಿದ್ದಾರೆ.
  • ಜಾಕ್ವೆಸ್ ಕಲ್ಲಿಸ್ (ದಕ್ಷಿಣ ಆಫ್ರಿಕಾ) ತವರಿನಲ್ಲಿ 23 ಶತಕಗಳನ್ನು ಮತ್ತು ಒಟ್ಟಾರೆ 45 ಶತಕಗಳನ್ನು ಗಳಿಸಿದ್ದಾರೆ.
  • ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) ಕೂಡ ತವರಿನಲ್ಲಿ 23 ಶತಕಗಳನ್ನು ಮತ್ತು ಒಟ್ಟಾರೆ 41 ಶತಕಗಳನ್ನು ದಾಖಲಿಸಿದ್ದಾರೆ.
  • ಮಹೇಲಾ ಜಯವರ್ಧನೆ (ಶ್ರೀಲಂಕಾ) ತವರಿನಲ್ಲಿ 23 ಶತಕಗಳನ್ನು ಮತ್ತು ಒಟ್ಟಾರೆ 34 ಶತಕಗಳನ್ನು ಗಳಿಸಿದ್ದಾರೆ.
  • ಸಚಿನ್ ತೆಂಡೂಲ್ಕರ್ (ಭಾರತ) ತವರಿನಲ್ಲಿ 22 ಶತಕಗಳನ್ನು ಮತ್ತು ಒಟ್ಟಾರೆ 51 ಶತಕಗಳನ್ನು ಗಳಿಸಿದ್ದಾರೆ.
  • ಕುಮಾರ ಸಂಗಕ್ಕಾರ (ಶ್ರೀಲಂಕಾ) ತವರಿನಲ್ಲಿ 22 ಶತಕಗಳನ್ನು ಮತ್ತು ಒಟ್ಟಾರೆ 38 ಶತಕಗಳನ್ನು ದಾಖಲಿಸಿದ್ದಾರೆ.