Last Updated:
ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಂದ್ಯದಲ್ಲಿ 28 ರನ್ ಗಳಿಸುವ ಮೂಲಕ ರೂಟ್, ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ರ (Sachin Tendulkar) 1575 ರನ್ಗಳ ದಾಖಲೆಯನ್ನು ಮುರಿದರು.
ಲೀಡ್ಸ್ನ ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲಂಡ್ನ ಸ್ಟಾರ್ ಬ್ಯಾಟ್ಸ್ಮನ್ ಜೋ ರೂಟ್ (Joe Root) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ vs ಭಾರತ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಇಗ್ಲೆಂಡ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ರೂಟ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಪಂದ್ಯದಲ್ಲಿ 28 ರನ್ ಗಳಿಸುವ ಮೂಲಕ ರೂಟ್, ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ರ (Sachin Tendulkar) 1575 ರನ್ಗಳ ದಾಖಲೆಯನ್ನು ಮುರಿದರು. ರೂಟ್ ಈಗ ಇಂಗ್ಲೆಂಡ್ನಲ್ಲಿ ಭಾರತ ವಿರುದ್ಧ 16 ಟೆಸ್ಟ್ಗಳಲ್ಲಿ 1579 ರನ್ಗಳನ್ನು ಗಳಿಸಿ ಟಾಪ್ ಸ್ಕೋರರ್ ಆಗಿದ್ದಾರೆ.
ಆದರೆ, ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ರೂಟ್ ದೊಡ್ಡ ರನ್ ಗಳಿಸಲು ವಿಫಲರಾದರು. ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ಕೇವಲ 28 ರನ್ ಗಳಿಸಿ ಔಟ್ ಮಾಡಿದರು. ರೂಟ್ರ ಈ ಸಾಧನೆಯ ಹೊರತಾಗಿಯೂ, ಇಂಗ್ಲೆಂಡ್ ತಂಡ ಭಾರತಕ್ಕೆ ಬಲವಾದ ಪೈಪೋಟಿ ನೀಡುತ್ತಿದೆ.
ಇಂಗ್ಲೆಂಡ್ನಲ್ಲಿ ಭಾರತ vs ಇಂಗ್ಲೆಂಡ್ ಟೆಸ್ಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು:
ಜೋ ರೂಟ್ (ಇಂಗ್ಲೆಂಡ್) – 1579 ರನ್* (16 ಟೆಸ್ಟ್)
ಸಚಿನ್ ತೆಂಡೂಲ್ಕರ್ (ಭಾರತ) – 1575 ರನ್ (17 ಟೆಸ್ಟ್)
ರಾಹುಲ್ ದ್ರಾವಿಡ್ (ಭಾರತ) – 1376 ರನ್
ಅಲಸ್ಟೇರ್ ಕುಕ್ (ಇಂಗ್ಲೆಂಡ್) – 1196 ರನ್
ಸುನಿಲ್ ಗವಾಸ್ಕರ್ (ಭಾರತ) – 1152 ರನ್
ಗ್ರಹಾಂ ಗೂಚ್ (ಇಂಗ್ಲೆಂಡ್) – 1134 ರನ್
ಪಂದ್ಯದ ವಿವರ
ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 471 ರನ್ಗೆ ಆಲ್ಔಟ್ ಆಗಿದೆ. ಯಶಸ್ವಿ ಜೈಸ್ವಾಲ್ (101), ಶುಭಮನ್ ಗಿಲ್ (147), ಮತ್ತು ರಿಷಭ್ ಪಂತ್ (134) ಶತಕಗಳನ್ನು ಬಾರಿಸಿ ತಂಡಕ್ಕೆ ಉತ್ತಮ ಮೊತ್ತ ದಾಖಲಿಸಲು ನೆರವಾದರು. ಕೆಎಲ್ ರಾಹುಲ್ 42 ರನ್ಗಳಿಸಿದರು. ಇಂಗ್ಲೆಂಡ್ನ ಬೌಲರ್ಗಳಾದ ಬೆನ್ ಸ್ಟೋಕ್ಸ್ ಮತ್ತು ಜೋಶ್ ಟಾಂಗ್ ತಲಾ ನಾಲ್ಕು ವಿಕೆಟ್ಗಳನ್ನು ಪಡೆದರು.
ಇಂಗ್ಲೆಂಡ್ನ ಮೊದಲ ಇನ್ನಿಂಗ್ಸ್
ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 60 ಓವರ್ಗಳಲ್ಲಿ 4 ವಿಕೆಟ್ಗೆ 255 ರನ್ ಗಳಿಸಿತು. 2ನೇ ದಿನ ಶತಕ ಸಿಡಿಸಿದ್ದ ಒಲಿವರ್ ಪೋಪ್ (137 ಎಸೆತ, 106 ರನ್, 14 ಬೌಂಡರಿ) ಇಂದು ಪ್ರಸಿಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಪ್ರಸ್ತತ ಕ್ರೀಸ್ನಲ್ಲಿ ಹ್ಯಾರಿ ಬ್ರೂಕ್ 40, ಬೆನ್ ಸ್ಟೋಕ್ಸ್ 20 ರನ್ಗಳಿಸಿ 50 ರನ್ಗಳ ಜೊತೆಯಾಟದೊಂದಿಗೆ ಮುನ್ನಡೆಯುತ್ತಿದ್ದಾರೆ. ನಿನ್ನೆ ಬೆನ್ ಡಕೆಟ್ 94 ಎಸೆತಗಳಲ್ಲಿ 62 ರನ್ (9 ಬೌಂಡರಿ) , ಜಾಕ್ ಕ್ರಾಲಿ (4) ಹಾಗೂ ಜೋ ರೂಟ್ (25) ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ವಿಕೆಟ್ ಒಪ್ಪಿಸಿದ್ದಾರೆ.
June 22, 2025 4:59 PM IST