Kambala: ಮಂಗಳೂರು ಕಂಬಳ ನೋಡಿ ಖುಷಿಪಟ್ಟ ಲಕ್ಷಾಂತರ ಮಂದಿ! | Urban people of Mangaluru city watch Kambala sport

Kambala: ಮಂಗಳೂರು ಕಂಬಳ ನೋಡಿ ಖುಷಿಪಟ್ಟ ಲಕ್ಷಾಂತರ ಮಂದಿ! | Urban people of Mangaluru city watch Kambala sport

ಕಂಬಳ ವೀಕ್ಷಣೆಯಿಂದ ವಂಚಿತರಾಗುತ್ತಿದ್ದ ನಗರವಾಸಿಗಳು

ತುಳುನಾಡಿದ ಜಾನಪದ ಕ್ರೀಡೆ ಕಂಬಳ ಕೇವಲ ಗ್ರಾಮೀಣ ಪ್ರದೇಶಕ್ಕೆ‌ ಮಾತ್ರ ಸೀಮಿತ ಅನ್ನೋ ಮಾತಿತ್ತು.ಆದ್ರೆ ಇದೀಗ ನಗರದಲ್ಲೂ ಕಂಬಳ ನಡೆಯುತ್ತೆ, ಅದಕ್ಕೆ ಲಕ್ಷಾಂತರ ಮಂದಿ ಸೇರುತ್ತಾರೆ ಅನ್ನೋದು ಮಂಗಳೂರು ಕಂಬಳದಲ್ಲಿ ಸಾಬೀತಾಗಿದೆ. ಹೌದು ಹಿಂದೆಲ್ಲ ಗ್ರಾಮೀಣ ಪ್ರದೇಶದಲ್ಲಿ‌ ಮಾತ್ರ ಕಂಬಳ ನಡೆಯುತ್ತಿದ್ದು ಅದಕ್ಕೆ ಪುರುಷರು ಮಾತ್ರ ಹೋಗೋದು ವಾಡಿಕೆಯಾಗಿತ್ತು. ನಗರವಾಸಿಗಳು ಗ್ರಾಮೀಣ ಪ್ರದೇಶಕ್ಕೆ ಕಂಬಳ ವೀಕ್ಷಿಸಲು ಹೋಗುತ್ತಿರಲಿಲ್ಲ. ಹೀಗಾಗಿ ನಗರವಾಸಿಗಳು ಕಂಬಳ ವೀಕ್ಷಣೆಯಿಂದ ವಂಚಿತರಾಗುತ್ತಿದ್ದರು. ಈ ಕಾರಣಕ್ಕಾಗಿಯೇ ಕಳೆದ ಏಳು ವರ್ಷದ ಹಿಂದೆ ನಿವೃತ್ತ ಸೈನಿಕ ಬ್ರಿಜೇಶ್ ಚೌಟ ನೇತೃತ್ವದ ಯುವಕರ ತಂಡ ಮಂಗಳೂರಿನ‌ ಬಂಗ್ರ ಕೂಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ ಕಂಬಳವನ್ನು ಆರಂಭಗೊಳಿಸಿದರು. ಇದೀಗ ಲಕ್ಷಾಂತರ ಮಂದಿ‌ ಸೇರೋ ಅದ್ದೂರಿ ಕಂಬಳವಾಗಿದೆ.

ಕಂಬಳ ನೋಡಿದ ಲಕ್ಷಾಂತರ ಮಂದಿ

ಕಂಬಳ ಆರಂಭಿಸಿದ್ದ ಕ್ಯಾಪ್ಟನ್‌ ಬ್ರಿಜೇಶ್ ಚೌಟ ಈ ವರ್ಷ ಸಂಸದರಾಗಿ ಎಂಟನೇ ವರ್ಷದ ರಾಮ-ಲಕ್ಷ್ಮಣ ಜೋಡುಕರೆ ಕಂಬಳವನ್ನ ನಡೆಸಿದ್ದಾರೆ. ಸಂಸದರ ಅಧ್ಯಕ್ಷತೆಯಲ್ಲಿ ನಡೆಯುವ ಏಕೈಕ ಕಂಬಳ ಅನ್ನೋ ಹೆಮ್ಮೆಗೂ ಈ ವರ್ಷದ ಮಂಗಳೂರು ಕಂಬಳ ಪಾತ್ರವಾಗಿದೆ. ಸಿಟಿಯೊಳಗೆ ನಡೆಯುವ ಈ ಕಂಬಳಕ್ಕೆ ಈ ಬಾರಿಯೂ ದೇಶ ವಿದೇಶಗಳಿಂದ ಬಂದ ಲಕ್ಷಾಂತರ ಮಂದಿ ಕಂಬಳವನ್ನು ಪ್ರಶಂಸಿಸಿದರು. ತುಳುನಾಡಿನ ಜಾನಪದ ಕ್ರೀಡೆಯನ್ನು ಉಳಿಸಿ ಬೆಳೆಸಬೇಕು. ಜೊತೆಗೆ ನಗರವಾಸಿಗಳೂ ಕಂಬಳದಿಂದ ವಂಚಿತರಾಗಬಾರದು ಅನ್ನೋದು ಆಯೋಜಕರ ಆಶಯ.

ಕಂಬಳವನ್ನು ಹಾಡಿ- ಹೊಗಳಿದ ಜನರು

ಕಂಬಳ ಅನ್ನೋದು ವಯಸ್ಸಾದವರಿಗೆ, ಪುರುಷರಿಗೆ ಮಾತ್ರ ಅನ್ನೋ ಕಾಲವಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರೂ ಕಂಬಳಕ್ಕೆ ಆಗಮಿಸುತ್ತಿದ್ದಾರೆ. ಕಂಬಳ ಅಂದ್ರೆ ಸಿನಿಮಾದಲ್ಲೋ, ಮೊಬೈಲ್‌ನಲ್ಲೋ ನೋಡುತ್ತಿದ್ದ ನಗರವಾಸಿಗಳೂ ಕಂಬಳವನ್ನು ಕಣ್ಣಾರೆ ಕಾಣಬೇಕೆಂಬ ಆಸೆಯಿಂದ ನಗರದೊಳಗಾದ ಕಂಬಳವನ್ನು ವೀಕ್ಷಿಸಲು ಬಂದಿದ್ದರು. ಯುವಕ -ಯುವತಿಯರೇ ಅತೀ ಹೆಚ್ಚು ಸಂಖ್ಯೆಯಲ್ಲಿ ಬಂದು ಈ ಕಂಬಳವನ್ನು ವೀಕ್ಷಿಸಿದರು. ನಮ್ಮ ಸಂಸ್ಕೃತಿ, ಕಲೆ, ಜಾನಪದ ಕ್ರೀಡೆ ಹೀಗೂ ಇರುತ್ತಲ್ಲಾ ಎಂದು ನಗರ ಪ್ರದೇಶದ ಜನ ಕಂಬಳವನ್ನು ಹಾಡಿ ಹೊಗಳಿದರು.

ಈ‌ ಕಂಬಳ ಎರಡು ದಿನಗಳ ಕಾಲ ನಿರಂತರವಾಗಿ ರಾತ್ರಿ- ಹಗಲು ಹೊನಲು ಬೆಳಕಿನಲ್ಲಿ ನಡೆಯಿತು. ಎಲ್ಲಾ ವಿಭಾಗಗಳಲ್ಲೂ ಪ್ರಥಮ ಸ್ಥಾನಕ್ಕೆ 2 ಪವನ್ ಚಿನ್ನ, ಎರಡನೇ ಸ್ಥಾನಕ್ಕೆ ಒಂದು ಪವನ್ ಚಿನ್ನವನ್ನು ಬಹುಮಾನವನ್ನಾಗಿ ಕೊಡಲಾಗುತ್ತದೆ‌. ಒಟ್ಟಿನಲ್ಲಿ ಕಂಬಳ ನಗರ ಪ್ರದೇಶದ ಜನರನ್ನೂ ಹೆಚ್ಚು ಹೆಚ್ಚು ಆಕರ್ಷಿಸುತ್ತಿದೆ ಅನ್ನೋದಕ್ಕೆ ಇಲ್ಲಿ ಸೇರಿದ ಅಪಾರ ಜನಸ್ತೋಮವೇ ಸಾಕ್ಷಿಯಾಗಿದೆ.

ಇದನ್ನೂ ಓದಿ: Kolar: ಅದ್ದೂರಿಯಾಗಿ ನೆರವೇರಿದ ಬ್ಯಾಟರಾಯನಸ್ವಾಮಿ ಬ್ರಹ್ಮರಥೋತ್ಸವ!

ಬಂಗ್ರ ಕೂಳೂರು, ಮಂಗಳೂರು “ರಾಮ – ಲಕ್ಷ್ಮಣ” ಜೋಡುಕರೆ ಕಂಬಳ ಕೂಟದ ಫಲಿತಾoಶ

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 07 ಜೊತೆ

ಅಡ್ಡಹಲಗೆ: 08 ಜೊತೆ

ಹಗ್ಗ ಹಿರಿಯ: 20 ಜೊತೆ

ನೇಗಿಲು ಹಿರಿಯ: 32 ಜೊತೆ

ಹಗ್ಗ ಕಿರಿಯ: 23 ಜೊತೆ

ನೇಗಿಲು ಕಿರಿಯ: 81 ಜೊತೆ

ಒಟ್ಟು ಕೋಣಗಳ ಸಂಖ್ಯೆ: 171 ಜೊತೆ

••••••••••••••••••••••••••••••••••••••••••••••

ಕನೆಹಲಗೆ:

( ಸಮಾನ ಬಹುಮಾನ )

ಬೊಳ್ಳಂಬಳ್ಳಿ ಶ್ರೀ ರಾಮ ಚೈತ್ರ ಪರಮೇಶ್ವರ ಭಟ್

ಹಲಗೆ ಮುಟ್ಟಿದವರು: ಭಟ್ಕಳ ಪಾಂಡು

ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ

ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ

ಹಲಗೆ ಮುಟ್ಟಿದವರು: ಭಟ್ಕಳ ಪಾಂಡು

ವಾಮಂಜೂರು ತಿರುವೈಲುಗುತ್ತು ಅಭಿಷೇಕ್ ನವೀನ್ಚಂದ್ರ ಆಳ್ವ

ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ಬೋಳಾರ ತ್ರಿಶಾಲ್ ಕೆ ಪೂಜಾರಿ

ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಮುದ್ದುಮನೆ ಭರತ್ ನಾಯ್ಕ್

ಬಾರ್ಕೂರು ಶಾಂತಾರಾಮ ಶೆಟ್ಟಿ

ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ನಿಡ್ಡೋಡಿ ಕಾನ ರಾಮ ಸುವರ್ಣ

ಹಲಗೆ ಮುಟ್ಟಿದವರು: ಕೊಕ್ಕರ್ಣೆ ವಡಾಪಿ ಸುರೇಶ್ ನಾಯ್ಕ್

••••••••••••••••••••••••••••••••••••••••••••••

ಅಡ್ಡ ಹಲಗೆ:

ಪ್ರಥಮ: ನಾರಾವಿ ಯುವರಾಜ್ ಜೈನ್ ಕಂಬಳಾಭಿಮಾನಿ ವಕೀಲರ ವೃಂದ ಮಂಗಳೂರು “ಎ”

ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ನಾರಾವಿ ಯುವರಾಜ್ ಜೈನ್ ಕಂಬಳಾಭಿಮಾನಿ ವಕೀಲರ ವೃಂದ ಮಂಗಳೂರು “ಬಿ”

ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

••••••••••••••••••••••••••••••••••••••••••••••

ಹಗ್ಗ ಹಿರಿಯ:

ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಎ” (11.86)

ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ “ಬಿ” (12.06)

ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

••••••••••••••••••••••••‌‌‌‌‌••••••••••••••••••••••

ಹಗ್ಗ ಕಿರಿಯ:

ಪ್ರಥಮ: ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ (11.72)

ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ದ್ವಿತೀಯ: 80 ಬಡಗ ಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ “ಬಿ” (11.90)

ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

••••••••••••••••••••••••••••••••••••••••••••••

ನೇಗಿಲು ಹಿರಿಯ:

ಪ್ರಥಮ: ಬೋಳದ ಗುತ್ತು ಸತೀಶ್ ಶೆಟ್ಟಿ “ಬಿ” (11.53)

ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ದ್ವಿತೀಯ: ಮಂಗಳೂರು ಬಜಾಲ್ ಶೈಲೇಶ್ ಶೆಟ್ಟಿ (11.59)

ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

••••••••••••••••••••••••••••••••••••••••••••••

ನೇಗಿಲು ಕಿರಿಯ:

ಪ್ರಥಮ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ “ಎ” (11.80)

ಓಡಿಸಿದವರು: ಪಟ್ಟೆ ಗುರು ಚರಣ್

ದ್ವಿತೀಯ: ಮುನಿಯಾಲು ಉದಯ ಕುಮಾರ್ ಶೆಟ್ಟಿ “ಎ” (12.46)

ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್

••••••••••••••••••••••••••••••••••••••••••••••