Last Updated:
ಪುತ್ತೂರು ಕಂಬಳದಲ್ಲಿ ಪೃಥ್ವಿರಾಜ್ ಪೂಜಾರಿ ನೇತೃತ್ವದ ಕೋಣಗಳು 125 ಮೀಟರ್ ಅನ್ನು 10.65 ಸೆಕೆಂಡುಗಳಲ್ಲಿ ದಾಟಿ ಹೊಸ ವೇಗದ ದಾಖಲೆ ನಿರ್ಮಿಸಿವೆ.
ದಕ್ಷಿಣಕನ್ನಡ: ಕಂಬಳದ ಕರೆಯಲ್ಲಿ ಅತಿವೇಗದ ಓಟಗಾರನೆಂಬ (Runner) ದಾಖಲೆ ತಿಂಗಳ ಅಂತರದಲ್ಲೇ ಮುರಿದಿದ್ದು, ಪುತ್ತೂರು ಕಂಬಳದಲ್ಲಿ ಹೊಸ ದಾಖಲೆ (Record) ಸೃಷ್ಟಿಯಾಗಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ (Paddy Field) ಜನವರಿ 24 ಮತ್ತು 25 ರಂದು ನಡೆದ ಕೋಟಿ-ಚೆನ್ನಯ ಜೋಡು ಕರೆ ಕಂಬಳದಲ್ಲಿ (Kambala) ಹೊಸ ವೇಗದ ದಾಖಲೆ ನಿರ್ಮಾಣಗೊಂಡಿದೆ.
ಶ್ರೀ ಪಂಚಲಿಂಗೇಶ್ವರ ಉರುವಾಲು ನಾರಾಳುಗುತ್ತು ಸದಾನಂದ ಗೌಡ ಅವರ ಕುಟ್ಟಿ-ಕಾಲೆ ಕೋಣಗಳ ಜೋಡಿ ನೇಗಿಲು ಕಿರಿಯ ವಿಭಾಗದಲ್ಲಿ ಹೊಸ ದಾಖಲೆ ಸೃಷ್ಟಿಸಿವೆ. ಈ ಕೋಣಗಳನ್ನು ಪಡು ಸಾಂತೂರು ಪೃಥ್ವಿರಾಜ್ ಪೂಜಾರಿ ಎಂಬ 22 ವರ್ಷ ಪ್ರಾಯದ ಯುವಕ ಓಡಿಸಿದ್ದು, ಕಂಬಳ ಕರೆಯ ವೇಗದ ಓಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಈ ಕೋಣಗಳು 125 ಮೀಟರ್ ಉದ್ದದ ಕರೆಯನ್ನು 10.65 ಸೆಕೆಂಡ್ಗಳಲ್ಲಿ ಕ್ರಮಿಸಿ ಗುರಿ ಮುಟ್ಟಿವೆ. ಅರ್ಥಾತ್ 100 ಮೀಟರ್ ದೂರವನ್ನು 8.52 ಸೆಕೆಂಡ್ಗಳಲ್ಲಿ ತಲುಪಿದಂತಾಗಿದೆ. ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ರಾಮ-ಲಕ್ಷ್ಮಣ ಜೋಡುಕರೆ ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಫೈನಲ್ಸ್ನಲ್ಲಿ ಶ್ರೀಕಾ ಸಂದೀಪ್ ಶೆಟ್ಟಿ ಅವರ ಗಾಂಧಿ ಮೈದಾನ ಸಂತು-ಸುರತ್ಕಲ್ ಪಾಂಚ ಕೋಣಗಳು 125 ಮೀಟರ್ ದೂರವನ್ನು 10.87 ಸೆಕೆಂಡ್ಗಳಲ್ಲಿ ಕ್ರಮಿಸಿದ್ದವು. ಅರ್ಥಾತ್ 100 ಮೀಟರ್ ದೂರವನ್ನು 8.69 ಸೆಕೆಂಡ್ಗಳಲ್ಲಿ ಕ್ರಮಿಸಿದಂತಾಗಿತ್ತು.
ಪ್ರಥ್ವಿರಾಜ್ ಪೂಜಾರಿ
ಕುಂದ ಬಾರಂದಾಡಿ ಮಾಸ್ತಿಕಟ್ಟೆಯ ಸ್ವರೂಪ್ ಕುಮಾರ್ ಓಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದರು. ಒಂದೇ ತಿಂಗಳಲ್ಲಿ ಇದೀಗ ಪುತ್ತೂರು ಕಂಬಳದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಕಂಬಳದ ಅತಿವೇಗದ ಓಟಗಾರ ಎಂಬ ದಾಖಲೆಯನ್ನು ಮೊದಲು 2021ರಲ್ಲಿ ಮಿಜಾರು ಅಶ್ವತ್ಥಪುರದ ಶ್ರೀನಿವಾಸ ಗೌಡ ನಿರ್ಮಿಸಿದ್ದರು. ಆಗ ಅವರನ್ನು ಕಂಬಳ ಕರೆಯ ಉಸೈನ್ ಬೋಲ್ಟ್ ಎಂದು ವ್ಯಾಖ್ಯಾನಿಸಲಾಗಿತ್ತು.
ಸತತ ಮೂರು ವರ್ಷದಿಂದ ಕಂಬಳದಲ್ಲಿ ಪಳಗಿದ ಇಂಜಿನಿಯರ್!
Dakshina Kannada,Karnataka