Kambala: ಕಂಬಳದಲ್ಲಿ ಹಲವು ವಿಶೇಷತೆ ಅಳವಡಿಸಿದ ಪುತ್ತೂರು, ಈ ಆಟ ಆಯೋಜನೆ ಮೂಲಕ ಸದ್ದು ಮಾಡಿದ ಊರು! | Puttur Kambala | ಮಂಗಳೂರು ನ್ಯೂಸ್ (Mangaluru News)

Kambala: ಕಂಬಳದಲ್ಲಿ ಹಲವು ವಿಶೇಷತೆ ಅಳವಡಿಸಿದ ಪುತ್ತೂರು, ಈ ಆಟ ಆಯೋಜನೆ ಮೂಲಕ ಸದ್ದು ಮಾಡಿದ ಊರು! | Puttur Kambala | ಮಂಗಳೂರು ನ್ಯೂಸ್ (Mangaluru News)

Last Updated:

ಪುತ್ತೂರು ಕಂಬಳದಲ್ಲಿ ಈ ಬಾರಿ ರಿಲೇ ಆಟ ಆಯೋಜನೆ, ಟೈಮಿಂಗ್ ತಂತ್ರಜ್ಞಾನ ಬಳಕೆ, ಓಟಗಾರರಿಗೆ ಅವಕಾಶ, ಕೋಣಗಳ ಮಾಲಕರಿಗೆ ಗೌರವ ಪ್ರಶಸ್ತಿ ಸೇರಿದಂತೆ ಹಲವು ವಿಶೇಷತೆಗಳು ದಾಖಲೆಗೊಂಡಿವೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಕಂಬಳದಲ್ಲಿ (Kambala) ಹಲವು ವಿಶೇಷತೆಗಳನ್ನು, ವಿನೂತನ ಪ್ರಯೋಗಗಳನ್ನು ಪರಿಚಯಿಸಿರುವ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Putturu) ಮಹಾಲಿಂಗೇಶ್ವರ ದೇವರಮಾರು ಗದ್ದೆಯಲ್ಲಿ ನಡೆಯುವ ಪುತ್ತೂರು ಕಂಬಳದಲ್ಲಿ ಈ ಬಾರಿಯೂ ವಿಶೇಷತೆಯೊಂದು ದಾಖಲಾಗಿದೆ (Record). ಕಂಬಳ ಕೆರೆಯಲ್ಲಿ ಕೋಣಗಳ ಜೊತೆಗೆ ಓಟಗಾರರನ್ನೂ ಓಡಿಸಿದ್ದ ಪುತ್ತೂರು ಕಂಬಳ ಸಮಿತಿ ಈ ಬಾರಿ ರಿಲೇ  ಆಟವನ್ನು ಆಯೋಜಿಸುವ ಮೂಲಕ ಸುದ್ದಿಯಲ್ಲಿದೆ.

ಅದ್ಧೂರಿ ಕಂಬಳ

ಕಳೆದ 33 ವರ್ಷಗಳಿಂದ ಕಂಬಳವನ್ನು ಆಯೋಜಿಸಿಕೊಂಡು ಬರುತ್ತಿರುವ ಪುತ್ತೂರು ಕಂಬಳ ಸಮಿತಿ ಈ ಬಾರಿ ಮತ್ತೆ ಅದ್ಧೂರಿಯಾಗಿ ಕಂಬಳವನ್ನು ಆಯೋಜಿಸಿತ್ತು. ಇಲ್ಲಿ ಕಂಬಳ ಆರಂಭಗೊಂಡ ಬಳಿಕ ಕಂಬಳಕ್ಕರ ಅತೀ ಅಗತ್ಯವಾಗಿ ಬೇಕಾದಂತಹ ಹಲವು ವ್ಯವಸ್ಥೆಗಳು ಇದೇ ಕಂಬಳದ ಮೂಲಕ ಹೊರ ಜಗತ್ತಿಗೆ ಪರಿಚಯವಾಗಿದೆ.

ಟೈಮಿಂಗ್ ತಂತ್ರಜ್ಞಾನ ಅಳವಡಿಕೆ

ಕಂಬಳದ ಎರಡೂ ಕೆರೆಗಳಲ್ಲಿ ಏಕಕಾಲಕ್ಕೆ ಓಡುವ ಕೋಣಗಳ ಪೈಕಿ ಕೆಲವು ಸಂದರ್ಭಗಳಲ್ಲಿ ಸೆಕೆಂಡ್ ಗಳ ಅಂತರದ ಪ್ರದರ್ಶನವಿರುತ್ತವೆ. ಆ ಸಂದರ್ಭದಲ್ಲಿ ನಿಖರವಾಗಿ ಸಮಯವನ್ನು ಗ್ರಹಿಸುವಂತಹ ಯಾವುದೇ ವ್ಯವಸ್ಥೆ ಕಂಬಳಗಳಲ್ಲಿ ಇರಲಿಲ್ಲ. ಇದರಿಂದಾಗಿ ಹಲವು ಬಾರಿ ಇದೇ ವಿಚಾರವಾಗಿ ಹಲವು ಬಾರಿ ಟೈಮಿಂಗ್ ವಿಚಾರದಲ್ಲಿ ತಕರಾರು ಕೂಡ ನಡೆಯುತ್ತಿತ್ತು. ಈ ಕಾರಣಕ್ಕಾಗಿ ಕಂಬಳ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಟೈಮಿಂಗ್ ತಂತ್ರಜ್ಞಾನವನ್ನು ಬಳಸಿದ್ದು ಇದೇ ಪುತ್ತೂರು ಕಂಬಳದಲ್ಲಾಗಿತ್ತು. ಆ ಬಳಿಕ ಈ ವ್ಯವಸ್ಥೆಯನ್ನು ಉಡುಪಿಯನ್ನೊಳಗೊಂಡ ಅವಿಭಜಿತ ಜಿಲ್ಲೆಗಳಲ್ಲಿ ಬಳಸಲಾಗಿತ್ತು.

ಓಟದ ಸ್ಪರ್ಧೆ

ಅದೇ ರೀತಿ ಕಂಬಳ ಕೋಣಗಳ ಓಟದ ಮಧ್ಯೆ ಸ್ಥಳೀಯ ಓಟಗಾರರಿಗೆ ಕಂಬಳ ಕೆರೆಯಲ್ಲಿ ಓಟದ ಸ್ಪರ್ಧೆಗೂ ಅವಕಾಶವನ್ನು ಮಾಡಲಾಗಿತ್ತು. ಕಂಬಳ ಕೆರೆಯಲ್ಲಿ ಓಟಕ್ಕಾಗಿ ಹಲವು ಯುವಕರು ಆಸಕ್ತಿಯಿಂದ ಪಾಲ್ಗೊಂಡಿದ್ದರು. ಕಂಬಳ ಕ್ರೀಡೆಯ ಜೊತೆಗೆ ಓಟಗಾರರಿಗೂ ಉತ್ತೇಜನ ನೀಡುವ ಪ್ರಯತ್ನವನ್ನು ಮಾಡಿದ್ದ ಪುತ್ತೂರು ಕಂಬಳ ಸಮಿತಿ ತನ್ನ 33 ನೇ ವರ್ಷದ ಪುತ್ತೂರು ಕಂಬಳದಲ್ಲಿ ಮತ್ತೊಂದು ಪ್ರಯೋಗಕ್ಕೆ ಕೈ ಹಾಕಿದೆ.

ರಿಲೇ ಆಟ ಆಯೋಜನೆ

ರಿಲೇ ಆಟವನ್ನು ಆಯೋಜಿಸುವ ಮೂಲಕ ಓಟಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿದೆ. ಕಂಬಳ ಓಟಗಾರರ ಜೊತೆಗೆ ಅವಿಭಜಿತ ಜಿಲ್ಲೆಗಳಿಂದ ನೂರಕ್ಕೂ ಮಿಕ್ಕಿದ ಓಟಗಾರರು ಈ ರಿಲೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದಿದ್ದಾರೆ. ಕಂಬಳದಲ್ಲಿ ಭಾಗವಹಿಸುವ ಎಲ್ಲಾ ಕೋಣಗಳ ಮಾಲಕರಿಗೆ ಗೌರವ ಪ್ರಶಸ್ತಿ ಜೊತೆಗೆ ಪದಕಗಳನ್ನೂ ನೀಡುವ ಮೂಲಕ ಕಾರ್ಯವನ್ನೂ ಪುತ್ತೂರು ಕಂಬಳ ಮಾಡಿದೆ.