Kannada Cinema: ತುಳು ಮೇಷ್ಟ್ರಾದ ರಾಜ್‌ ಶೆಟ್ರು, ಮಾಲ್‌ ನಲ್ಲಿ ಭರ್ಜರಿ ಹುಲಿ ಕುಣಿತ; ಜನ್ಯಾಜೀ ಬಂದ್ರು ʼ45ʼ ಮಾತಾಡೋಕೆ! | Mangaluru Forum Fiza Mall 45 Tapang song promotion shock | ದಕ್ಷಿಣ ಕನ್ನಡ

Kannada Cinema: ತುಳು ಮೇಷ್ಟ್ರಾದ ರಾಜ್‌ ಶೆಟ್ರು, ಮಾಲ್‌ ನಲ್ಲಿ ಭರ್ಜರಿ ಹುಲಿ ಕುಣಿತ; ಜನ್ಯಾಜೀ ಬಂದ್ರು ʼ45ʼ ಮಾತಾಡೋಕೆ! | Mangaluru Forum Fiza Mall 45 Tapang song promotion shock | ದಕ್ಷಿಣ ಕನ್ನಡ

Last Updated:

ಮಂಗಳೂರು ಫಾರಮ್‌ ಫಿಜಾ ಮಾಲ್‌ ನಲ್ಲಿ 45 ಸಿನಿಮಾದ ಆಪ್ರೋ ಟಪಂಗ್ ಹಾಡಿನ ಪ್ರೋಮೋಶನ್ ನಡೆಯಿತು; ಅರ್ಜುನ್‌ ಜನ್ಯಾ, ಅನುಶ್ರೀ, ರಾಜ್‌ ಬಿ ಶೆಟ್ಟಿ ಭಾಗವಹಿಸಿದರು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು (Mangaluru) ಜನರಿಗೆ ಮಸ್ತ್ ಗಮ್ಮತ್ ನೀಡಿತ್ತು ಈ ತಂಡ. ಮಾಲ್‌ಗೆ (Mall) ಖರೀದಿಗೆಂದು ಹೋದೋರಿಗೆ ಸಡನ್ ಶಾಕ್. ಯಾವಾಗ್ಲೂ ಪಂಜೆ ಹಾಕಿಕೊಂಡು ವೇದಾಂತ ಹೇಳೋ ಸ್ಟಾರ್ ನಮ್ ರಾಜ್ ಶೆಟ್ರು ಇದಕ್ಕಿದ್ದ ಹಾಗೆ ವಾದ್ಯ, ಕಛೇರಿ ಸಮೇತ ಬಂದ್ಬಿಟ್ಟಿದ್ದಾರೆ. ಅವರ ಹಿಂದೆ ಅರಳು ಹುರಿದ ಹಾಗೆ ಮಾತಾಡೋ ಅನುಶ್ರೀ ಮತ್ತೆ ಅರ್ಜುನ್ ಜನ್ಯಾ! ಇವರೆಲ್ಲಾ ಬೆಂಗಳೂರಿನ (Bengaluru) ಸ್ಟುಡಿಯೋದಲ್ಲಿರಬೇಕಲ್ವಾ? ಮಂಗಳೂರಿನ ಮಾಲಲ್ಲಿ ಎಂತ ಮಾಡ್ತಿದಾರೆ ಅಂತೀರಾ? ಇಲ್ಲಿದೆ ವಿಶೇಷ ಸ್ಟೋರಿ‌‌.

ಅರ್ಜುನ್‌ ಜನ್ಯಾ ನಿರ್ದೇಶನದಲ್ಲಿ 45

ಬಹುನಿರೀಕ್ಷಿತ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ “45” ಸಿನಿಮಾದ ಆಪ್ರೋ ಟಪಂಗ್‌ ಹಾಡಿನ ಪ್ರಮೋಷನ್ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಫೋರಂ ಫಿಜಾ ಮಾಲ್‌ಗೆ ಆಗಮಿಸಿದ್ದ ಚಿತ್ರತಂಡ ನೆರೆದಿದ್ದ ಸಿನಿಮಾ ಪ್ರೇಮಿಗಳು ಮತ್ತು ಅಭಿಮಾನಿಗಳನ್ನು ಮೋಡಿ ಮಾಡಿತು.

ಜನ್ಯಾಗೆ ಅನುಶ್ರೀ ಸಾಥ್‌, ರಾಜ್‌ ಶೆಟ್ರ ಭರ್ಜರಿ ನಲಿಕೆ

ನಿರ್ದೇಶಕ ಅರ್ಜುನ್ ಜನ್ಯ, ರಾಜ್ ಬಿ ಶೆಟ್ಟಿ, ಗಾಯಕರಾದ ನಿಶಾನ್ ರೈ, ಎಂ.ಸಿ.ಬಿಜು ಅವರಿಗೆ ಅನುಶ್ರೀ ಶೆಟ್ಟಿ ಸಾಥ್ ನೀಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಹಾಡಿನ ನೃತ್ಯ ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡಿತು. ಹಾಡಿಗೆ ರಾಜ್ ಬಿ ಶೆಟ್ಟಿ ಟಪಾಂಗುಚ್ಚಿ ಕುಣಿಯುವ ಮೂಲಕ ಆಕರ್ಷಣೆ ಹೆಚ್ಚಿಸಿದ್ದು ವಿಶೇಷವಾಗಿತ್ತು.

ʼನೀವು ಜನ ಭಾರಿ ಒಳ್ಳೆಯವರು ಮಾರ್ರೇʼ ಎಂದ ಜನ್ಯಾ