Kannada Rajyotsava: ಕನ್ನಡ ರಾಜ್ಯೋತ್ಸವದ ಸಡಗರ, ಸಂಭ್ರಮ! ಗಮನ ಸೆಳೆದ ಮಕ್ಕಳ ಕಾರ್ಯಕ್ರಮಗಳು! | Dakshina Kannada celebration | ದಕ್ಷಿಣ ಕನ್ನಡ

Kannada Rajyotsava: ಕನ್ನಡ ರಾಜ್ಯೋತ್ಸವದ ಸಡಗರ, ಸಂಭ್ರಮ! ಗಮನ ಸೆಳೆದ ಮಕ್ಕಳ ಕಾರ್ಯಕ್ರಮಗಳು! | Dakshina Kannada celebration | ದಕ್ಷಿಣ ಕನ್ನಡ

Last Updated:

ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. 12 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವದ (Kannada Rajyotsava) ಸಂಭ್ರಮ ಜೋರಾಗಿಯೇ ಇತ್ತು. ಅದೇ ರೀತಿ ದಕ್ಷಿಣ ಕನ್ನಡದ (Dakshina Kannada) ಪುತ್ತೂರು (Puttu) ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ವಿವಿಧ ಇಲಾಖೆಗಳ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪುತ್ತೂರಿನ ದೇಶಭಕ್ತ ಎನ್.ಎಸ್.ಕಿಲ್ಲೆ ಮೈದಾನದಲ್ಲಿ ಕನ್ನಡ ಧ್ವಜಾರೋಹಣದ ಬಳಿಕ ಪುರಭವನದಲ್ಲಿ 12 ಜನ ಸಾಧಕರಿಗೆ ಮತ್ತು ಒಂದು ಸಂಸ್ಥೆಗೆ ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಚೆಂದದ ಸಾಂಸ್ಕೃತಿಕ ಕಾರ್ಯಕ್ರಮಗಳು

ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲಾ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆಯಿತು. ಕನ್ನಡ ಸಂಸ್ಕೃತಿ, ಕನ್ನಡ ಭಾಷೆ ಮತ್ತು ಕನ್ನಡ ನಾಡು-ನುಡಿಯ ಬಗ್ಗೆ ಹೋರಾಡಿದ ವೀರರ, ಕನ್ನಡ ನಾಡಿನ ಇತಿಹಾಸವನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಕ್ಕಳು ಆಡಿ ತೋರಿಸಿದರು.

ಪ್ರತಿ ವರ್ಷದಂತೆ ಈ ಬಾರಿಯೂ ಪುತ್ತೂರು ಕೆ.ಎಸ್.ಆರ್.ಟಿ.ಸಿ ವಿಭಾಗದಿಂದ ಕನ್ನಡ ಧ್ವಜದಿಂದ ಅಲಂಕೃತವಾದ ಬಸ್ ಪುತ್ತೂರು ನಗರದಾದ್ಯಂತ ಸಂಚರಿಸಿದ ಕನ್ನಡ ನಾಡಿನ ಇತಿಹಾಸದ ಹಾಡುಗಳನ್ನು ಭಿತ್ತರಿಸುವ ಮೂಲಕ ಕನ್ನಡದ ಬಗೆಗಿನ ಅಭಿಮಾನಕ್ಕೆ ಸಾಕ್ಷಿಯಾಯಿತು.