Kannada Rajyotsava: ಪುತ್ತೂರಿನಲ್ಲಿ ಗಮನಸೆಳೆದ KSRTC ಕನ್ನಡ ತೇರು! | This Puttur KSRTC Bus turned as kannada theru on the occasion of Kannada Rajyotsava

Kannada Rajyotsava: ಪುತ್ತೂರಿನಲ್ಲಿ ಗಮನಸೆಳೆದ KSRTC ಕನ್ನಡ ತೇರು! | This Puttur KSRTC Bus turned as kannada theru on the occasion of Kannada Rajyotsava

Last Updated:

ಕೆ.ಎಸ್.ಆರ್.ಟಿ.ಸಿ ಅಶ್ವಮೇಧ ಬಸ್ ತುಂಬೆಲ್ಲಾ ಕನ್ನಡದ ಬಾವುಟ, ಕನ್ನಡದ ಸಾಹಿತಿಗಳ ಭಾವಚಿತ್ರ, ರಾಜ್ಯದ ಸಂಸ್ಕೃತಿ ಸಾರುವ ಪ್ರೇಕ್ಷಣೀಯ ಸ್ಥಳಗಳ ಪರಿಚಯಿಸುವ ಚಿತ್ರಗಳನ್ನು ಅಳಪಡಿಸುವ ಮೂಲಕ ಗಮನ ಸೆಳೆಯಿತು.

X

ವಿಡಿಯೋ ಇಲ್ಲಿ ನೋಡಿ

ಕನ್ನಡ ರಾಜ್ಯೋತ್ಸವವನ್ನು(Kannada Rajyotsava) ನಾಡಿನ ಜನ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ಈ ಬಾರಿ ದೀಪಾವಳಿ ಜೊತೆಗೆ ರಾಜ್ಯೋತ್ಸವದ ಆಚರಣೆ ಜನರ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದಿಂದ(KSRTC Puttur Division) ರಾಜ್ಯೋತ್ಸವದ ಅಂಗವಾಗಿ ನಡೆದ ಕನ್ನಡ ತೇರು ಬಸ್ ಸಂಚಾರ ಜನರ ಗಮನಸೆಳೆದಿತ್ತು.

ಕೆ.ಎಸ್.ಆರ್.ಟಿ.ಸಿ ಅಶ್ವಮೇಧ ಬಸ್ ತುಂಬೆಲ್ಲಾ ಕನ್ನಡದ ಬಾವುಟ, ಕನ್ನಡದ ಸಾಹಿತಿಗಳ ಭಾವಚಿತ್ರ, ರಾಜ್ಯದ ಸಂಸ್ಕೃತಿ ಸಾರುವ ಪ್ರೇಕ್ಷಣೀಯ ಸ್ಥಳಗಳ ಪರಿಚಯಿಸುವ ಚಿತ್ರಗಳನ್ನು ಅಳಪಡಿಸುವ ಮೂಲಕ ಗಮನ ಸೆಳೆಯಿತು.

ಇದನ್ನೂ ಓದಿ: Bee Venom: ಅನೇಕ ರೋಗಗಳಿಗೆ ರಾಮಬಾಣ ಈ ಜೇನು ವಿಷ – ಜೇನು ಕಚ್ಚದೆಯೇ ವಿಷ ಸಂಗ್ರಹ ಮಾಡುವ ವಿಧಾನ ಗೊತ್ತಾ?

ಪುತ್ತೂರು ವಿಭಾಗೀಯ ಕಛೇರಿಯಿಂದ ಹೊರಟ ಈ ಬಸ್ ಪುತ್ತೂರು ನಗರ ತುಂಬಾ ಸಂಚರಿಸಿದ ಈ ಬಸ್ ಕನ್ನಡದ ಕಂಪನ್ನು ಇಡೀ ನಗರಕ್ಕೆ ಪರಿಚಯಿಸುವ ಕಾರ್ಯ ಮಾಡಿದೆ. ಸುಮಾರು 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಿದ ಈ ಕನ್ನಡದ ತೇರನ್ನು ಹಲವೆಡೆ ಜನ ಆತ್ಮೀಯವಾಗಿ ಬರಮಾಡಿಕೊಂಡ ದೃಶ್ಯವೂ ಕಂಡು ಬಂತು. ಕನ್ನಡ ತೇರಿನ ಮುಂದೆ ನಿಂತು ಫೋಟೋ ಮತ್ತು ಸೆಲ್ಫಿ ತೆಗೆಯುವ ಮೂಲಕ ಸಂಭ್ರಮಿಸಿದರು.

ಕನ್ನಡಕ್ಕೆ ಸಂಬಂಧಪಟ್ಟ ಚಿತ್ರಗೀತೆಗಳನ್ನು ಮೊಳಗಿಸುತ್ತಾ ಸಾಗಿದ ಕನ್ನಡ ತೇರು ಬಳಿಕ ಮುಕ್ರಂಪಾಡಿಯ ವಿಭಾಗೀಯ ಕಛೇರಿಯಲ್ಲಿ ಮುಕ್ತಾಯಗೊಂಡಿತು. ಪುತ್ತೂರು ಕನ್ನಡ ಸಾಹಿತ್ಯ ಘಟಕದ ವತಿಯಿಂದ ಈ ಬಾರಿ ಸುಮಾರು 15 ವಿವಿಧ ಕ್ಷೇತ್ರಗಳ ಸಾಧಕರಿಗೆ ಈ ಬಾರಿ ತಾಲೂಕು ಮಟ್ಟದ ಗೌರವವನ್ನು ನೀಡಲಾಯಿತು. ಈ ಸಾಧಕರನ್ನೂ ಇದೇ ಕನ್ನಡ ತೇರಿನಲ್ಲಿ ನಗರ ಪ್ರದಕ್ಷಿಣೆ ಮಾಡಲಾಯಿತು.