Kantara Chapter 1: ಕಾಂತಾರ ಚಾಪ್ಟರ್ 1 ನೋಡಿದ KL ರಾಹುಲ್! ಸಿನಿಮಾ ನೋಡಿ ಮಂಗಳೂರು ಹುಡುಗ ಹೇಳಿದ್ದೇನು? | cricketer kl rahul watches kantara chapter 1 shares review | ಮನರಂಜನೆ

Kantara Chapter 1: ಕಾಂತಾರ ಚಾಪ್ಟರ್ 1 ನೋಡಿದ KL ರಾಹುಲ್! ಸಿನಿಮಾ ನೋಡಿ ಮಂಗಳೂರು ಹುಡುಗ ಹೇಳಿದ್ದೇನು? | cricketer kl rahul watches kantara chapter 1 shares review | ಮನರಂಜನೆ

ಕಾಂತಾರವನ್ನು ಈಗಷ್ಟೇ ನೋಡಿದೆ. ರಿಷಬ್ ಶೆಟ್ಟಿ ಸೃಷ್ಟಿಸಿರುವ ಈ ಮ್ಯಾಜಿಕ್​​ಗೆ ತಲೆಬಾಗುತ್ತೇನೆ. ಮಂಗಳೂರಿನ ಜನರು, ಮನಸು ಎಲ್ಲವನ್ನೂ ತುಂಬಾ ಸುಂದರವಾಗಿ ಪ್ರಸ್ತುತಪಡಿಸಿದ್ದೀರಿ ಎಂದು ಅವರು ಬರೆದಿದ್ದಾರೆ.

ಇತ್ತೀಚೆಗೆ ಬಿಜೆಪಿ ಮುಖಂಡ ಅಣ್ಣಾಮಲೈ ಕೂಡಾ ಸಿನಿಮಾ ನೋಡಿ ರಿಯಾಕ್ಟ್ ಮಾಡಿದ್ದಾರೆ. ಟ್ವಿಟರ್​​ನಲ್ಲಿ ಸಿನಿಮಾ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಅಣ್ಣಾಮಲೈ, “ನಂಬಿಕೆ ಮತ್ತು ಜಾನಪದದ ವಿಶೇಷ ಮಿಶ್ರಣವಾದ ಕಾಂತಾರ ಅಧ್ಯಾಯ 1 ಅನ್ನು ವೀಕ್ಷಿಸಿದೆ. ರಿಷಬ್ ಶೆಟ್ಟಿ ಅವರು ನಿರ್ದೇಶಕ ಮತ್ತು ನಾಯಕ ನಟರಾಗಿ ಅದ್ಭುತ ಅಭಿನಯವನ್ನು ನೀಡಿದ್ದಾರೆ ಎಂದಿದ್ದಾರೆ.

ಧರ್ಮದ ಸಾರ, ತುಳುನಾಡಿನ ಸಂಸ್ಕೃತಿ ಮತ್ತು ಪಂಜುರ್ಲಿ ದೇವರು ಮತ್ತು ಗುಳಿಗನ ಆರಾಧನೆಯನ್ನು ಅವುಗಳ ವಿವಿಧ ಅಭಿವ್ಯಕ್ತಿಗಳಲ್ಲಿ ಒಟ್ಟುಗೂಡಿಸುತ್ತಾರೆ ಎಂದು ಹೊಗಳಿದ್ದಾರೆ.

Kantara chapter 1 nears 300 crore Annamalai praises and appreciates rishab shetty movie

ಅಣ್ಣಾಮಲೈ-ಕಾಂತಾರ 1

ತುಳು ಪ್ರದೇಶದಲ್ಲಿ ಐಪಿಎಸ್ ಅಧಿಕಾರಿಯಾಗಿ ಕೆಲಸ ಮಾಡಿದ ತಮ್ಮ ಸ್ವಂತ ಅನುಭವಗಳಿಂದ ಸಿನಿಮಾವನ್ನು ವಿವರಿಸಿದ ಅಣ್ಣಾಮಲೈ, ಈ ಚಿತ್ರವು ಬಲವಾದ ವೈಯಕ್ತಿಕ ನೆನಪುಗಳನ್ನು ಹುಟ್ಟುಹಾಕಿದೆ ಎಂದು ಹೇಳಿದರು. ಇದನ್ನು “ಆಧ್ಯಾತ್ಮಿಕ ಮರಳುವಿಕೆ ಮತ್ತು ನೆನಪಿನ ಹಾದಿಯಲ್ಲಿ ನಡೆಯುವುದು” ಎಂದು ಕರೆದರು.

5 ದಿನಗಳಲ್ಲಿ 371 ಕೋಟಿ ಬಾಚಿದ ಕಾಂತಾರ೧

ಮೊದಲ‌ ದಿನ ವರ್ಲ್ಡ್ ವೈಡ್ 88 ಕೋಟಿ

ಎರಡನೇ ದಿನ ವರ್ಲ್ಡ್ ವೈಡ್ 64 ಕೋಟಿ

ಮೂರನೇ ದಿ‌ನ ವರ್ಲ್ಡ್ ವೈಡ್ 83 ಕೋಟಿ

ನಾಲ್ಕನೇ ದಿನ ವರ್ಲ್ಡ್ ವೈಡ್ 91 ಕೋಟಿ

ಐದನೇ ದಿನ ವರ್ಲ್ಡ್ ವೈಡ್ 45 ಕೋಟಿ

5 ದಿನದಲ್ಲಿ ಒಟ್ಟು 371 ಕೋಟಿ

ಇನ್ನು ಯಾವ್ದಾದ್ರೂ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಬೇಕು ಅಂದ್ರೆ ಮೂಲ ಭಾಷೆಯಲ್ಲದೆ, ಬೇರೆ ಬೇರೆ ಭಾಷೆಗಳಲ್ಲೂ ಸಹ ಪಾಸಿಟಿವ್ ರೆಸ್ಪಾನ್ಸ್ ಪಡ್ಕೊಬೇಕು. ಅದರಲ್ಲೂ ನಾರ್ತ್ ಇಂಡಿಯಾದಲ್ಲಿ ದೊಡ್ಡ ಮಾರುಕಟ್ಟೆ ಇರೋದ್ರಿಂದ ಹಿಂದಿ ಆಡಿಯೆನ್ಸ್ ಗೆ ಇಷ್ಟವಾದರೆ ಮಾತ್ರ ಯಾವುದಾದ್ರೂ ಸಿನಿಮಾ 500 ಕೋಟಿ ಸಾವಿರ ಕೋಟಿ ದಾಟಬಹುದು.

ಕಾಂತಾರ ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿಯಲ್ಲೂ ಸಹ ಸಖತ್ ರೆಸ್ಪಾನ್ಸ್ ಪಡ್ಕೊತಾ ಇದೆ. ನಾಲ್ಕು ದಿನಗಳಲ್ಲಿ ಹಿಂದಿಯಲ್ಲೇ 90 ಕೋಟಿ ಗಳಿಸಿದ್ದು 100 ಕೋಟಿ ಕ್ಲಬ್ ನತ್ತ ದಾಪುಗಾಲಿಟ್ಟಿದೆ.