Kantara Craze: ಗೂಡುದೀಪಗಳಲ್ಲೂ ಕಾಂತಾರ ಮೇನಿಯಾ, ಥೈಯಂ, ಕೋಲದ ಸಂಸ್ಕೃತಿ ಬಿಂಬಿಸುವ ಮಾದರಿಗಳಿಗೆ ಫುಲ್‌ ಡಿಮ್ಯಾಂಡ್! | Dakshina Kannada Kantara Daiva masks and Goodudeepas shine in Deepavali | ದಕ್ಷಿಣ ಕನ್ನಡ

Kantara Craze: ಗೂಡುದೀಪಗಳಲ್ಲೂ ಕಾಂತಾರ ಮೇನಿಯಾ, ಥೈಯಂ, ಕೋಲದ ಸಂಸ್ಕೃತಿ ಬಿಂಬಿಸುವ ಮಾದರಿಗಳಿಗೆ ಫುಲ್‌ ಡಿಮ್ಯಾಂಡ್! | Dakshina Kannada Kantara Daiva masks and Goodudeepas shine in Deepavali | ದಕ್ಷಿಣ ಕನ್ನಡ

Last Updated:

ಕಾಂತಾರ ಚಿತ್ರ ದಕ್ಷಿಣ ಕನ್ನಡದ ದೈವಗಳ ಮುಖವರ್ಣಿಕೆ, ಗೂಡುದೀಪಗಳ ಪರಂಪರೆ, ದೀಪಾವಳಿಯ ವಿಶೇಷತೆ ಮತ್ತು ಮಾರುಕಟ್ಟೆಯಲ್ಲಿ ಚೈನಾ ಮೇಡ್ ಗೂಡುದೀಪಗಳ ಪ್ರಭಾವವನ್ನು ಹೈಲೈಟ್ ಮಾಡಿದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಈಗ ಎಲ್ಲೆಡೆ ಭರ್ಜರಿಯಾಗಿ (Grand) ಕಾಂತಾರ ʼಬೆಳಕಲ್ಲ, ದರ್ಶನ ʼ ಎಂದು ಇಡೀ ಭಾರತ ಚಿತ್ರರಂಗಕ್ಕೆ ಹೊಸ ಜ್ಯೋತಿಯಾಗಿ (Light) ಮೂಡಿದೆ. ಅದರಲ್ಲೂ ಈ ಕಥೆಯ (Story) ಮೂಲ ದಕ್ಷಿಣ ಕನ್ನಡದಲ್ಲಿ ಕ್ರೇಜ್‌ ಕೇಳಬೇಕಾ? ಇಲ್ಲಿ ನೋಡಿ ಇದು ಗೂಡುದೀಪಗಳು. ಇವುಗಳೆಲ್ಲಾ ಇಂದು ಕಾಂತಾರದ ದೈವಗಳ (Demi God) ಮುಖವರ್ಣಿಕೆಯ ರೂಪದಲ್ಲಿ ಜಬರ್‌ ದಸ್ತ್‌ ಆಗಿ ಕಂಗೊಳಿಸುತ್ತಿದೆ.

ಮನೆಯಲ್ಲಿ ತಯಾರಿಸೋ ಗೂಡುದೀಪಗಳ ಸಂಖ್ಯೆ ವಿರಳ

ದೀಪಗಳ ಹಬ್ಬ ದೀಪಾವಳಿಯಲ್ಲಿ ದೀಪಗಳ ಜೊತೆ ಗೂಡುದೀಪಗಳಿಗೂ ಭಾರೀ ಮಹತ್ವ. ಇಂದು ನಾನಾ ರೀತಿಯ, ಬಣ್ಣದ ಗೂಡುದೀಪಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಚೈನಾ ಮೇಡ್ ಗೂಡುದೀಪಗಳು ಬಹುತೇಕ ಮಾರುಕಟ್ಟೆಯನ್ನು ತುಂಬಿಕೊಂಡಿವೆ. ಇಂದು ಹೆಚ್ಚಿನ ಮನೆ ಮಂದಿ ಈ ಮಾರುಕಟ್ಟೆಯಲ್ಲಿ ಸಿಗುವ ಗೂಡುದೀಪಗಳನ್ನೇ ಅವಲಂಭಿಸಿದ್ದು, ಮನೆಯಲ್ಲೇ ತಯಾರಿಸುವ ಗೂಡುದೀಪಗಳ ಸಂಖ್ಯೆ ಗಣನೀಯ ಕುಸಿದಿದೆ.

ಈ ಹಿಂದೆ ಹೇಗಿತ್ತು ಗೊತ್ತಾ ದೀಪಾವಳಿ ಗೂಡುದೀಪದ ಆಚರಣೆ

ಈ ಹಿಂದೆ ಕರಾವಳಿ ಭಾಗದ ಎಲ್ಲಾ ಮನೆಗಳಲ್ಲಿ ತಮಗೆ ಬೇಕಾದ ಗೂಡುದೀಪಗಳನ್ನು ತಾವೇ ತಯಾರಿಸಿಕೊಳ್ಳುತ್ತಿದ್ದ ಕಾಲವೊಂದಿತ್ತು. ಹಿಡಿಸೂಡಿ ಕಡ್ಡಿ ಅಥವಾ ಬಿದಿರಿನ ಕಡ್ಡಿಗಳನ್ನು ಬಳಸಿಕೊಂಡು ಈ ಗೂಡುದೀಪಗಳನ್ನು ಈ ಭಾಗದ ಜನ ತಯಾರಿಸುತ್ತಿದ್ದರು. ನಕ್ಷತ್ರ, ಆಕಾಶಬುಟ್ಟಿ ಮಾದರಿಯ ಗೂಡುದೀಪ, ವಿಮಾನ ಮಾದರಿ ಗೂಡುದೀಪ, ಹಡಗು ಮಾದರಿಯ ಗೂಡುದೀಪಗಳನ್ನು ಮನೆಯ ಮಕ್ಕಳೇ ಸೇರಿ ತಯಾರಿಸುತ್ತಿದ್ದರು.

ಕಾಲಕ್ಕೆ ತಕ್ಕ ಕೋಲದ ಹಾಗೆ ಟ್ರೆಂಡ್‌ ಗೆ ತಕ್ಕ ಗೂಡುದೀಪಗಳು

ಆದರೆ ಇಂದು ಬೆಳಕಿನ ಹಬ್ಬಕ್ಕೆ ಪ್ರದರ್ಶಿಸಲ್ಪಡುವ ಗೂಡುದೀಪಗಳು ಮಾರುಕಟ್ಟೆಯಲ್ಲಿದೆ. ಆದರೆ ಇಂದು ಕೇವಲ ಸಾರ್ವಜನಿಕ ಪ್ರದರ್ಶನಗಳಿಗೋಸ್ಕರ ಮಾತ್ರವೇ ಗೂಡುದೀಪಗಳನ್ನು ಕೆಲವು ಆಸಕ್ತರು ಮನೆಯಲ್ಲೇ ತಯಾರಿಸುತ್ತಾರೆ. ಇಂದಿನ ಟ್ರೆಂಡ್ ಗೆ ಅನುಗುಣವಾಗಿರುವ, ಪ್ರಸಕ್ತ ವಿದ್ಯಮಾನವನ್ನು ತಮ್ಮ ಗೂಡುದೀಪಗಳ ಮೂಲಕ ಪ್ರದರ್ಶಿಸುವ ಪ್ರಯತ್ನವನ್ನೂ ಮಾಡುತ್ತಾರೆ.

ದೈವಾರಾಧನೆಯ ದೀಪಗಳು ಈಗ ಪ್ರಸಿದ್ಧ