Karun Nair: ಆಂಗ್ಲರ ನೆಲ್ಲದಲ್ಲಿ ಅಬ್ಬರಿಸಿದ ಕನ್ನಡಿಗ, ದ್ವಿಶತಕ ಬಾರಿಸಿ ದೊಡ್ಡದಾಗಿ ಸಿಗ್ನಲ್‌ ಕೊಟ್ಟ ಕರುಣ್‌ ನಾಯರ್‌!Karun Nair Scores Stunning Double Century | India A vs England Lions

Karun Nair: ಆಂಗ್ಲರ ನೆಲ್ಲದಲ್ಲಿ ಅಬ್ಬರಿಸಿದ ಕನ್ನಡಿಗ, ದ್ವಿಶತಕ ಬಾರಿಸಿ ದೊಡ್ಡದಾಗಿ ಸಿಗ್ನಲ್‌ ಕೊಟ್ಟ ಕರುಣ್‌ ನಾಯರ್‌!Karun Nair Scores Stunning Double Century | India A vs England Lions

Last Updated:

Karun Nair: ಕರ್ನಾಟಕದ ಕರುಣ್ ನಾಯರ್ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿ, ಭಾರತ ತಂಡದ ಪ್ಲೇಯಿಂಗ್ 11ರಲ್ಲಿ ಸ್ಥಾನ ಪಡೆಯಲು ಪ್ರಬಲ ಹಕ್ಕು ಪ್ರತಿಪಾದಿಸಿದ್ದಾರೆ.

ಕರುಣ್‌ ನಾಯರ್‌ಕರುಣ್‌ ನಾಯರ್‌
ಕರುಣ್‌ ನಾಯರ್‌

ಕರ್ನಾಟಕದ ಪ್ರತಿಭಾವಂತ ಬ್ಯಾಟ್ಸ್‌ಮನ್ ಕರುಣ್ ನಾಯರ್ (Karun Nair) ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇಂಗ್ಲೆಂಡ್ ಲಯನ್ಸ್ (England Lions) ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ (Test Match) ದ್ವಿಶತಕ ಬಾರಿಸುವ ಮೂಲಕ, ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪ್ಲೇಯಿಂಗ್ 11ರಲ್ಲಿ ಸ್ಥಾನ ಪಡೆಯಲು ಪ್ರಬಲವಾಗಿ ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ಎರಡನೇ ದ್ವಿಶತಕ!

ಕರುಣ್ ನಾಯರ್ ಅವರು ಕ್ಯಾಂಟರ್ಬರಿಯಲ್ಲಿ ನಡೆದ ಭಾರತ ‘ಎ’ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ಪಂದ್ಯದಲ್ಲಿ ಈ ಮಹತ್ವದ ದ್ವಿಶತಕವನ್ನು ಗಳಿಸಿದ್ದಾರೆ. ಇದು ಅವರ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ ನಾಲ್ಕನೇ ದ್ವಿಶತಕವಾಗಿದೆ. ಆಂಗ್ಲರ ನೆಲದಲ್ಲಿ ಕಳೆದ 14 ತಿಂಗಳಲ್ಲಿ ಅವರು ಬಾರಿಸಿದ ಎರಡನೇ ದ್ವಿಶತಕ ಇದಾಗಿದೆ. ಕಳೆದ ವರ್ಷ (ಏಪ್ರಿಲ್ 2024ರಲ್ಲಿ), ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ನಾರ್ಥಾಂಪ್ಟನ್‌ಶೈರ್ ಪರ ಗ್ಲಾಮೋರ್ಗನ್ ವಿರುದ್ಧ ಅಜೇಯ 202 ರನ್ ಗಳಿಸಿದ್ದರು.

ಟೆಸ್ಟ್ ತಂಡಕ್ಕೆ ಮರಳಿದ ಕರುಣ್!

ಕರುಣ್ ನಾಯರ್ ಅವರು 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡಕ್ಕಾಗಿ ಕೊನೆಯ ಬಾರಿಗೆ ಆಡಿದ್ದರು. ನಂತರ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ, ಇತ್ತೀಚಿನ ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

ಈ ದ್ವಿಶತಕ, ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವುದರ ಜೊತೆಗೆ, ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯಲು ಪ್ರಮುಖ ಕಾರಣವಾಗಿದೆ. ಅದರಲ್ಲೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವ ಕಾರಣ, ಅನುಭವಿಗಳ ಕೊರತೆಯಿರುವ ಸಂದರ್ಭದಲ್ಲಿ ಕರುಣ್ ನಾಯರ್ ಅವರ ಅನುಭವ ತಂಡಕ್ಕೆ ಸಹಾಯಕ್ಕೆ ಬರಲಿದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾಧನೆಗಳ ಸರದಾರ ಕರುಣ್ ನಾಯರ್!

ಕರುಣ್ ನಾಯರ್ ಅವರ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನ ಪ್ರಮುಖ ಸಾಧನೆ ಅಂದರೆ, 2016ರಲ್ಲಿ ಇಂಗ್ಲೆಂಡ್ ವಿರುದ್ಧ ಬಾರಿಸಿದ ಅಜೇಯ 303 ರನ್. ಇದರೊಂದಿಗೆ, ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು (ವಿರೇಂದ್ರ ಸೆಹ್ವಾಗ್ ನಂತರ).

ಇದಲ್ಲದೆ, ರಣಜಿ ಟ್ರೋಫಿ ಫೈನಲ್‌ನಲ್ಲಿ ತ್ರಿಶತಕ (328 ರನ್) ಬಾರಿಸಿದ ಎರಡನೇ ಕನ್ನಡಿಗ ಮತ್ತು 1946-47ರ ನಂತರ ಫೈನಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆಯನ್ನೂ ಅವರು ಹೊಂದಿದ್ದಾರೆ. ಇತ್ತೀಚೆಗೆ 2024-25ರ ವಿಜಯ್ ಹಜಾರೆ ಟ್ರೋಫಿಯಲ್ಲಿ 542 ರನ್ ಗಳಿಸಿ ಅಜೇಯರಾಗಿ ಉಳಿಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು.

ಕರುಣ್ ನಾಯರ್ ಅವರ ಈ ನಿರಂತರ ಉತ್ತಮ ಪ್ರದರ್ಶನ, ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುವುದಲ್ಲದೆ, ಭಾರತದ ಮಧ್ಯಮ ಕ್ರಮಾಂಕವನ್ನು ಬಲಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.