Kateel Yakshagana Mela: 600 ದೇವಿ ಮಹಾತ್ಮೆ ಪ್ರದರ್ಶನದೊಂದಿಗೆ 179 ದಿನಗಳ ತಿರುಗಾಟ ಅಂತ್ಯ! | Kateel Yakshagana Mela: 179-day tour ends with 600 Devi Mahatme performances!

Kateel Yakshagana Mela: 600 ದೇವಿ ಮಹಾತ್ಮೆ ಪ್ರದರ್ಶನದೊಂದಿಗೆ 179 ದಿನಗಳ ತಿರುಗಾಟ ಅಂತ್ಯ! | Kateel Yakshagana Mela: 179-day tour ends with 600 Devi Mahatme performances!

Last Updated:

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 179 ದಿನಗಳ ತಿರುಗಾಟದಲ್ಲಿ 600 ದೇವಿ ಮಹಾತ್ಮ ಪ್ರದರ್ಶನ. 1,074 ಯಕ್ಷಗಾನ ಪ್ರದರ್ಶನಗಳಲ್ಲಿ 172 ಬಯಲಾಟಗಳು.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಕಟೀಲು ಶ್ರೀ ದುರ್ಗಾಪರಮೇಶ್ವರಿ(Kateel Durgaparameshwari) ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಈ ಬಾರಿಯ 179 ದಿನಗಳ ತಿರುಗಾಟವು ದೇಗುಲದ ರಥಬೀದಿಯಲ್ಲಿ ನಡೆದ ಕೊನೆಯ ಸೇವೆಯಾಟದೊಂದಿಗೆ ಕೊನೆಗೊಂಡಿದೆ. ಕಟೀಲಿನ ಆರು ಮೇಳಗಳೂ ಜೊತೆಯಾಗಿ ಪತ್ತನಾಜೆ ಸೇವೆಯಾಟ ನಡೆಸುವುದರೊಂದಿಗೆ ಈ ಬಾರಿಯ ತಿರುಗಾಟ ಮುಕ್ತಾಯಗೊಂಡಿತು(Ended). ಆರು ಅಲಂಕೃತ ಮಂಟಪಗಳಲ್ಲಿ ದೇವರ ಚೌಕಿಪೂಜೆ ಏಕಕಾಲದಲ್ಲಿ ನಡೆದು, ಆರು ರಂಗಸ್ಥಳಗಳಲ್ಲಿ ಏಕಕಾಲದಲ್ಲಿ ಪೂರ್ವರಂಗ ಕುಣಿತ ಪ್ರದರ್ಶನಗೊಂಡಿತು. ಬಳಿಕ ಬೆಳಗ್ಗಿನವರೆಗೂ ಎಲ್ಲಾ ಮೇಳಗಳ ಕಲಾವಿದರಿಂದ ಹೈಮವತಿ, ಶ್ರೀಮತಿ, ವಿದ್ಯುನ್ಮತಿ, ಜಾಂಬವತಿ, ಪದ್ಮಾವತಿ ‘ಕಲ್ಯಾಣ ಪ್ರಸಂಗ’ಗಳ ಪ್ರದರ್ಶನ ನಡೆಯಿತು.

ನ.26ರಿಂದ ಮೇ 24ರವರೆಗೆ (ಆರಟದ ರಜೆಯ ದಿನದ ಹೊರತುಪಡಿಸಿ) 179ದಿನಗಳ ಒಟ್ಟು ತಿರುಗಾಟದಲ್ಲಿ ಆರು ಮೇಳಗಳು 1,074 ಯಕ್ಷಗಾನ ಪ್ರದರ್ಶನ ನಡೆಯಿತು‌. ಈ ಪೈಕಿ 600 ಕಡೆಗಳಲ್ಲಿ ಶ್ರೀ ದೇವಿ ಮಹಾತ್ಮ ಪ್ರಸಂಗವೇ ಪ್ರದರ್ಶನಗೊಂಡಿದೆ. 1, 2, 3 ಮತ್ತು 4ನೇ ಮೇಳಗಳಲ್ಲಿ ಶ್ರೈ ದೇವಿ ಮಹಾತ್ಮೆ ಪ್ರಸಂಗ 100ರಷ್ಟು ಪ್ರದರ್ಶನ ನೀಡಿದೆ. ಮೂರನೇ ಮೇಳಗಳಲ್ಲಿ ಗರಿಷ್ಠ 105 ದೇವಿ ಮಹಾತ್ಮೆ ಪ್ರದರ್ಶನ ನೀಡಿದೆ. 1ನೇ ಮೇಳ, 2ನೇ ಮೇಳ ಹಾಗೂ 4ನೇ ಮೇಳಗಳು ತಲಾ 103 ಪ್ರದರ್ಶನಗಳನ್ನು ನೀಡಿವೆ. 5ನೇ ಮೇಳ 98, 6ನೇ ಮೇಳ 88 ಪ್ರದರ್ಶನಗಳನ್ನು ನೀಡಿವೆ.

ಏಪ್ರಿಲ್ ತಿಂಗಳಲ್ಲಿ ನಾಲ್ಕು ಬಾರಿ (ಏ.7, 12, 15 ಹಾಗೂ 21) ಆರೂ ಮೇಳಗಳು ಒಂದೇ ದಿನ ಶ್ರೀ ದೇವಿ ಮಹಾತ್ಮೆ ಪ್ರದರ್ಶನ ನೀಡಿತ್ತು. ಮೇ14ರಂದು ವೃಷಭ ಮೇ 15ರಿಂದ 24ರ ನಡುವಿನ 10 ದಿನಗಳಲ್ಲಿನ ಆರು ಮೇಳಗಳು ಒಟ್ಟು 60 ಬಯಲಾಟಗಳ ಪೈಕಿ 40 ಕಡೆಗಳಲ್ಲಿ ದೇವಿ ಮಹಾತ್ಮ ಪ್ರಸಂಗವೇ ಪ್ರದರ್ಶನಗೊಂಡಿರುವುದು ಉಲ್ಲೇಖನೀಯ. ಉಳಿದಂತೆ ಮಾರ್ಚ್‌ನಲ್ಲಿ 103, ಜನವರಿ-96, ಡಿಸೆಂಬರ್ ಹಾಗೂ ಫೆಬ್ರವರಿ ತಲಾ 93, ಮೇ (24 ದಿನ)- 91 ಮತ್ತು ನವೆಂಬರ್ (5 ದಿನ) 15 ಕಡೆಗಳಲ್ಲಿ ದೇವಿ ಮಹಾತ್ಮೆ ಪ್ರದರ್ಶನಗೊಂಡಿದೆ.

ಈ ವರ್ಷದ ತಿರುಗಾಟದ ಅವಧಿಯಲ್ಲಿ ಎಲ್ಲ ಆರೂ ಮೇಳಗಳಿಂದ ‘ಕಟೀಲು ಕ್ಷೇತ್ರ ಮಹಾತ್ಮೆ’ ಬರೋಬ್ಬರಿ 50 ಪ್ರದರ್ಶನ ಕಂಡಿದೆ. ತಿರುಗಾಟದ ಎಲ್ಲ 179 ದಿನಗಳಲ್ಲಿಯೂ ದೇವಿ ಮಹಾತ್ಮೆ ಪ್ರದರ್ಶನ ನಿರಂತರವಿತ್ತು. ದೇಗುಲದ ಸರಸ್ವತೀ ಸದನ, ಮಹಾಲಕ್ಷ್ಮೀ ಸದನಗಳಲ್ಲಿ ಒಟ್ಟು 1074 ಪ್ರದರ್ಶನಗಳ ಪೈಕಿ 172 ಬಯಲಾಟಗಳು‌ ಪ್ರದರ್ಶನಗೊಂಡಿದೆ. ಆರು ಮೇಳಗಳ ದೇವರ ಪೆಟ್ಟಿಗೆ ಸಹಿತ ಪುಷ್ಪಾಲಂಕೃತ ಬಸ್, ಲಾರಿಗಳ ಬಸ್ ನಿಲ್ದಾಣದ ಕಡೆಯಿಂದ ಆಗುವ ಪುರ ಪ್ರವೇಶವು ಚೆಂಡನಾದ ಜಾಗಟೆ ಘೋಷಗಳೊಂದಿಗೆ ರಥ ಬೀದಿಗೆ ಆಗಮಿಸಿತು.

ಸಂಜೆ 6ಕ್ಕೆ ಚೌಕಿಪೂಜೆ, ಪೂರ್ವರಂಗ ಸಹಿತ ಬೆಳಗಿನವರೆಗೂ ಯಕ್ಷಗಾನ ನೆರವೇರಿತು. ಮುಂದೆ ನವೆಂಬರ್ 16ರಿಂದ ಮೇಳಗಳು ಮತ್ತೆ ತಿರುಗಾಟ ನಡೆಸಲಿದೆ. ಅಲ್ಲಿವರೆಗೆ ಕೆಲವು ಕಲಾವಿದರು ತಮ್ಮನ್ನು ಕೃಷಿ, ಸಣ್ಣಪುಟ್ಟ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಕೆಲವರು ಮಳೆಗಾಲದ ಯಕ್ಷಗಾನ, ತಾಳಮದ್ದಳೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.