Last Updated:
ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಗಾಯದಿಂದ ಚೇತರಿಸಿಕೊಂಡು ಮರಳಿದ ಮಹಾರಾಜ್ ಅವರು ಮೊದಲ ಇನ್ನಿಂಗ್ಸ್ನಲ್ಲಿ 102ಕ್ಕೆ 7 ವಿಕೆಟ್ ಪಡೆದು ಅದ್ಭುತ ಪ್ರದರ್ಶನ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದ ಸ್ಪಿನ್ ಬೌಲರ್ ಕೇಶವ್ ಮಹಾರಾಜ್ (Keshav Maharaj) ಪಾಕಿಸ್ಥಾನ ವಿರುದ್ಧ ನಡೆಯುತ್ತಿರುವ 2ನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಪಡೆಯುವ ಮೂಲಕ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಒಂದು ಹಂತದಲ್ಲಿ 400ಕ್ಕೂ ಹೆಚ್ಚು ರನ್ಗಳಿಸುವ ಸ್ಥಿತಿಯಲ್ಲಿದ್ದ ಪಾಕಿಸ್ತಾನ ಮಹಾರಾಜ್ ದಾಳಿಗೆ ಸಿಲುಕಿ 333ಕ್ಕೆ ರನ್ಗಳಿಗೆ ಆಲೌಟ್ ಆಯಿತು.ಕೊನೆಯ 5 ವಿಕೆಟ್ಗಳ ಕೇವಲ 17 ರನ್ಗಳ ಅಂತರದಲ್ಲಿ ಕಳೆದುಕೊಂಡಿದ್ದು ಅಚ್ಚರಿಯಾಗಿತ್ತು.
ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಗಾಯದಿಂದ ಚೇತರಿಸಿಕೊಂಡು ಮರಳಿದ ಮಹಾರಾಜ್ ಅವರು ಮೊದಲ ಇನ್ನಿಂಗ್ಸ್ನಲ್ಲಿ 102ಕ್ಕೆ 7 ವಿಕೆಟ್ ಪಡೆದು ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ 7 ವಿಕೆಟ್ ಸಾಧನೆ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (WTC) ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲು ಮಹಾರಾಜ್ ಅವರು ಯಶಸ್ವಿಯಾಗಿದ್ದಾರೆ. ಈ 7 ವಿಕೆಟ್ ಮಹಾರಾಜ್ ಅವರ ಟೆಸ್ಟ್ ಕ್ರಿಕೆಟ್ನಲ್ಲಿ 12ನೇ ಐದು ವಿಕೆಟ್ ಸಾಧನೆಯಾಗಿದ್ದು, WTCಯಲ್ಲಿ ಒಂದು ಇನ್ನಿಂಗ್ಸ್ನಲ್ಲಿ 7 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ಗಳನ್ನು ಗಳಿಸಿದ ಮೂರನೇ ಸ್ಪೆಲ್ ಆಗಿದೆ.
ಈ ಸಾಧನೆ ಮೂಲಕ ಅವರು ಭಾರತದ ಆರ್ ಅಶ್ವಿನ್, ನ್ಯೂಜಿಲೆಂಡ್ನ ಮ್ಯಾಟ್ ಹೆನ್ರಿ ಮತ್ತು ಪಾಕಿಸ್ಥಾನದ ಸ್ಪಿನ್ ಜೋಡಿ ನೋಮನ್ ಅಲಿ-ಸಜಿದ್ ಖಾನ್ ಅವರನ್ನು ಹಿಂದಿಕ್ಕಿ, WTCಯಲ್ಲಿ 3 ಬಾರಿ 7 ವಿಕೆಟ್ ಸಾಧನೆ ಮಾಡಿದ ಏಕೈಕ ಬೌಲರ್ ಆಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇದಲ್ಲದೆ, ಏಷ್ಯಾದಲ್ಲಿ 50 ವಿಕೆಟ್ಗಳನ್ನು ಗಳಿಸಿದ ಮೂರನೇ ದಕ್ಷಿಣ ಆಫ್ರಿಕಾ ಬೌಲರ್ ಮತ್ತು ದೇಶದ ಮೊದಲ ಸ್ಪಿನ್ ಬೌಲರ್ ಆಗಿ ಮಹಾರಾಜ್ ಅವರು ದಾಖಲೆ ಮಾಡಿದ್ದಾರೆ.
ಪಾಕಿಸ್ಥಾನ ತಂಡವು ಮೊದಲ ದಿನದಲ್ಲಿ ಉತ್ತಮವಾಗಿ ಆಡಿದ್ದು, ಪಾಕಿಸ್ತಾನಆಟವಾಡಿ 400ಕ್ಕೂ ಹೆಚ್ಚು ರನ್ ಗಳಿಸುವ ಸಾಧ್ಯತೆ ಇತ್ತು. ಆದರೆ ಎರಡನೇ ದಿನದ ಬೆಳಿಗ್ಗೆಯಲ್ಲೇ ದಕ್ಷಿಣ ಆಫ್ರಿಕಾ ಬೌಲರ್ಗಳು 74 ರನ್ಗಳಲ್ಲಿ5 ವಿಕೆಟ್ ಉಡಾಯಿಸಿ, ಪಾಕಿಸ್ಥಾನವನ್ನು 333ಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಮಹಾರಾಜ್ ಬೌಲಿಂಗ್ ನಿರ್ಣಾಯಕ ಪಾತ್ರವಹಿಸಿತು. ಮೊದಲ ದಿನದಲ್ಲಿ ಪಿಚ್ ಸ್ಪಿನ್ಗೆ ಹೆಚ್ಚು ಸಹಾಯ ಮಾಡಲಿಲ್ಲವಾದರೂ, ಮಹಾರಾಜ್ ಅವರು ತಮ್ಮ ಸಾಮಾನ್ಯ ಲೈನ್ ಮತ್ತು ಲೆಂಗ್ತ್ಗಳನ್ನು ಬದಲಾಯಿಸದೆ ಆಟವಾಡಿ ಪಾಕಿಸ್ತಾನವನ್ನ ಧೂಳೀಪಟ ಮಾಡಿದರು.
ಕೇಶವ್ ಮಹಾರಾಜ್ (ದಕ್ಷಿಣ ಆಫ್ರಿಕಾ)- 3 ಬಾರಿ
ಆರ್ ಅಶ್ವಿನ್ (ಭಾರತ) – 2 ಬಾರಿ
ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್)- 2 ಬಾರಿ
ನೋಮನ್ ಅಲಿ (ಪಾಕಿಸ್ಥಾನ)- 2 ಬಾರಿ
ಸಾಜಿದ್ ಖಾನ್ (ಪಾಕಿಸ್ಥಾನ) – 2 ಬಾರಿ
ಪ್ರಭಾತ್ ಜಯಸೂರ್ಯ (ಶ್ರೀಲಂಕಾ)-9
ನೋಮನ್ ಅಲಿ (ಪಾಕಿಸ್ಥಾನ), ತೈಜುಲ್ ಇಸ್ಲಾಂ (ಬಾಂಗ್ಲಾದೇಶ್)-8
ಕೇಶವ್ ಮಹಾರಾಜ್ (ದಕ್ಷಿಣ ಆಫ್ರಿಕಾ)-7
ರವಿಂದ್ರ ಜಡೇಜಾ (ಭಾರತ), ಅಜಾಜ್ ಪಟೇಲ್ (ನ್ಯೂಜಿಲೆಂಡ್)-6
ಅಕ್ಷರ್ ಪಟೇಲ್ (ಭಾರತ)-5
October 21, 2025 3:11 PM IST