Kieran Pollard: ಚರಿತ್ರೆ ಸೃಷ್ಟಿಸಿದ ಪೊಲಾರ್ಡ್! ಟಿ20 ಕ್ರಿಕೆಟ್​​ನಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್ | Kieron Pollard Makes History: First Cricketer to Score 14000 Runs and Take 300 Wickets in T20s | ಕ್ರೀಡೆ

Kieran Pollard: ಚರಿತ್ರೆ ಸೃಷ್ಟಿಸಿದ ಪೊಲಾರ್ಡ್! ಟಿ20 ಕ್ರಿಕೆಟ್​​ನಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್ | Kieron Pollard Makes History: First Cricketer to Score 14000 Runs and Take 300 Wickets in T20s | ಕ್ರೀಡೆ

Last Updated:

ಕೆರಿಬಿಯನ್ ಪ್ರೀಮಿಯರ್ ಲೀಗ್ (Caribbean Premier League ) -2025 ರ ಭಾಗವಾಗಿ ಶನಿವಾರ ಬೆಳಿಗ್ಗೆ ಬಾರ್ಬಡೋಸ್ ರಾಯಲ್ಸ್ (Barbados Royals) ವಿರುದ್ಧದ ಪಂದ್ಯದ ಸಮಯದಲ್ಲಿ ಪೊಲಾರ್ಡ್ ಈ ಸಾಧನೆ ಮಾಡಿದರು.

ಕೀರನ್ ಪೊಲಾರ್ಡ್ಕೀರನ್ ಪೊಲಾರ್ಡ್
ಕೀರನ್ ಪೊಲಾರ್ಡ್

ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಕೀರನ್ ಪೊಲಾರ್ಡ್ (Kieron Pollard) ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಕಡಿಮೆ ಅವಧಿಯ ಮಾದರಿಯಲ್ಲಿ ಸಾರ್ವಕಾಲಿಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಟಿ20ಗಳಲ್ಲಿ ಹದಿನಾಲ್ಕು ಸಾವಿರಕ್ಕೂ ಹೆಚ್ಚು ರನ್ ಗಳಿಸುವುದರ ಜೊತೆಗೆ ಮುನ್ನೂರು ವಿಕೆಟ್ ಪಡೆದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (Caribbean Premier League ) -2025 ರ ಭಾಗವಾಗಿ ಶನಿವಾರ ಬೆಳಿಗ್ಗೆ ಬಾರ್ಬಡೋಸ್ ರಾಯಲ್ಸ್ (Barbados Royals) ವಿರುದ್ಧದ ಪಂದ್ಯದ ಸಮಯದಲ್ಲಿ ಪೊಲಾರ್ಡ್ ಈ ಸಾಧನೆ ಮಾಡಿದರು. 2022 ರಲ್ಲಿ ಐಪಿಎಲ್‌ಗೆ ವಿದಾಯ ಹೇಳಿದ ಈ ಆಲ್‌ರೌಂಡರ್ ಸಿಪಿಎಲ್‌ ಸೇರಿ ಇತರೆ ಟಿ20 ಲೀಗ್​​ಗಳಲ್ಲಿ ಮುಂದುವರೆದಿದ್ದಾರೆ. ಈ ಋತುವಿನಲ್ಲಿ, ಪೊಲಾರ್ಡ್ ಕೋಲ್ಕತ್ತಾ ನೈಟ್ ರೈಡರ್ಸ್‌ನ ಸಿಸ್ಟರ್ ಫ್ರಾಂಚೈಸ್ ಟ್ರಿನ್‌ಬಾಗೊ ನೈಟ್ ರೈಡರ್ಸ್ ಅನ್ನು ಪ್ರತಿನಿಧಿಸುತ್ತಿದ್ದಾರೆ.

ಇತಿಹಾಸ ಸೃಷ್ಟಿಸಿದ ಪೊಲಾರ್ಡ್

ಈ ಪಂದ್ಯದ ಸಂದರ್ಭದಲ್ಲಿ, ಬ್ಯಾಟಿಂಗ್ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಟಿ20 ಸ್ವರೂಪದಲ್ಲಿ 14,000 ರನ್‌ಗಳ ಮೈಲಿಗಲ್ಲನ್ನು ತಲುಪಿದರು. ಇದಲ್ಲದೆ, ಅವರು 332 ಟಿ20 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಹಾಗಾಗಿ ಟಿ20 ಕ್ರಿಕೆಟ್​​ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಏಕೈಕ ಕ್ರಿಕೆಟಿಗ ಪೊಲಾರ್ಡ್ ಆಗಿದ್ದಾರೆ.

ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಗೇಲ್

ಪೊಲಾರ್ಡ್ ಇದುವರೆಗೆ ಒಟ್ಟು 712 ಟಿ20 ಪಂದ್ಯಗಳನ್ನು ಆಡಿ 14 ಸಾವಿರಕ್ಕೂ ಹೆಚ್ಚು ರನ್​ಗಳಿಸಿದ್ದಾರೆ. ಟಿ20ಯಲ್ಲಿ ಅತಿ ಹೆಚ್ಚು ರನ್​ಗಳಿಸಿದ ಸಾರ್ವಕಾಲಿಕ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ ಟಿ20 ಸ್ವರೂಪದಲ್ಲಿ 14,000 ಮೈಲಿಗಲ್ಲನ್ನು ತಲುಪಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಗೇಲ್ 463 ಪಂದ್ಯಗಳಿಂದ 22 ಶತಕಗಳು ಮತ್ತು 88 ಅರ್ಧಶತಕಗಳ ಸಹಾಯದಿಂದ 14,562 ರನ್ ಗಳಿಸಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಪೊಲಾರ್ಡ್ ಪ್ರಸ್ತುತ ಗೇಲ್‌ಗಿಂತ 563 ರನ್‌ಗಳ ಹಿಂದಿದ್ದಾರೆ.

ಇನ್ನು ಅಲೆಕ್ಸ್ ಹೇಲ್ಸ್ (13931), ಡೇವಿಡ್ ವಾರ್ನರ್ (13595), ಶೋಯಬ್ ಮಲಿಕ್ (13571), ವಿರಾಟ್ ಕೊಹ್ಲಿ(13543) ಹಾಗೂ ಜೋಸ್ ಬಟ್ಲರ್ (13338) ಗೇಲ್, ಪೊಲಾರ್ಡ್ ನಂತರದ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು?

ಇನ್ನು ಟಿ20 ಕ್ರಿಕೆಟ್​​ನಲ್ಲಿ ಅತಿ ಕಡಿಮೆ ಮಾದರಿಯ ಕ್ರಿಕೆಟ್‌ನಲ್ಲಿ 488 ಪಂದ್ಯಗಳಲ್ಲಿ 661 ವಿಕೆಟ್‌ಗಳನ್ನು ಪಡೆದಿರುವ ಅಫ್ಘಾನಿಸ್ತಾನದ ಸ್ಪಿನ್ ದಂತಕಥೆ ರಶೀದ್ ಖಾನ್, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮುಂದುವರೆದಿದ್ದಾರೆ. ಟಾಪ್ 5ರ ಪಟ್ಟಿ ನೋಡುವುದಾದರೆ, ಡ್ವೇನ್ ಬ್ರಾವೋ (631), ಸುನಿಲ್ ನರೇನ್ (590), ಇಮ್ರಾನ್ ತಾಹೀರ್(555) ಹಾಗೂ ಶಕಿಬ್ ಅಲ್ ಹಸನ್ (503) ಇದ್ದಾರೆ.

ಪಂದ್ಯದ ವಿವರ

ನೈಟ್ ರೈಡರ್ಸ್ ಶನಿವಾರ ಟ್ರಿನಿಡಾಡ್‌ನಲ್ಲಿ ಬಾರ್ಬಡೋಸ್ ರಾಯಲ್ಸ್ ಅನ್ನು ಎದುರಿಸಿತು. ನೈಟ್ ರೈಡರ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಬಾರ್ಬಡೋಸ್ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 178 ರನ್ ಗಳಿಸಿತ್ತು. ಶೆರ್ಫೇನ್ ರುದರ್ಫೋರ್ಡ್ (22 ಎಸೆತಗಳಲ್ಲಿ 45), ಕದೀಮ್ ಅಲೈನ್ (41) ಮತ್ತು ನಾಯಕ ರೋವ್ಮನ್ ಪೊವೆಲ್ (15 ಎಸೆತಗಳಲ್ಲಿ 31) ಗೌರವಾನ್ವಿತ ಸ್ಕೋರ್ ಗಳಿಸಿದರು.

ನಿಕೋಲಸ್ ಪೂರನ್ (40 ಎಸೆತಗಳಲ್ಲಿ 65 ನಾಟ್ ಔಟ್) ತಮ್ಮ ನಾಯಕತ್ವದ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು, ಆದರೆ ಪೊಲಾರ್ಡ್ (9 ಎಸೆತಗಳಲ್ಲಿ 19 ನಾಟ್ ಔಟ್) ಕೂಡ ವೇಗವಾಗಿ ಆಡಿದರು. ಈ ಅನುಕ್ರಮದಲ್ಲಿ, ಟ್ರಿನ್‌ಬಾಗೊ ನೈಟ್ ರೈಡರ್ಸ್ 17.5 ಓವರ್‌ಗಳಲ್ಲಿ 179 ರನ್ ಗಳಿಸಿ ಏಳು ವಿಕೆಟ್‌ಗಳಿಂದ ಜಯಗಳಿಸಿತು.