Last Updated:
ಚಂದ್ರಕಾಂತ್ ಪಂಡಿತ್‌ರ ಕೋಚಿಂಗ್‌ನಲ್ಲಿ ಕೆಕೆಆರ್ ಒಟ್ಟು 42 ಪಂದ್ಯಗಳನ್ನಾಡಿ, 22 ಗೆಲುವುಗಳು ಮತ್ತು 18 ಸೋಲುಗಳನ್ನು ಕಂಡಿತು. ಆದರೆ, ಅವರ ಕಟ್ಟುನಿಟ್ಟಾದ ತರಬೇತಿ ಶೈಲಿಯಿಂದಾಗಿ ಕೆಲವು ಆಟಗಾರರು, ವಿಶೇಷವಾಗಿ ವಿದೇಶಿ ಆಟಗಾರರು, ಅಸಮಾಧಾನ ವ್ಯಕ್ತಪಡಿಸಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ ಮೂರು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಐಪಿಎಲ್ 2026 ಸೀಸನ್‌ಗೂ ಮುನ್ನ ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ * ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 2022ರಲ್ಲಿ ಮಾಜಿ ಕೋಚ್ ಬ್ರೆಂಡನ್ ಮೆಕಲಮ್ (brendon McCullum) ಅವರ ಬದಲಾಗಿ ಕೆಕೆಆರ್‌ಗೆ ಮುಖ್ಯ ಕೋಚ್ ಆಗಿ ಸೇರಿದ್ದರು. 2024ರ ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ತಂಡವನ್ನು ಮೂರನೇ ಬಾರಿಗೆ ಚಾಂಪಿಯನ್ ಆಗುವಂತೆ ಮಾಡಿದ್ದರು. ಆದರೆ ಆ ಕ್ರೆಡಿಟ್ ಎಲ್ಲಾ ಮೆಂಟರ್ ಗೌತಮ್ ಗಂಭೀರ್ ಪಾಲಾಗಿತ್ತು. ಆದರೆ, 2025ರ ಐಪಿಎಲ್ ಸೀಸನ್‌ನಲ್ಲಿ ಕೆಕೆಆರ್‌ಗೆ ನಿರಾಸೆ ಉಂಟಾಯಿತು. ಶ್ರೇಯಸ್ ಅಯ್ಯರ್ ತಂಡವನ್ನು ತೊರೆದ ಬಳಿಕ, ಅಜಿಂಕ್ಯ ರಹಾನೆ ನಾಯಕತ್ವ ವಹಿಸಿಕೊಂಡರು. ಆದರೆ ತಂಡವು 14 ಪಂದ್ಯಗಳಲ್ಲಿ ಕೇವಲ 5 ಗೆಲುವುಗಳನ್ನು ಗಳಿಸಿ, 8ನೇ ಸ್ಥಾನಕ್ಕೆ ಕುಸಿದಿತ್ತು.
ಚಂದ್ರಕಾಂತ್ ಪಂಡಿತ್‌ರ ಕೋಚಿಂಗ್‌ನಲ್ಲಿ ಕೆಕೆಆರ್ ಒಟ್ಟು 42 ಪಂದ್ಯಗಳನ್ನಾಡಿ, 22 ಗೆಲುವುಗಳು ಮತ್ತು 18 ಸೋಲುಗಳನ್ನು ಕಂಡಿತು. ಆದರೆ, ಅವರ ಕಟ್ಟುನಿಟ್ಟಾದ ತರಬೇತಿ ಶೈಲಿಯಿಂದಾಗಿ ಕೆಲವು ಆಟಗಾರರು, ವಿಶೇಷವಾಗಿ ವಿದೇಶಿ ಆಟಗಾರರು, ಅಸಮಾಧಾನ ವ್ಯಕ್ತಪಡಿಸಿದ್ದರು. ಉದಾಹರಣೆಗೆ, ಮಾಜಿ ಕೆಕೆಆರ್ ಆಟಗಾರ ಡೇವಿಡ್ ವೀಸ್, ಪಂಡಿತ್ ಅವರನ್ನು ತುಂಬಾ ಕಟ್ಟುನಿಟ್ಟಿ ಕೋಚ್, ಕೋಪಿಷ್ಟ ಎಂದು ಕರೆದಿದ್ದರು.
ಕೆಕೆಆರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಂದ್ರಕಾಂತ್ ಪಂಡಿತ್ ಅವರ ರಾಜೀನಾಮೆಯನ್ನು ದೃಢಪಡಿಸಿದೆ. “ಚಂದ್ರಕಾಂತ್ ಪಂಡಿತ್ ಅವರು ಹೊಸ ಅವಕಾಶಗಳನ್ನು ಅನ್ವೇಷಿಸಲು ನಿರ್ಧರಿಸಿದ್ದಾರೆ ಮತ್ತು ಕೆಕೆಆರ್‌ನ ಮುಖ್ಯ ಕೋಚ್ ಆಗಿ ಮುಂದುವರಿಯದಿರಲು ತೀರ್ಮಾನಿಸಿದ್ದಾರೆ. 2024ರಲ್ಲಿ ಐಪಿಎಲ್ ಚಾಂಪಿಯನ್‌ಶಿಪ್ ಗೆಲುವಿನೊಂದಿಗೆ ತಂಡವನ್ನು ಬಲಿಷ್ಠಗೊಳಿಸಿದ ಅವರ ಕೊಡುಗೆಗೆ ನಾವು ಕೃತಜ್ಞರಾಗಿದ್ದೇವೆ. ಅವರ ನಾಯಕತ್ವ ಮತ್ತು ಶಿಸ್ತು ತಂಡದ ಮೇಲೆ ಶಾಶ್ವತ ಪ್ರಭಾವ ಬೀರಿದೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭವಾಗಲಿ,” ಎಂದು ಕೆಕೆಆರ್ ಹೇಳಿಕೆಯಲ್ಲಿ ತಿಳಿಸಿದೆ.
ಕೆಕೆಆರ್ ಇನ್ನೂ ಹೊಸ ಕೋಚ್‌ನ ಹೆಸರನ್ನು ಘೋಷಿಸಿಲ್ಲ. ಆದರೆ, ವರದಿಗಳ ಪ್ರಕಾರ, ಇಂಗ್ಲೆಂಡ್‌ನ ಮಾಜಿ ನಾಯಕ ಮತ್ತು ಕೆಕೆಆರ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ ಐಪಿಎಲ್ 2026ಕ್ಕೆ ಮುಖ್ಯ ಕೋಚ್ ಆಗಿ ಸೇರಬಹುದು. ಮಾರ್ಗನ್ 2021ರಲ್ಲಿ ಕೆಕೆಆರ್‌ನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಅಲ್ಲದೆ, ಕೆಕೆಆರ್‌ನ ಬೌಲಿಂಗ್ ಕೋಚ್ ಭರತ್ ಅರುಣ್ ಕೂಡ ತಂಡವನ್ನು ತೊರೆದಿದ್ದಾರೆ. ಅವರ ಸ್ಥಾನಕ್ಕೆ ಡ್ವೇನ್ ಬ್ರಾವೋ ಅವರನ್ನು ನೇಮಿಸುವ ಸಾಧ್ಯತೆ ಇದೆ, ಏಕೆಂದರೆ ಬ್ರಾವೋ ಈಗಾಗಲೇ ಕೆಕೆಆರ್‌ನ ಮೆಂಟರ್ ಆಗಿದ್ದಾರೆ.
2025ರ ಐಪಿಎಲ್‌ನಲ್ಲಿ ಕೆಕೆಆರ್‌ನ ಆಟಗಾರರ ಬದಲಾವಣೆ ಮತ್ತು ಗೌತಮ್ ಗಂಭೀರ್‌ರಂತಹ ಮೆಂಟರ್‌ನ ಕೊರತೆಯಿಂದಾಗಿ ತಂಡದ ಪ್ರದರ್ಶನ ಕುಸಿಯಿತು. ಇದೀಗ, ಚಂದ್ರಕಾಂತ್ ಪಂಡಿತ್ ಮತ್ತು ಭರತ್ ಅರುಣ್‌ರ ರಾಜೀನಾಮೆಯಿಂದ ಕೆಕೆಆರ್ ತಂಡವು ಐಪಿಎಲ್ 2026ಕ್ಕೆ ತಯಾರಾಗಲು ಹೊಸ ತಂತ್ರಗಳನ್ನು ರೂಪಿಸಬೇಕಾಗಿದೆ. ಮಾರ್ಗನ್ ಮತ್ತು ಬ್ರಾವೋ ತಂಡಕ್ಕೆ ಸೇರಿದರೆ, ಕೆಕೆಆರ್ ಮತ್ತೆ ಚಾಂಪಿಯನ್‌ಶಿಪ್ ಗೆಲ್ಲುವ ಗುರಿಯೊಂದಿಗೆ ಮುನ್ನಡೆಯಬಹುದು.
ಕೆಕೆಆರ್‌ನ ಈ ಬದಲಾವಣೆಯು ಐಪಿಎಲ್ 2026ರಲ್ಲಿ ತಂಡದ ಪ್ರದರ್ಶನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಕಾದುನೋಡಬೇಕಾದ ವಿಷಯ.
July 29, 2025 7:46 PM IST