Last Updated:
ಕೋಲ್ಕತ್ತಾ ನೈಟ್ ರೈಡರ್ಸ್ ಭಾರತೀಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರ ಸ್ನೇಹಿತ, ಟೀಮ್ ಇಂಡಿಯಾದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರು ಮುಂಬರುವ ಋತುವಿಗೆ ಮುಖ್ಯ ಕೋಚ್ ಆಗಿರುತ್ತಾರೆ ಎಂದು ಅಧಿಕೃತವಾಗಿ ಘೋಷಿಸಿದೆ.
ಐಪಿಎಲ್ 2026 (IPL 2026) ಕ್ಕೂ ಮುನ್ನ, ಕೋಲ್ಕತ್ತಾ ನೈಟ್ ರೈಡರ್ಸ್ (KKR) ಹೊಸ ಮುಖ್ಯ ಕೋಚ್ ಹೆಸರನ್ನ ಅಧಿಕೃತವಾಗಿ ಘೋಷಿಸಿದೆ. ರೋಹಿತ್ ಶರ್ಮಾ ಅವರ ಸ್ನೇಹಿತ ಅಭಿಷೇಕ್ ನಾಯರ್ ಅವರು ಕೆಕೆಆರ್‌ನ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಕೆಕೆಆರ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಿಂದ ಖಚಿತಪಡಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಭಾರತೀಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರ ಸ್ನೇಹಿತ, ಟೀಮ್ ಇಂಡಿಯಾದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರು ಮುಂಬರುವ ಋತುವಿಗೆ ಮುಖ್ಯ ಕೋಚ್ ಆಗಿರುತ್ತಾರೆ ಎಂದು ಅಧಿಕೃತವಾಗಿ ಘೋಷಿಸಿದೆ. ಅಭಿಷೇಕ್ ನಾಯರ್ ಅವರು ಆಸ್ಟ್ರೇಲಿಯಾ ಪ್ರವಾಸದ ಮೊದಲು ರೋಹಿತ್ ಶರ್ಮಾ ಅವರಿಗೆ ತೂಕ ಇಳಿಸಿಕೊಂಡು ಫಿಟ್ ಆಗಿರಲು ಸಹಾಯ ಮಾಡಿದ್ದರು. 7 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ ರೋಹಿತ್ ಶರ್ಮಾ ಆಸ್ಟ್ರೇಲಿಯಾದಲ್ಲಿ ಅರ್ಧಶತಕ ಮತ್ತು ಶತಕ ಗಳಿಸಿದ್ದರು. ಅವರಿಗೆ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಸಿಕ್ಕಿತ್ತು.
ಅಭಿಷೇಕ್ ನಾಯರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿರುವ ಬಗ್ಗೆ ಕೆಕೆಆರ್ ಸಿಇಒ ವೆಂಕಿ ಮೈಸೂರು ಮಾತನಾಡಿ, ” ಅಭಿಷೇಕ್ 2018 ರಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದಾರೆ ಮತ್ತು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರು ಮೈದಾನದ ಒಳಗೆ ಮತ್ತು ಹೊರಗೆ ನಮ್ಮ ಆಟಗಾರರನ್ನು ಪೋಷಿಸುತ್ತಿದ್ದಾರೆ. ಅವರಿಗೆ ಆಟದ ಬಗ್ಗೆ ಬಲವಾದ ತಿಳುವಳಿಕೆ ಇದೆ ಮತ್ತು ಆಟಗಾರರೊಂದಿಗೆ ತ್ವರಿತವಾಗಿ ಸಂಪರ್ಕ ಸಾಧಿಸುತ್ತಾರೆ, ಇದು ನಮ್ಮ ಬೆಳವಣಿಗೆಗೆ ಅನುಕೂಲವಾಗುತ್ತದೆ. ಅವರು ಕೆಕೆಆರ್‌ನ ಮುಖ್ಯ ಕೋಚ್ ಆಗಿರುತ್ತಾರೆ ಮತ್ತು ಕೆಕೆಆರ್ ಅನ್ನು ಹೊಸ ಅಧ್ಯಾಯಕ್ಕೆ ಕರೆದೊಯ್ಯುತ್ತಾರೆ ಎಂದು ನಮಗೆ ಭರವಸೆ ಇದೆ.” ಎಂದು ತಿಳಿಸಿದ್ದಾರೆ.
ಟೀಮ್ ಇಂಡಿಯಾದ ಸಹಾಯಕ ಕೋಚ್ ಆಗುವ ಮೊದಲು, ಅಭಿಷೇಕ್ ನಾಯರ್ ಕೆಕೆಆರ್‌ನ ಸಹಾಯಕ ಸಿಬ್ಬಂದಿಯ ಭಾಗವಾಗಿದ್ದರು. 2014 ರಲ್ಲಿ, ಕೆಕೆಆರ್ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಸಂದರ್ಭದಲ್ಲಿ ಕೆಕೆಆರ್ ತಂಡದ ಕೋಚಿಂಗ್ ಸ್ಟಾಫ್ ಆಗಿದ್ದರು. ನಂತರ ಭಾರತೀಯ ತಂಡದ ಸಹಾಯಕ ಕೋಚ್ ಆಗಿ ಬಡ್ತಿ ನೀಡಲಾಯಿತು, ಆದರೆ ಈ ಸ್ಥಾನವನ್ನು ಶೀಘ್ರದಲ್ಲೇ ಅವರಿಂದ ಕಸಿದುಕೊಳ್ಳಲಾಯಿತು. ಅಷ್ಟೇ ಅಲ್ಲ ಅವರ ಬಗ್ಗೆ ಹಲವಾರು ಆರೋಪಗಳನ್ನು ಎದುರಿಸಿದರು, ಆದರೆ ಈಗ ಕೋಲ್ಕತ್ತಾ ನೈಟ್ ರೈಡರ್ಸ್ ಅವರಿಗೆ ಮಹತ್ವದ ಪಾತ್ರವನ್ನು ವಹಿಸಿದೆ. ಕಳೆದ ಕೆಲವು ಋತುಗಳಲ್ಲಿ ತಂಡದ ಮುಖ್ಯ ಕೋಚ್ ಆಗಿದ್ದ ಚಂದ್ರಕಾಂತ್ ಪಂಡಿತ್ ಅವರೊಂದಿಗಿನ ಪಾಲುದಾರಿಕೆಯನ್ನು ಕೆಕೆಆರ್ ಕೊನೆಗೊಳಿಸಿತ್ತು.
ಅಭಿಷೇಕ್ ನಾಯರ್ ಈ ಹಿಂದೆ ಕೆಕೆಆರ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ 200 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಅವರು ಭಾರತಕ್ಕಾಗಿ ಕೇವಲ ಮೂರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಬಹಳ ಸಮಯದಿಂದ ಕೋಚಿಂಗ್ ವಲಯದಲ್ಲಿದ್ದಾರೆ. ಆದರೆ ಐಪಿಎಲ್ ತಂಡದ ಮುಖ್ಯ ಕೋಚ್ ಆಗಿ ಮೊದಲ ಬಾರಿಗೆ ಕಾರ್ಯ ನಿರ್ವಹಿಸಲಿದ್ದಾರೆ. ಅವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಸ್‌ನ ಮುಖ್ಯ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
October 30, 2025 5:25 PM IST