KKR vs GT: ಕೆಕೆಆರ್‌‌ ಗ್ರಿಲ್ ಮಾಡಿದ ಗಿಲ್! ಕೊಲ್ಕತ್ತಾಗೆ ಬಿಗ್ ಟಾರ್ಗೆಟ್ ನೀಡಿದ ಟೈಟನ್ಸ್!Shubman Gill stunning Batting for Gujarat titans to set big target

KKR vs GT: ಕೆಕೆಆರ್‌‌ ಗ್ರಿಲ್ ಮಾಡಿದ ಗಿಲ್! ಕೊಲ್ಕತ್ತಾಗೆ ಬಿಗ್ ಟಾರ್ಗೆಟ್ ನೀಡಿದ ಟೈಟನ್ಸ್!Shubman Gill stunning Batting for Gujarat titans to set big target

Last Updated:

ಗುಜರಾತ್ ಟೈಟನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕೊಲ್ಕತ್ತಾದ ಈಡೆನ್ ಗಾರ್ಡನ್ ಮೈದಾನದಲ್ಲಿ ಮುಖಾಮುಖಿಯಾಗಿದ್ದು, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ಬೃಹತ್ ಮೊತ್ತ ಕಲೆ ಹಾಕಿತು.

ಸಾಯಿ ಸುದರ್ಶನ್-ಶುಭ್‌ಮಾನ್ ಗಿಲ್ಸಾಯಿ ಸುದರ್ಶನ್-ಶುಭ್‌ಮಾನ್ ಗಿಲ್
ಸಾಯಿ ಸುದರ್ಶನ್-ಶುಭ್‌ಮಾನ್ ಗಿಲ್

2025ನೇ ಸಾಲಿನ 39ನೇ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟನ್ಸ್ (GT) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಕೊಲ್ಕತ್ತಾದ ಈಡೆನ್ ಗಾರ್ಡನ್ ಮೈದಾನದಲ್ಲಿ ಮುಖಾಮುಖಿಯಾಗಿದ್ದು, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ಬೃಹತ್ ಮೊತ್ತ ಕಲೆ ಹಾಕಿತು. ಆರಂಭಿಕರಾದ ಸಾಯಿ ಸುದರ್ಶನ್ (Sai Sudarshan) ಹಾಗೂ ಶುಭ್‌ಮಾನ್ ಗಿಲ್ (Shubhman Gill) ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ಆಡಿದರು. ಮಾತ್ರವಲ್ಲ ನಂತರ ಬಂದ ಜೋಸ್ ಬಟ್ಲರ್ (Joss Buttler) ಕೂಡ ವೇಗವಾಗಿ ರನ್ ಕಲೆ ಹಾಕಿದರು. ಅಂತಿಮವಾಗಿ ಗುಜರಾತ್ ಟೈಟನ್ಸ್ ನಿಗದಿತ 20 ಓವರ್‌ಗಳಲ್ಲಿ 195 ರನ್ ಕಲೆಹಾಕಿತು. ಆ ಮೂಲಕ ಕೆಕೆಆರ್‌ಗೆ 199 ರನ್‌ಗಳ ಟಾರ್ಗೆಟ್ ನೀಡಿದೆ.

ಈ ಪಂದ್ಯದಲ್ಲಿ ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಮಾಡಿದ ನಾಯಕ ಶುಭ್‌ಮಾನಗ ಗಿಲ್ ಕೇವಲ 53 ಎಸೆತಗಳಲ್ಲಿ 90 ರನ್ ಗಳಿಸಿ 10 ರನ್‌ಗಳಿಂದ ಶತಕ ವಂಚಿತರಾದರು. ಇನ್ನೋರ್ವ ಆರಂಭಿಕ ಆಟಗಾರ ಸಾಯಿ ಸುದರ್ಶನ್ 52 ರನ್ ಸಿಡಿಸಿ ಮಿಂಚಿದರು.