ಗುಜರಾತ್ ಟೈಟಾನ್ಸ್ ತಂಡ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ಹಾಗೂ 2 ಪಂದ್ಯಗಳಲ್ಲಿ ಸೋಲುವ ಮೂಲಕ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದ್ರೆ, ಇದಕ್ಕೆ ವ್ಯತಿರಿಕ್ತ ಎನನ್ನುವಂತೆ ಅಜಿಂಕ್ಯಾ ರಹಾನೆ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೋಲಿನ ಸುಳಿಯಲ್ಲಿ ಸಿಲುಕಿದೆ. ಮೇಲ್ನೋಟಕ್ಕೆ ತಂಡ ಬಲಿಷ್ಠವಾಗಿದ್ರೂ ಕೂಡ 7 ಪಂದ್ಯಗಳಲ್ಲಿ 3 ಗೆಲುವು ಹಾಗೂ 4 ಸೋಲುಗಳ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಗುಜರಾತ್ ತಂಡದ ಪರವಾಗಿ ನಾಯಕ ಶುಭ್ಮಾನ್ ಗಿಲ್, ಸಾಯಿ ಸುದರ್ಶನ್, ಜಾಸ್ ಬಟ್ಲರ್ ಹಾಗೂ ಶೆಫರ್ಡ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇನ್ನೂ ತಂಡದ ಬೌಲಿಂಗ್ ವಿಭಾಗವಂತು ಸಿಕ್ಕಾಪಟ್ಟೆ ಬಲಿಷ್ಠವಾಗಿದೆ. ವಿಶೇಷವಾಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ, ಸಿರಾಜ್ ಹಾಗೂ ರಶೀದ್ ಖಾನ್ ಮಿಂಚುತ್ತಿದ್ದಾರೆ.
ಕೆಕೆಆರ್ ತಂಡದಲ್ಲಿ ಎರಡು ಬದಲಾವಣೆ
ಇನ್ನೂ ಕೆಕೆಆರ್ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದರೂ ಕೂಡ ಬ್ಯಾಟಿಂಗ್‌ನಲ್ಲಿ ಬ್ಯಾಟರ್ಸ್‌ಗಳು ಹೇಳಿಕೊಳ್ಳುವಂತಹ ಪ್ರದರ್ಶನ ತೋರುತ್ತಿಲ್ಲ. ಇದು ತಂಡದ ಸೋಲಿಗೆ ಕಾರಣವಾಗ್ತಾ ಇದೆ. ಅಜಿಂಕ್ಯಾ ರಹಾನೆ ಉತ್ತಮ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್ನಲ್ಲಿ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್ ಆಸರೆಯಾಗಿದ್ದಾರೆ. ಇನ್ನೂ ಇಂದಿನ ಪಂದ್ಯದಲ್ಲಿ ಕೆಕೆಆರ್ ಪ್ರಮುಖ ಎರಡು ಬದಲಾವಣೆಗಳನ್ನು ಮಾಡಿಕೊಂಡಿದೆ. ಅಫ್ಘಾನಿಸ್ತಾನದ ಗುರ್ಬಾಜ್ ಹಾಗೂ ಮೋಯಿನ್ ಅಲಿಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ನೀಡಿದ್ದಾರೆ.
ಇದನ್ನೂ ಓದಿ: IPL 2025: ಸೋಲಿನ ಸುಳಿಗೆ ಸಿಲುಕಿರುವ ರಾಜಸ್ಥಾನ್ ರಾಯಲ್ಸ್‌ಗೆ ಬಿಗ್ ಶಾಕ್! ಆರ್‌ಸಿಬಿ ವಿರುದ್ಧದ ಪಂದ್ಯದಿಂದಲೂ ಈ ಬಿಗ್ ಹಿಟ್ಟರ್ ಔಟ್
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೀ), ಶೆರ್ಫೇನ್ ರುದರ್‌ಫೋರ್ಡ್, ರಾಹುಲ್ ತೆವಾಟಿಯಾ, ವಾಷಿಂಗ್ಟನ್ ಸುಂದರ್, ಶಾರುಖ್ ಖಾನ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ತಂಡದಲ್ಲಿ ಇದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಜ್ (ಕೀಪರ್), ಸುನಿಲ್ ನರೈನ್, ಅಜಿಂಕ್ಯಾ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಮೊಯಿನ್ ಅಲಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ ಇದ್ದಾರೆ.
April 21, 2025 7:05 PM IST