KKR vs LSG: ರಹಾನೆ, ರಿಂಕು ಹೋರಾಟ ವ್ಯರ್ಥ! ಲಕ್ನೋ ವಿರುದ್ಧ ಗೆಲ್ಲುವ ಪಂದ್ಯವನ್ನ ಕೈಯ್ಯಾರೆ ಕಳೆದುಕೊಂಡ KKR | KKR vs LSG Lucknow Super Giants Clinch 4-Run Victory in High-Scoring Thriller

KKR vs LSG: ರಹಾನೆ, ರಿಂಕು ಹೋರಾಟ ವ್ಯರ್ಥ! ಲಕ್ನೋ ವಿರುದ್ಧ ಗೆಲ್ಲುವ ಪಂದ್ಯವನ್ನ ಕೈಯ್ಯಾರೆ ಕಳೆದುಕೊಂಡ KKR | KKR vs LSG Lucknow Super Giants Clinch 4-Run Victory in High-Scoring Thriller

Last Updated:

ಲಕ್ನೋ ಸೂಪರ್ ಜೈಂಟ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ರನ್​ಗಳ ರೋಚಕ ಜಯ ಸಾಧಿಸಿದೆ. ಕೆಕೆಆರ್ 234 ರನ್​ಗಳಿಸಿ ಸೋಲನುಭವಿಸಿತು. ರಹಾನೆ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್ ಹೋರಾಟ ವ್ಯರ್ಥವಾಯಿತು.

ಲಕ್ನೋ ಸೂಪರ್ ಜೈಂಟ್ಸ್​ಗೆ ರೋಚಕ ಜಯಲಕ್ನೋ ಸೂಪರ್ ಜೈಂಟ್ಸ್​ಗೆ ರೋಚಕ ಜಯ
ಲಕ್ನೋ ಸೂಪರ್ ಜೈಂಟ್ಸ್​ಗೆ ರೋಚಕ ಜಯ

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ ಪ್ರಸಕ್ತ ಋತುವಿನ 21ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್  4 ರನ್​ಗಳ ರೋಚಕ ಜಯ ಸಾಧಿಸಿದೆ. ಲಕ್ನೋ ನೀಡಿದ್ದ 239ರನ್​ಗಳ ಗುರಿಯನ್ನ ಬೆನ್ನಟ್ಟಿದ ಕೆಕೆಆರ್ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 234ರನ್​ಗಳಿಸಿ, ಕೇವಲ 4 ರನ್​ಗಳ ಸೋಲು ಕಂಡಿತು. ನಾಯಕ ರಹಾನೆ (61), ವೆಂಕಟೇಶ್ ಅಯ್ಯರ್ (45) ಹಾಗೂ ರಿಂಕು ಸಿಂಗ್​ (ಅಜೇಯ 38) ಗೆಲುವಿಗಾಗಿ ನಡೆಸಿದ ಹೋರಾಟ ವ್ಯರ್ಥವಾಯಿತು.

ಟಾಸ್​ ಗೆದ್ದ ಕೆಕೆಆರ್ ಲಕ್ನೋಗೆ ಬ್ಯಾಟಿಂಗ್ ನೀಡಿತು. ಇನ್ನಿಂಗ್ಸ್ ಆರಂಭಿಸಿದ ಮಾರ್​ಷ್​-ಮಾರ್ಕ್ರಮ್ ಜೋಡಿ, ಮೊದಲ ವಿಕೆಟ್​ ಜೊತೆಯಾಟದಲ್ಲೇ 10.2 ಓವರ್​ಗಳ ಆಟವಾಡಿ 99 ರನ್​ ಸೇರಿಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾರ್ಕ್ರಮ್ ಇಂದು 28 ಎಸೆತಗಳಲ್ಲಿ ಬೌಂಡರಿ, 2 ಸಿಕ್ಸರ್ ಸಹಿತ 47 ರನ್​ಗಳಿಸಿ ಹರ್ಷಿತ್ ರಾಣಾ ಬೌಲಿಂಗ್​ನಲ್ಲಿ ಬೌಲ್ಡ್ ಆದರು.

ವಿಕೆಟ್ ಕಳೆದುಕೊಂಡರೂ ಲಕ್ನೋ ಬ್ಯಾಟರ್​ಗಳ ಅಬ್ಬರ ನಿಲ್ಲಲಿಲ್ಲ. ಮಿಚೆಲ್ ಮಾರ್ಷ್​ ಹಾಗೂ ಪೂರನ್ 2ನೇ ವಿಕೆಟ್​ ಜೊತೆಯಾಟದಲ್ಲಿ ಕೇವಲ 30 ಎಸೆತಗಳಲ್ಲಿ 71 ರನ್​ ಸೇರಿಸಿದರು. ಆ್ಯಂಡ್ರೆ ರಸೆಲ್ ಈ ಸ್ಫೋಟಕ ಜೋಡಿಯನ್ನ ಬೇರ್ಪಡಿಸಿದರು. ಮಾರ್ಷ್ 48 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್​ಗಳ ನೆರವಿನಿಂದ 81 ರನ್​ಗಳಿಸಿ ಔಟ್ ಆದರು.

ನಂತರ ಕೆಕೆಆರ್​ ಬೌಲರ್​ಗಳನ್ನ ಬೆವರಿಳಿಸುವ ಕೆಲಸ ಪೂರನ್ ತೆಗೆದುಕೊಂಡರು. ಕೊನೆಯವರೆಗೂ ಅಬ್ಬರಿಸಿದ ಪೂರನ್ 36 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್​ಗಳ ಸಹಿತ ಅಜೇಯ 86 ರನ್​ಗಳಿಸಿದರು.

ಕೆಕೆಆರ್ ಬೌಲರ್​ಗಳ ಪೈಕಿ ಹರ್ಷಿತ್ ರಾಣಾ 2 ವಿಕೆಟ್ ಪಡೆದರಾದರೂ 51ರನ್​ ಬಿಟ್ಟುಕೊಟ್ಟು ದುಬಾರಿಯಾದರು. ಆ್ಯಂಡ್ರೆ ರಸೆಲ್ 32ಕ್ಕೆ1 ವಿಕೆಟ್ ಪಡೆದರು.