ಟಾಸ್ ಗೆದ್ದ ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ಮೊದಲೆರಡು ಓವರ್ ನಿಧಾನವಾಗಿ ಆಡಿದರೂ, ನಂತರ ಸ್ಫೋಟಕ ಆಟಕ್ಕೆ ಮುಂದಾಯಿತು.ಆದರೆ 4ನೇ ಓವರ್ನಲ್ಲೇ ಉತ್ತಮ ಫಾರ್ಮ್ನಲ್ಲಿದ್ದ ಪ್ರಿಯಾಂಶ್ ಆರ್ಯ ವಿಕೆಟ್ ಕಳೆದುಕೊಂಡಿತು. ಆರ್ಯ 12 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 22 ರನ್ಗಳಿಸಿ ಹರ್ಷಿತ್ ರಾಣಾಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್ನಲ್ಲಿ ನಾಯಕ ಶ್ರೇಯಸ್ ಅಯ್ಯರ್ ಕೇವಲ 2 ಎಸೆತಗಳನ್ನೆದುರಿಸಿ ಸಿಲ್ವರ್ ಡಕ್ ಆದರು.
ಪವರ್ ಪ್ಲೇನಲ್ಲೇ 4 ವಿಕೆಟ್ ಗಾನ್
ಟೂರ್ನಿಯಲ್ಲಿ ಮೊದಲ ಅವಕಾಶ ಪಡೆದಿದ್ದ ಜೋಸ್ ಇಂಗ್ಲಿಸ್ ಕೇವಲ 2 ರನ್ಗಳಿಸಿ ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಪವರ್ ಪ್ಲೇನ ಕೊನೆಯ ಓವರ್ನಲ್ಲಿ ಸತತ 2 ಸಿಕ್ಸರ್ ಬಾರಿಸಿದ್ದ ಪ್ರಭಸಿಮ್ರನ್ ಸಿಂಗ್ ಮತ್ತೊಂದು ದೊಡ್ಡ ಹೊಡೆತಕ್ಕೆ ಮುಂದಾಗಿ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು. ಅವರು 15 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ಗಳ ಸಹಿತ 30 ರನ್ಗಳಿಸಿ ಔಟ್ ಆದರು. ಪವರ್ ಪ್ಲೇ ಮುಗಿಯುವುದರೊಳಗೆ ಪಂಜಾಬ್ 54 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು.
ಇಂದೂ ಕೈಹಿಡಿಯದ ಮಧ್ಯಮ ಕ್ರಮಾಂಕ
ನೆಹಾಲ್ ವಧೇರಾ ಹಾಗೂ ಮ್ಯಾಕ್ಸ್ವೆಲ್ 5ನೇ ವಿಕೆಟ್ಗೆ 20 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡುವ ಅಶ್ವಾಸನೆ ನೀಡಿದರಾದರೂ, 9ನೇ ಓವರ್ನಲ್ಲಿ ವಧೇರಾ (10) ಹಾಗೂ 10ನೇ ಓವರ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಕೇವಲ 7 ರನ್ಗಳಿಸಿ ಔಟ್ ಆಗುವುದರೊಂದಿಗೆ ಪಂಜಾಬ್ ಸವಾಲಿಗ ಗುರಿ ನೀಡುವ ಚಾನ್ಸ್ ಅಂತ್ಯವಾಯಿತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಸೂರ್ಯಾಂಶ್ ಶೆಡ್ಗೆ 4 ರನ್ಗಳಿಗೆ ಔಟ್ ಆದರೆ, ಮಾರ್ಕೊ ಜಾನ್ಸನ್ (1) ನರೈನ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. 16 ಎಸೆತಗಳಲ್ಲಿ 18 ರನ್ಗಳಿಸಿದ್ದ ಶಶಾಂಕ್ ಸಿಂಗ್ 16ನೇ ಓವರ್ನಲ್ಲಿ ವೈಭವ್ ಅರೋರಾ ಬೌಲಿಂಗ್ನಲ್ಲಿ ಎಲ್ಡಬ್ಲ್ಯೂ ಆದರು. ಕೊನೆಯಲ್ಲಿ ಕ್ಸೇವಿಯರ್ ಬಾರ್ಲೆಟ್ ರನ್ಔಟ್ ಆಗುವುದರೊಂದಿಗೆ ಪಂಜಾಬ್ ತಂಡ ಇನ್ನೂ 27 ಎಸೆತಗಳಿರುವಂತೆಯೇ ಆಲೌಟ್ ಆಯಿತು.
ಇದನ್ನೂ ಓದಿ: ಸಿಎಸ್ಕೆಗೆ ಗೆಲುವಿನಲ್ಲಿ ನಿರ್ಣಾಯಕ ಪಾತ್ರ! ಪದಾರ್ಪಣೆ ಪಂದ್ಯದಲ್ಲೇ ಶೇಖ್ ರಶೀದ್ಗೆ ವಿಶೇಷ ಗೌರವ
ಕೆಕೆಆರ್ ಮಾರಕ ಬೌಲಿಂಗ್ ದಾಳಿ
ಕೆಕೆಆರ್ ಪರ ಹರ್ಷಿತ್ ರಾಣಾ 25ಕ್ಕೆ 3, ವರುಣ್ ಚಕ್ರವರ್ತಿ 21ಕ್ಕೆ2, ಸುನೀಲ್ ನರೈನ್ 14ಕ್ಕೆ2, ಎನ್ರಿಚ್ ಕ್ಲಾಸೆನ್ ಹಾಗೂ ವೈಭವ್ ಅರೋರಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ತಂಡದಲ್ಲಿ ಬದಲಾವಣೆ
ಈ ಪಂದ್ಯದಲ್ಲಿ ಗಾಯಾಳು ಕಿವೀಸ್ ವೇಗಿ ಲಾಕಿ ಫರ್ಗ್ಯುಸನ್ ಬದಲಿಗೆ ಕ್ಸೇವಿಯರ್ ಬಾರ್ಟ್ಲೆಟ್ ತಂಡ ಸೇರಿಕೊಂಡಿದ್ದಾರೆ. ಮಾರ್ಕಸ್ ಸ್ಟೋಯ್ನಿಸ್ ಬದಲಿಗೆ ಜೋಸ್ ಇಂಗ್ಲಿಸ್ ಆಡುತ್ತಿದ್ದಾರೆ.
ಇನ್ನು ಕೆಕೆಆರ್ 6 ಪಂದ್ಯಗಳಲ್ಲಿ 3 ಗೆಲುವು ಮತ್ತು 3 ಸೋಲುಗಳಿಂದ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪಿಬಿಕೆಎಸ್ ಕೂಡ 6 ಅಂಕಗಳನ್ನು ಹೊಂದಿದೆ, ಆದರೆ ಕೆಆರ್ಆರ್ ಗಿಂತ ಒಂದು ಪಂದ್ಯ ಕಡಿಮೆ ಆಡಿದೆ. ಆದರೆ ನೆಟ್ ರನ್ರೇಟ್ನಲ್ಲಿ ಕೆಕೆಆರ್ಗಿಂತ ಹಿಂದಿರುವುದರಿಂದ 6ನೇ ಸ್ಥಾನದಲ್ಲಿದೆ.
ಹೆಡ್ ಟು ಹೆಡ್ ದಾಖಲೆ
ಪಂಜಾಬ್ ಮತ್ತು ಕೋಲ್ಕತ್ತಾ ನಡುವೆ ಇದುವರೆಗೆ 33 ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಕೆಕೆಆರ್ ಮೇಲುಗೈ ಸಾಧಿಸಿತ್ತು. ಕೆಕೆಆರ್ 21 ಪಂದ್ಯಗಳನ್ನು ಗೆದ್ದಿದೆ. ಅದೇ ಸಮಯದಲ್ಲಿ, ಪಿಬಿಕೆಎಸ್ ಕೇವಲ 12 ಪಂದ್ಯಗಳಲ್ಲಿ ಜಯ ಸಾಧಿಸಿತು.
ಇದನ್ನೂ ಓದಿ: IPL ಮಧ್ಯದಲ್ಲಿ 2 ತಂಡಗಳಲ್ಲಿ ಬದಲಾವಣೆ! CSK ಸೇರಿದ 17 ವರ್ಷದ ಯುವಕ! ಹೈದರಾಬಾದ್ಗೆ ಕನ್ನಡಿಗ ಸೇರ್ಪಡೆ
ಪ್ಲೇಯಿಂಗ್ ಇಲೆವೆನ್
ಕೋಲ್ಕತ್ತಾ ನೈಟ್ ರೈಡರ್ಸ್ : ಸುನಿಲ್ ನರೈನ್, ಕ್ವಿಂಟನ್ ಡಿ ಕಾಕ್ (ವಿಕೀ), ಅಜಿಂಕ್ಯ ರಹಾನೆ (ನಾಯಕ), ಆಂಗ್ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ಎನ್ರಿಚ್ ನೋಕಿಯಾ, ವೈಭವ್ ಅರೋರ
ಪಂಜಾಬ್ ಕಿಂಗ್ಸ್ : ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ (ವಿಕೀ), ಶ್ರೇಯಸ್ ಅಯ್ಯರ್ (ನಾಯಕ), ಜೋಸ್ ಇಂಗ್ಲಿಸ್, ನೆಹಾಲ್ ವಧೇರಾ, ಗ್ಲೆನ್ ಮ್ಯಾಕ್ಸ್ವೆಲ್, ಶಶಾಂಕ್ ಸಿಂಗ್, ಕ್ಸೇವಿಯರ್ ಬಾರ್ಟ್ಲೆಟ್, ಮಾರ್ಕೊ ಜಾನ್ಸೆನ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಹಲ್.
April 15, 2025 9:04 PM IST