Last Updated:
2025ರ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 174 ರನ್ ಸಿಡಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಆರ್ಸಿಬಿ ಇನ್ನು 22 ಎಸೆತಗಳಿರುವಂತೆ ತಲುಪುವ ಮೂಲಕ ಸುಲಭ ಜಯ ಸಾಧಿಸಿತು. ವಿರಾಟ್ ಕೊಹ್ಲಿ (ಅಜೇಯ 59) ಹಾಗೂ ಫಿಲ್ ಸಾಲ್ಟ್( 56) ಅರ್ಧಶತಕ ಸಿಡಿಸಿ ಗೆಲುವಿನ ರೂವಾರಿಗಳಾದರು.
ಆರ್ಸಿಬಿ 2025ರ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿದೆ. ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ 7 ವಿಕೆಟ್ಗಳ ಸುಲಭ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 174 ರನ್ ಸಿಡಿಸಿತ್ತು. 175ರನ್‌ಗಳ ಗುರಿಯನ್ನ ಬೆನ್ನಟ್ಟಿದ ಆರ್ಸಿಬಿ ಇನ್ನು 22 ಎಸೆತಗಳಿರುವಂತೆ ತಲುಪುವ ಮೂಲಕ ಸುಲಭ ಜಯ ಸಾಧಿಸಿತು. ವಿರಾಟ್ ಕೊಹ್ಲಿ (ಅಜೇಯ 59) ಹಾಗೂ ಫಿಲ್ ಸಾಲ್ಟ್( 56) ಅರ್ಧಶತಕ ಸಿಡಿಸಿ ಗೆಲುವಿನ ರೂವಾರಿಗಳಾದರು.
175 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ತಂಡ 16.2 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಗುರಿಯನ್ನು ತಲುಪಿತು. ವಿರಾಟ್ ಕೊಹ್ಲಿ 36 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ಗಳ ಸಹಿತ ಅಜೇಯ 59 ರನ್ಗಳಿಸಿದರೆ, ಮತ್ತೊಬ್ಬ ಆರಂಭಿಕ ಬ್ಯಾಟರ್ ಫಿಲಿಪ್ ಸಾಲ್ಟ್ 31 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ 56 ರನ್ಗಳಿಸಿದರು. ನಾಯಕ ರಜತ್ ಪಟಿದಾರ್ ಕೇವಲ 16 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 34 ಸಿಡಿಸಿದರೆ, ಲಿವಿಗ್ಸ್ಟೋನ್ 5 ಎಸೆತಗಳಲ್ಲಿ ಅಜೇಯ 15 ರನ್ ಸಿಡಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಕೋಲ್ಕತ್ತಾ ಪರ ವೈಭವ್ ಅರೋರಾ, ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ತಲಾ ಒಂದು ವಿಕೆಟ್ ಪಡೆದರು.
ಅಬ್ಬರಿಸಿದ್ದ ರಹಾನೆ-ನರೈನ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ನಾಯಕ ಅಜಿಂಕ್ಯ ರಹಾನೆ (56; 31 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್) ಅರ್ಧಶತಕ ಗಳಿಸಿ ಗಮನ ಸೆಳೆದರು. ಸುನಿಲ್ ನರೈನ್ (44; 26 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್) ಕೂಡ ಮಿಂಚಿದರು. ಅಂಗ್ಕ್ರಿಶ್ ರಘುವಂಶಿ (30; 2 ಸಿಕ್ಸರ್, 22 ಎಸೆತಗಳಲ್ಲಿ 1 ಬೌಂಡರಿ) ಮಿಂಚಿದರು.
ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರಿಂದ ಕೆಕೆಆರ್ 200ರನ್‌ಗಳ ಗುರಿ ತಲುಪುವಲ್ಲಿ ವಿಫಲವಾಯಿತು. ಬೆಂಗಳೂರು ಪರ ಕೃನಾಲ್ ಪಾಂಡ್ಯ 3 ವಿಕೆಟ್ ಪಡೆದರೆ, ಹ್ಯಾಜಲ್‌ವುಡ್ 2, ಸುಯಾಶ್ ಶರ್ಮಾ, ರಸಿಕ್ ಸಲಾಂ ಮತ್ತು ಯಶ್ ದಯಾಳ್ ತಲಾ ಒಂದು ವಿಕೆಟ್ ಪಡೆದರು.
ಇನ್ನಿಂಗ್ಸ್ ಆರಂಭಿಸಿದ ಕೋಲ್ಕತ್ತಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಹ್ಯಾಜಲ್‌ವುಡ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಕ್ವಿಂಟನ್ ಡಿ ಕಾಕ್ (4) ಔಟಾದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರರಾಗಿರುವ ವೆಂಕಟೇಶ್ ಅಯ್ಯರ್ (6) , ರಿಂಕು ಸಿಂಗ್ (12) ಮತ್ತು ಆಂಡ್ರೆ ರಸೆಲ್ (4) ಕೂಡ ಹೆಚ್ಚು ವಿಫಲವಾಗಿದ್ದು ಕೆಕೆಆರ್ಗೆ ದೊಡ್ಡ ಹಿನ್ನಡೆಯಾಯಿತು.
March 22, 2025 10:52 PM IST