Last Updated:
ಕೊರಗಜ್ಜ ಸಿನಿಮಾ ಶ್ರುತಿ, ಭವ್ಯ, ಕಬೀರ್ ಬೇಡಿ ಅಭಿನಯದಲ್ಲಿ 6 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ನಂದಿಗುಡ್ಡ ಕೊರಗಜ್ಜ ಕೋಲ ಸೇವೆಯಲ್ಲಿ ಚಿತ್ರತಂಡ ಭಾಗವಹಿಸಿದ್ದು 3 ವರ್ಷಗಳ ನಂತರ ಬಿಡುಗಡೆಗೆ ಸಿದ್ಧವಾಗಿದೆ.
ದಕ್ಷಿಣ ಕನ್ನಡ: ಸಾರ್ಲಪಟ್ಟದ ಮಾಯಕಾರೆ, ಕಲಿಯುಗದ ಕಾರ್ನಿಕ ದೈವ, ತೋಜಾಯೆ ಬಬ್ಬು ಧರ್ಮೋನು-ಅರ್ದಾಯೆ ತನಿಯೆ ಕರ್ಮೋನು- ಕೊನೆಯೆ ಗುಳಿಗೆ ಜೀವೋನು (Tulu Belief) ಎಂಬಂತೆ ನಮ್ಮ ನಮ್ಮ ಕರ್ಮಾನುಸಾರ (Deed) ಬಂದವರಿಗೆ ಬೇಡಿದ್ದನ್ನು ಕೊಡುವ ತನಿಯ ಕಾರ್ನಿಕದ (Mysterious Power) ಕೊರಗಜ್ಜನ ಚಲನಚಿತ್ರ (Cinema) ತೆರೆ ಮೇಲೆ ಬರಲು ಸಿದ್ಧವಾಗಿದೆ. ಈಗಾಗಲೇ ಚಿತ್ರದ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದ್ದು, ಹರಕೆ ಕೋಲದಲ್ಲಿ ಏನಾಯ್ತು? ಅಜ್ಜನ ಒಪ್ಪಿಗೆ ಸಿಕ್ತಾ? ಎಂಬ ವಿಷಯದ ಮಾಹಿತಿ ಇಲ್ಲಿದೆ.
ತುಳುನಾಡ ಕಾರಣಿಕ ದೈವ ಕೊರಗಜ್ಜನಿಗೆ ಕೊರಗಜ್ಜ ಚಿತ್ರತಂಡ ಹರಕೆಯ ಕೋಲ ಸೇವೆ ಒಪ್ಪಿಸಿದೆ. ಮಂಗಳೂರಿನ ನಂದಿಗುಡ್ಡ ಕೊರಗಜ್ಜ ಸಾನಿಧ್ಯದಲ್ಲಿ ನಡೆದ ಅದ್ದೂರಿ ಕೋಲದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಾದ ಶ್ರುತಿ, ಭವ್ಯ, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ ನಟರು ಭಾಗಿಯಾಗಿದ್ದಾರೆ.
6 ಭಾಷೆಗಳಲ್ಲಿ ನಿರ್ಮಾಣಗೊಂಡು ಬಿಡುಗಡೆಗೆ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ ‘ಕೊರಗಜ್ಜ’ ಸಿನಿಮಾ ಶ್ರುತಿ, ಭವ್ಯ, ಕಬೀರ್ ಬೇಡಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಸುಧೀರ್ ಅತ್ತಾವರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ತ್ರಿವಿಕ್ರಮ ಸಪಲ್ಯ ನಿರ್ಮಾಣದ ‘ಸಕ್ಸಸ್ ಫಿಲ್ಮ್ಸ್’ ಹಾಗೂ ‘ತ್ರಿವಿಕ್ರಮ ಸಿನಿಮಾಸ್’ ಮೂಲಕ ಈ ಸಿನಿಮಾ ನಿರ್ಮಾಣವಾಗುತ್ತಿದೆ.
ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಹಾಗೂ ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಕೆಲಸ ಮಾಡಿದ್ದಾರೆ. ತುಳು, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಒಟ್ಟು 6 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಗೊಳ್ಳಲಿದೆ. ಕೊರಗಜ್ಜ ಸಿನಿಮಾ 3 ವರ್ಷಗಳ ಹಿಂದೆ ಸೆಟ್ಟೇರಿತ್ತು. ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಅಜ್ಜನ ಕೋಲ ಸೇವೆಯನ್ನು ಸುಮಾರು 1500 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಕಣ್ತುಂಬಿಕೊಂಡಿದ್ದಾರೆ. ಕೊರಗಜ್ಜ ಚಿತ್ರದ ಯಶಸ್ಸಿಗಾಗಿ ಹರಕೆ ಹೇಳಿದ್ದ ಚಿತ್ರತಂಡ ಇದೀಗ ಹರಕೆಯ ಕೋಲವನ್ನು ಒಪ್ಪಿಸಿದೆ.
Dakshina Kannada,Karnataka
November 12, 2025 5:55 PM IST