Kukke Rathotsava: ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವ ಸಂಭ್ರಮ, ಅಪಾರ ಭಕ್ತರ ಸಡಗರ! | Kukke Subramanya Rathotsava | ದಕ್ಷಿಣ ಕನ್ನಡ

Kukke Rathotsava: ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವ ಸಂಭ್ರಮ, ಅಪಾರ ಭಕ್ತರ ಸಡಗರ! | Kukke Subramanya Rathotsava | ದಕ್ಷಿಣ ಕನ್ನಡ

Last Updated:

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಭಕ್ತಿ-ಸಡಗರ-ಸಂಭ್ರಮದೊಂದಿಗೆ ನೆರವೇರಿತು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಕುಕ್ಕೆ (Kukke) ಪುರದೊಡೆಯ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ (Rathotsava) ಭಕ್ತಿ-ಸಡಗರ-ಸಂಭ್ರಮದೊಂದಿಗೆ ನೆರವೇರಿದೆ. ಬೆಳಗ್ಗಿನ 7.29 ರ ವೃಶ್ಚಿಕ ಲಗ್ನದಲ್ಲಿ ಸ್ವಾಮಿಯು ರಥಾರೂಢನಾಗಿದ್ದು, ಆ ಬಳಿಕ ನಡೆದ ಧಾರ್ಮಿಕ ವಿಧಿ-ವಿಧಾನಗಳ ಬಳಿಕ ಭಕ್ತರು ರಥವನ್ನು ಎಳೆದು ಪುನೀತರಾದರು. ರಥೋತ್ಸವಕ್ಕೆ ಮೊದಲು ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿಯ ಜೊತೆಗೆ ಶಿವ-ಪಾರ್ವತಿಯರ ಉತ್ಸವಮೂರ್ತಿಗಳನ್ನು ದೇವಳದ ಒಳಾಂಗಣದಲ್ಲಿ ಬಲಿಸೇವೆ ನೆರವೇರಿಸಿದ ಬಳಿಕ ರಥದ ಬಳಿ ತರಲಾಯಿತು. ವೇದಘೋಷಗಳ ಮೊಳಗುವಿಕೆಯೊಂದಿದೆ, ಚಾಮರ ಬೀಸುತ್ತಾ ಕ್ಷೇತ್ರದ ಆನೆ ಯಶಸ್ವಿಯು ಮುಂದೆ ಸಾಗಿದರೆ, ಅದರ ಹಿಂದೆ ದೇವರನ್ನು (God) ಪಲ್ಲಕ್ಕಿಯಲ್ಲಿ ಹೊತ್ತು ರಥದ ಬಳಿ ತರಲಾಯಿತು. ಬ್ರಹ್ಮರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ದೇವರು ರಥದಲ್ಲಿ ಆಸೀನರಾಗಿದ್ದಾರೆ. ಭಕ್ತಾಧಿಗಳು (Devotees) ದೇವರಿಗೆ ಅರ್ಪಿಸಲು ತಂದು ಎಳ್ಳು-ಸಾಸಿವೆ ಕಾಳನ್ನು ರಥಕ್ಕೆ ಎಸೆಯುವ ಮೂಲಕ ರಥೋತ್ಸವದಲ್ಲಿ ಭಾಗಿಯಾದರು.

ಅದ್ಧೂರಿಯಾಗಿ ನಡೆದ ಬ್ರಹ್ಮರಥೋತ್ಸವ

ರಥೋತ್ಸವನ್ನು ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರ ರಾಜ್ಯದಿಂದಲೂ ಭಕ್ತರ ದಂಡು ಕ್ಷೇತ್ರಕ್ಕೆ ಆಗಮಿಸಿ, ಬ್ರಹ್ಮರಥವನ್ನು ಕಂಡು ಪುನೀತರಾದರು. ಬ್ರಹ್ಮರಥದ ಹಿಂದಿನ ದಿನ ಅಂದರೆ ಪಂಚಮಿಯಂದು ರಾತ್ರಿ ಸುಬ್ರಹ್ಮಣ್ಯ ಸ್ವಾಮಿಯ ಪಂಚಮಿ ರಥೋತ್ಸವ ನಡೆಯುತ್ತದೆ. ಮಧ್ಯರಾತ್ರಿ ಸುಮಾರಿಗೆ ನೆರವೇರುವ ಈ ರಥೋತ್ಸವ ಸಂದರ್ಭದಲ್ಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರುತ್ತಾರೆ. ಕ್ಷೇತ್ರದಲ್ಲಿ ಚಂಪಾಷಷ್ಠಿ ಪ್ರಯುಕ್ತ ಮೂರು ದಿನಗಳ ಕಾಲ ವಿಶೇಷ ಧಾರ್ಮಿಕ ವಿಧಿ-ವಿಧಾನಗಳು ನಡೆಯುತ್ತದೆ. ಚೌತಿಯಂದು ಸುಬ್ರಹ್ಮಣ್ಯ ಸ್ವಾಮಿಗೆ ಹೂವಿನ ರಥೋತ್ಸವ ನಡೆದರೆ, ಪಂಚಮಿಯಂದು ಪಂಚಮಿ ರಥೋತ್ಸವ ಹಾಗೂ ಷಷ್ಠಿಯಂದು ಬ್ರಹ್ಮರಥೋತ್ಸವ ನಡೆಯುತ್ತದೆ.

ಕುಕ್ಕೆಯ ರಥೋತ್ಸವದ ವಿಶೇಷತೆ ಇದೇ

ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥವೂ ಕೂಡ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವ ಆರಂಭವಾಗುವ ಒಂದು ತಿಂಗಳ ಮೊದಲು ಈ ಬ್ರಹ್ಮರಥಕ್ಕೆ ಗೂಟ ಹೊಡೆಯುವ ಸಂಪ್ರದಾಯವನ್ನು ಮಾಡಲಾಗುತ್ತದೆ. ಆ ಬಳಿಕ ಇಲ್ಲಿನ ಮೂಲನಿವಾಸಿಗಳಾದ ಮಲೆಕುಡಿಯರ ಒಂದು ತಂದ ಕ್ಷೇತ್ರದ ಪಕ್ಕದಲ್ಲೇ ಇರುವ ಕುಮಾರಪರ್ವತ ಕಾಡುಗೀಗೆ ತೆರಾಲಿ ಬಿದಿರು ಸಂಗ್ರಹಿಸುವ ಕಾರ್ಯದಲ್ಲಿ ತೊಡಗುತ್ತದೆ. ಬ್ರಹ್ಮರಥವನ್ನು ಬಿದಿರನ್ನೇ ಬಳಸಿ ಕಟ್ಟಲಾಗುತ್ತಿದ್ದು, ಇದಕ್ಕೆ ಹಗ್ಗ ಹಾಗು ಇತರ ವಸ್ತುಗಳನ್ನು ಉಪಯೋಗಿಸುವಂತಿಲ್ಲ. ಅದೇ ರೀತಿ ಬ್ರಹ್ಮರಥ ಎಳೆಯುವ ಸಂದರ್ಭದಲ್ಲೂ ಇದೇ ಬಿದಿರುಗಳನ್ನು ಬಳಸಿಯೇ ರಥವನ್ನು ಎಳೆಯೋದು ಕುಕ್ಕೆಯ ರಥೋತ್ಸವದ ವಿಶೇಷತೆಯೂ ಆಗಿದೆ.