Last Updated:
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಸೇವೆ ಮಾಡಿದ ಕತ್ರೀನಾ ಕೈಫ್ ಗೆ ಸಂತಾನ ಭಾಗ್ಯ ದೊರೆತಿದ್ದು, ಇದು ಸುಬ್ರಹ್ಮಣ್ಯನ ಪವಾಡ ಎಂದು ಭಕ್ತರು ನಂಬಿದ್ದಾರೆ.
ಮಂಗಳೂರು:“ಧ್ಯಾಯೇದೀಪ್ಸಿತ ಸಿದ್ಧಿದಂ ಶಿವಸುತಂ ಸ್ಕಂದಂ ಸುರಾರಾದಿತಮ್” ಇದರ ಅರ್ಥ ಬಯಸುವುದನ್ನು ನೀಡುವವನೂ ಸಿದ್ಧಿದಾತನೂ ಆದ ಶಿವಸುತ ಸ್ಕಂದನನ್ನು (Skanda) ಧ್ಯಾನಿಸುತ್ತೇನೆ ಅನ್ನೋದು ಇದರ ಅರ್ಥ. ಅದರಲ್ಲೂ ಸುಬ್ರಹ್ಮಣ್ಯನನ್ನು ಸಂತಾನ (Off Spring) ಪ್ರದಾಯಕನೆಂದೇ ಕರೆಯುತ್ತಾರೆ. ಈಗ್ಯಾಕೆ ಇವರು ಸ್ಕಂದ ಸ್ಮರಣೆ (Chant) ಮಾಡುತ್ತಿದ್ದಾರೆ ಎನ್ನುತ್ತೀರಾ? ಅದಕ್ಕಿದೆ ವಿಶೇಷ (Special) ಕಾರಣ! ಸುಬ್ರಾಯ ಮನುಕುಲದಲ್ಲಿ ಯಾವುದೇ ಭೇದ ಮಾಡದೇ ನಾಸ್ತಿಕ ಪ್ರಕಾಶ್ ರೈಗೂ ಒಲಿದ, ಕ್ರಿಶ್ಚಿಯನ್ ಮೂಲದ ನಟಿಗೂ ಒಲಿದ ಹಾಗಾದರೆ ಈ ಪವಾಡಗಳಿಗೆ ಕೊನೆಯೂ ಇಲ್ಲ ಮೊದಲೂ ಇಲ್ಲ! ಇದು ಅನಂತ, ಹಾಗಾದರೆ ಯಾಕೆ ಸುಬ್ರಹ್ಮಣ್ಯನಿಗೆ ʼಸಂತಾನ ಪ್ರದಾಯಕʼ ಎಂಬ ಅಭಿದಾನ ಇಲ್ಲಿದೆ ವಿಶೇಷ ಮಾಹಿತಿ!
ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ. ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇಶದ ನಾನಾ ಭಾಗಗಳಿಂದ ಭಕ್ತರು ಬರುತ್ತಾರೆ. ಕ್ಷೇತ್ರದಲ್ಲಿ ನಾಗದೋಷಕ್ಕೆ ಸಂಬಂಧಿಸಿದಂತೆ ಆಶ್ಲೇಷ ಬಲಿಪೂಜೆ, ನಾಗಪ್ರತಿಷ್ಠೆ, ಸರ್ಪಸಂಸ್ಕಾರ ಈ ಸೇವೆಗಳಲ್ಲಿ ಬಹಳ ಪ್ರಮುಖವಾಗಿದ್ದು, ನಂಬಿಕೆಯುಳ್ಳ ಬಹುತೇಕರು ಒಳಿತನ್ನು ಕಂಡಿದ್ದಾರೆ, ಕಾಣುತ್ತಿದ್ದಾರೆ.
ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಭಕ್ತರೂ ಇಲ್ಲಿ ಸರ್ಪಸಂಸ್ಕಾರ ಸೇವೆ ನೆರವೇರಿಸಲು ಬರುತ್ತಿರುವುದು ಈ ಕ್ಷೇತ್ರದ ಪ್ರಭಾವಕ್ಕೆ ಒಂದು ಉದಾಹರಣೆಯೂ ಆಗಿದೆ. ಹಲವು ಜನ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಸಂತಾನ ಭಾಗ್ಯವನ್ನು ಪಡೆದಿದ್ದಾರೆ. ಸಂತಾನಫಲ ಕಂಡವರಲ್ಲಿ ಬಾಲಿವುಡ್ ತಾರೆ ಕತ್ರಿನಾ ಕೈಫ್ ಕೂಡಾ ಈಗ ಸೇರ್ಪಡೆಯಾಗಿದ್ದಾರೆ.
2021 ರಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಲ್‌ನ ವಿವಾಹವಾಗಿದ್ದ ಕತ್ರಿನಾ ಕೈಫ್‌ಗೆ ನಾಲ್ಕು ವರ್ಷವಾಗಿದ್ದರೂ ಸಂತಾನ ಭಾಗ್ಯ ಸಿಕ್ಕಿರಲಿಲ್ಲ. ವಯಸ್ಸು 42 ಮೀರಿ ಹೋಗಿತ್ತು. ವೈದ್ಯರನ್ನ ಭೇಟಿ ಮಾಡಿ ಟ್ರೀಟ್‌ಮೆಂಟ್ ತೆಗೆದುಕೊಂಡಿದ್ದರೂ ಸಂತಾನ ಭಾಗ್ಯ ಮಾತ್ರ ದೂರದ ಮಾತಾಗಿತ್ತು. ಆ ಸಂದರ್ಭದಲ್ಲಿ ಕತ್ರಿನಾ ಕೈಫ್ ಜ್ಯೋತಿಷ್ಯ ಶಾಸ್ತ್ರದ ಮೊರೆ ಹೋಗಿದ್ದಾರೆ. ಆವಾಗ ಜ್ಯೋತಿಷಿಗಳು ಕತ್ರಿನಾ ಕೈಫ್ ಜಾತಕವನ್ನು ಪರಿಶೀಲಿಸಿ ಸರ್ಪದೋಷ ಇರೋದಾಗಿ ಹೇಳಿದ್ದಾರೆ. ಹಾಗೇ ಅದಕ್ಕೆ ಪರಿಹಾರವಾಗಿ ಕರ್ನಾಟಕದಲ್ಲಿರೋ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ ಸರ್ಪ ಸಂಸ್ಕಾರ ಮತ್ತು ನಾಗ ಪ್ರತಿಷ್ಠೆ ಮಾಡಿಸಲು ಸೂಚನೆ ಕೊಟ್ಟಿದ್ದರು.
ಜ್ಯೋತಿಷಿಗಳು ನೀಡಿದ್ದ ಸಲಹೆ ಮೇರೆಗೆ ಕಳೆದ ಮಾರ್ಚ್ 11 ರಂದು ಕತ್ರಿನಾ ಕೈಫ್ ತಮ್ಮ ಕುಟುಂಬಸ್ಥರ ಜೊತೆ ಸೇರಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದಿದ್ದರು. ಎರಡು ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯದಲ್ಲಿಯೇ ವಾಸವಾಗಿದ್ದು, ಸಂತಾನ ಭಾಗ್ಯಕ್ಕೆ ಸಂಕಲ್ಪ ಮಾಡಿ ಸರ್ಪ ಸಂಸ್ಕಾರ ಮತ್ತು ನಾಗ ಪ್ರತಿಷ್ಠೆಯನ್ನ ಮಾಡಿಸಿದ್ದರು. ಅಚ್ಚರಿಯಂತೆ ನಾಲ್ಕು ವರ್ಷದಿಂದ ಯಾವುದೇ ಪೂಜೆ ಪುನಸ್ಕಾರ ಮಾಡಿದರೂ ಸಂತಾನ ಭಾಗ್ಯ ಕಾಣದ ಕತ್ರಿನಾ ಕೈಫ್‌ಗೆ ಈಗ ಸಂತಾನ ಫಲ ಸಿಕ್ತಾ ಇದೆ. ಕತ್ರಿನಾ -ವಿಕ್ಕಿ ಕೌಶಲ್ ದಂಪತಿಗೆ ಈಗ ಸಂತಾನ ಭಾಗ್ಯವಾಗುತ್ತಿದ್ದು, ಇದು ಕುಕ್ಕೆ ಸುಬ್ರಹ್ಮಣ್ಯನ ಪವಾಡ ಅಂತಾ ಜನ ಮಾತಾಡಿಕೊಳ್ಳುತ್ತಿದ್ದಾರೆ.
ಸುಬ್ರಾಯನ ಕರುಣೆಗೆ ಇದು ಮೊದಲೂ ಅಲ್ಲ, ಕೊನೆಯೂ ಅಲ್ಲ; ಇದು ಅನಂತ
ಸುಬ್ರಹ್ಮಣ್ಯ ಅಥವಾ ತುಳುನಾಡ ಸುಬ್ರಾಯ ಸಾಮಾನ್ಯದವನಲ್ಲ. ಅವನು ಹೆಸರಿಗೆ ತಕ್ಕ ಹಾಗೆ ಉಳ್ಳಾಯೆ ಹಾಗೆಂದರೆ ಒಡೆಯನೇ! ಕತ್ರೀನಾ ವಿಷಯ ಬಿಡಿ. ಈಗ ತುಳುನಾಡ ಧರ್ಮದೈವವೆಂದು ಜಗತ್ತಿಗೆಲ್ಲಾ ಕಾಂತಾರದ ಮೂಲಕ ಪರಿಚಿತವಾದ ತುಳುವರ ಜೀವನಾಡಿ ಪಂಜುರ್ಲಿ ಹುಟ್ಟಿದ್ದೂ ಕೂಡ ಕುಕ್ಕೆ ಸುಬ್ರಾಯನ ಕೃಪೆಯಿಂದಲೇ! ಕಾಳಿ ಹಂದಿಯು ತನ್ನ ಮನದ ಇಂಗಿತವನ್ನು ಸುಬ್ರಾಯನಿಗೆ ಅರುಹಿದಾಗ ಸುಬ್ರಾಯ ದೇವರು ಅಂದರೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಆ ಹೆಣ್ಣು ಹಂದಿಯನ್ನು ಕೈಯಲ್ಲಿ ಎತ್ತಿಕೊಂಡು ಮೈ ಸವರುತ್ತಾನೆ. ಆವರೆಗೂ ಸಂತಾನ ಕಾಣದ ಕಾಳಿ ಹಂದಿಗೆ 9 ಮರಿಗಳಾಗುತ್ತವೆ. ಅದರಲ್ಲಿ ಐದನೇ ಮರಿಯೇ ಪಂಜುರ್ಲಿ! ನೋಡಿ ಹೇಗಿದೆ ಸುಬ್ರಹ್ಮಣ್ಯನ ಪವಾಡ. ಕತ್ರೀನಾ ಇದಕ್ಕೆ ಮೊದಲೂ ಅಲ್ಲ ಕೊನೆಯೂ ಅಲ್ಲ, ಒಟ್ಟಿನಲ್ಲಿ ಕಲಿಯುಗದ ಕಾರಣಿಕದ ಒಡೆಯ ಕುಕ್ಕೆ ಸುಬ್ರಾಯ!
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Mangalore,Dakshina Kannada,Karnataka
September 24, 2025 7:42 AM IST