Last Updated:
ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನ.5ರಂದು ವೈಭವದ ಕುರಿಂದು ಉತ್ಸವ ಜರುಗಿದ್ದು, ಸಾವಿರಾರು ಭಕ್ತರು ಭಾಗವಹಿಸಿದ್ದರು.
ದಕ್ಷಿಣ ಕನ್ನಡ: ಕಾರ್ತಿಕ ಮಾಸದ ಹುಣ್ಣಿಮೆಯ ದಿನ ವಿಷ್ಣು ಆರಾಧಕರಿಗೆ ಅತ್ಯಂತ ವಿಶಿಷ್ಟ ದಿನವಾಗಿದ್ದು, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲೂ ಈ ಕಾರ್ತಿಕ ಮಾಸದ ಹುಣ್ಣಿಮೆಯನ್ನು ಕುರಿಂದು ಉತ್ಸವದ (Kurindu utsava) ಮೂಲಕ ಆಚರಿಸಲಾಗುತ್ತದೆ. ಮುಖ್ಯವಾಗಿ ಸಾರಸ್ವತ ಬ್ರಾಹ್ಮಣರ ಪ್ರಮುಖ ಆರಾಧನಾ ಕ್ಷೇತ್ರವಾದ ವೆಂಕಟರಮಣ ಕ್ಷೇತ್ರದಲ್ಲಿ ಈ ಕುರಿಂದು ಉತ್ಸವವು ಅತ್ಯಂತ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಪುತ್ತೂರಿನ (Puurutt) ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನವಂಬರ್ 5 ರಂದು ತಡರಾತ್ರಿವರೆಗೂ ಕುರಿಂದು ಉತ್ಸವ ನಡೆದಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಈ ಉತ್ಸವದಲ್ಲಿ ಭಾಗಿಯಾಗುವ ಮೂಲಕ ವೆಂಕಟರಮಣ ದೇವರ ಕೃಪೆಗೆ ಪಾತ್ರರಾದರು.
ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವಷರ್ಂಪ್ರತಿ ಜರುಗುವ ವೈಭವದ ಕುರಿಂದು ಉತ್ಸವ ನ.5ರಂದು ರಾತ್ರಿ ದರ್ಬೆ ವೃತ್ತದಲ್ಲಿ ನಡೆಯಿತು. ದರ್ಬೆ ವೃತ್ತದಲ್ಲಿ ರಥದ ಆಕೃತಿಯಲ್ಲಿ ಈ ಕುರಿಂದನ್ನು ನಿರ್ಮಿಸಿ ಅದಕ್ಕೆ ಹಣ್ಣು-ಹಂಪಲುಗಳು, ಅಡಿಕೆ-ಸೀಯಾಳ, ಹೂವುಗಳಿಂದ ಶೃಂಗರಿಸಲಾಗುತ್ತದೆ. ಈ ಕುರಿಂದುವಿನಲ್ಲಿ ದೇವರನ್ನು ಇರಿಸಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ಕುರಿಂದು ಉತ್ಸವಕ್ಕೆ ಮೊದಲು ವೆಂಕಟರಮಣ ದೇವಳದಲ್ಲಿ ದೇವರ ಕಟ್ಟೆಪೂಜೆ, ಮಹಾಪೂಜೆ ನಡೆದು ದೇವರು ಹೊರಗಡೆ ಬಂದು ದೇವರ ಕಟ್ಟೆಗೆ ಬಂದು ಬಳಿ ಬಂದು ಕುಳಿತುಕೊಳ್ಳುತ್ತಾರೆ. ದೇವರು ಕಟ್ಟೆಯಲ್ಲಿ ಕುಳಿತ ಬಳಿಕ ವಿಶೇಷ ಸಿಡಿಮದ್ದು ಪ್ರದರ್ಶನ ನಡೆಯುತ್ತದೆ. ಬಳಿಕ ದೇವಳದಿಂದ ದರ್ಬೆಯ ತನಕ ಪೇಟೆ ಸವಾರಿ ಉತ್ಸವ ನಡೆದು.ರಾತ್ರಿ ದೀಪ ನಮಸ್ಕಾರ, ರಾತ್ರಿ ಪೂಜೆ, ಶ್ರೀ ದೇವರ ಪೇಟೆ ಸವಾರಿ .ಬಳಿಕ ದರ್ಬೆ ವೃತ್ತದಲ್ಲಿ ಶ್ರೀ ದೇವರಿಗೆ ಕುರಿಂದು ಉತ್ಸವ ನಡೆಯಿತು.
Dakshina Kannada,Karnataka
November 07, 2025 8:01 AM IST