Last Updated:
ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ಲಕ್ಷದೀಪೋತ್ಸವ ವಿಜೃಂಭಣೆಯಿಂದ ನಡೆಯಿತು, ಸಾವಿರಾರು ಭಕ್ತರು ಭಾಗವಹಿಸಿ ದೀಪಾಲಂಕಾರ, ಭಜನೆ, ರಂಗೋಲಿ, ತೆಪ್ಪೋತ್ಸವದಲ್ಲಿ ಸಾಂಸ್ಕೃತಿಕ ವೈಭವ ಕಂಡರು.
ದಕ್ಷಿಣ ಕನ್ನಡ: ಪುತ್ತೂರಿನ (Puttur) ಮುತ್ತು, ಮಹತೋಭಾರ ಮಹಾಲಿಂಗನ ಸನ್ನಿಧಾನ ದೀಪಾಲಂಕಾರದಿಂದ ನಿನ್ನೆ ಕಂಗೊಳಿಸಿತು. ಮಹಾಲಿಂಗೇಶ್ವರ ದೇವಳದಲ್ಲಿ ಲಕ್ಷದೀಪೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ (Grand) ನಡೆಯಿತು. ಅಮಾವಾಸ್ಯೆಯ ದಿನ ಚಂದಿರ (Moon) ಇರದಿದ್ದರೂ ಭೂಮಿಗೆ ತಾರೆಗಳು ಇಳಿದ ಹಾಗೆ ದೀಪಗಳು ಕಂಡವು! ವಾರ್ಷಿಕವಾಗಿ (Yearly) ಪ್ರತೀ ಸಲ ಈ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯುತ್ತಿದೆ.
ದೇವಳದಲ್ಲಿ ಬೆಳಿಗ್ಗೆ ಲಕ್ಷ ಬಿಲ್ವಾರ್ಚನೆ ಸೇವೆ ನಡೆಯಿತು. ಬೆಳಿಗ್ಗೆಯಿಂದ ಸಂಜೆ ವರೆಗೆ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಿತು. ಸಂಜೆ ರಾಮಕೃಷ್ಣ ಕಾಟುಕುಕ್ಕೆ ನೇತೃತ್ವದಲ್ಲಿ ಸಾಮೂಹಿಕ ಭಜನೆ ನಡೆಯಿತು. ಬಳಿಕ ಲಲಿತ ಸಹಸ್ರನಾಮ ಪಠಣದೊಂದಿಗೆ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.
ದೇವಳ ಎದುರಿನ ರಥಬೀದಿಯಲ್ಲಿ ಸಂಜೆ ಭಕ್ತರು ರಂಗೋಲಿ ಬಿಡಿಸಿ, ರಥಬೀದಿಯ ಎರಡೂ ಬದಿಗಳಲ್ಲಿ ಹಣತೆ ದೀಪಗಳ ಜೋಡಣೆ ಮಾಡಿದರು. ದೇವಳಕ್ಕೆ ಸೇರಿದ ಪೂರ್ಣ ರಥಬೀದಿ, ಪುಷ್ಕರಣಿ ಸುತ್ತ, ಧ್ಯಾನರೂಢ ಶಿವಮೂರ್ತಿ, ಮೂಲನಾಗನ ಕಟ್ಟೆ ಮತ್ತು ಅಯ್ಯಪ್ಪ ಗುಡಿ ವಠಾರದಲ್ಲಿ, ಗೋಶಾಲೆ, ರಥಮಂದಿರದ ಒಳಗೆ ಮತ್ತು ಸುತ್ತಮುತ್ತ, ಮಹಾರುದ್ರಯಾಗ ಶಾಲೆ ಮೊದಲಾದ ಕಡೆಗಳಲ್ಲಿ ರಂಗೋಲಿ ಬಿಡಿಸಿ, ಹಣತೆ ದೀಪಗಳನ್ನು ಇಟ್ಟರು. ಮುಸ್ಸಂಜೆ ಹಣತೆಗಳನ್ನು ಬೆಳಗಲಾಯಿತು.
ಹೇಗಿರುತ್ತೆ ಗೊತ್ತಾ ಲಕ್ಷದೀಪೋತ್ಸವದ ಆಚರಣೆ?!
ರಾತ್ರಿ ಪೂಜೆಯ ಬಳಿಕ ದೇವರ ಬಲಿ ಹೊರಟು ಒಳಾಂಗಣ ಹಾಗೂ ಹೊರಾಂಗಣದಲ್ಲಿ ತಂತ್ರ ಸುತ್ತು, ರಾಜಾಂಗಣದಲ್ಲಿ ಉಡಿಕೆ, ಬೆಂಡೆ ಸುತ್ತುಗಳ ಬಲಿ ಉತ್ಸವ ನಡೆಯಿತು. ಖಂಡನಾಯಕನ ಕಟ್ಟೆಯಲ್ಲಿ ಕಟ್ಟಪೂಜೆ ನಡೆದ ಬಳಿಕ ವಾದ್ಯ, ಭಜನೆ, ಬ್ಯಾಂಡ್, ಸರ್ವ ವಾದ್ಯ ಸ್ತುತಿಗಳ ಬಳಿಕ ಚಂದ್ರಮಂಡಲ ಉತ್ಸವ ನಡೆಯಿತು. ಬಳಿಕ ತೆಪ್ಪೋತ್ಸವ ಆರಂಭಗೊಂಡಿತು. ಶ್ರೀಧರ ತಂತ್ರಿ, ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್.ಭಟ್ ಅವರು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
Dakshina Kannada,Karnataka
November 20, 2025 4:19 PM IST