Mahalakshmi: ಕಟೀಲಮ್ಮನ ಪಕ್ಕದಲ್ಲಿದ್ದಾಳೆ ಮಹಾಲಕ್ಷ್ಮಮ್ಮ, ಈಕೆ ಆಶೀವಾರ್ದ ಮಾಡೋದಿಲ್ಲ, ಆನಂದ ಕೊಡ್ತಾಳೆ! | Katil Gajarani Mahalakshmi performance wins hearts with dance | ದಕ್ಷಿಣ ಕನ್ನಡ

Mahalakshmi: ಕಟೀಲಮ್ಮನ ಪಕ್ಕದಲ್ಲಿದ್ದಾಳೆ ಮಹಾಲಕ್ಷ್ಮಮ್ಮ, ಈಕೆ ಆಶೀವಾರ್ದ ಮಾಡೋದಿಲ್ಲ, ಆನಂದ ಕೊಡ್ತಾಳೆ! | Katil Gajarani Mahalakshmi performance wins hearts with dance | ದಕ್ಷಿಣ ಕನ್ನಡ

Last Updated:

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 39 ವರ್ಷದ ಗಜರಾಣಿ ಮಹಾಲಕ್ಷ್ಮಿ ಫುಟ್‌ಬಾಲ್ ಕ್ರಿಕೆಟ್ ಆಟದಲ್ಲಿ ಪ್ರಸಿದ್ಧಿ ಪಡೆದಿದ್ದು, ಭಕ್ತರ ಪ್ರೀತಿಗೆ ಪಾತ್ರಳಾಗಿದ್ದಾಳೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಅದೇನು ಮನಮೋಹಕ ನೃತ್ಯ, ಅದೆಂಥಾ ಅದ್ಭುತ ಆಟ! ಮನುಷ್ಯರೇ ನಾಚಿಕೊಳ್ಳೋ ಜೀವನ ಪ್ರೀತಿ ಹೊಂದಿದ ಈ ಗಜರಾಣಿಗೆ ಎಲ್ಲರೂ ಅಭಿಮಾನಿಗಳೇ! ಕಟೀಲಿನ ಗಜರಾಣಿ ಮಹಾಲಕ್ಷ್ಮಿ. ಕಟೀಲಿನ ಶ್ರೀ ದುರ್ಗಾಪರಮೇಶ್ವರಿಯನ್ನು ಕಂಡ ಬಳಿಕ ಪ್ರತೀ ಭಕ್ತ (Devotees) ತೆರಳೋದು ಗಜರಾಣಿ ಮಹಾಲಕ್ಷ್ಮಿಯನ್ನು ನೋಡಲು. ಯಾಕೆಂದರೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿರುವ (Temple) ಗಜರಾಣಿ ಮಹಾಲಕ್ಷ್ಮಿ ಆನೆ  ಎಲ್ಲರ ಅಚ್ಚುಮೆಚ್ಚು.

39 ವರ್ಷದ ಪ್ರಾಯ, ಗಜರಾಣಿಯ ನರ್ತನಕ್ಕೆ ಜನರು ಫಿದಾ

39 ರ ಹರೆಯದ  ಸೌಮ್ಯ ಸ್ವಭಾವದ ಮಹಾಲಕ್ಷ್ಮಿ ತುಂಟಾಟದ ಜೊತೆಗೆ ಆಟ ಆಡೋದ್ರಿಂದಲೇ ಪ್ರಸಿದ್ಧಿ. ಫುಟ್‌ಬಾಲ್, ಕ್ರಿಕೆಟ್ ಆಟ ಅಂದ್ರೆ ಮೈ ಮರೆಯುವ ಮಹಾಲಕ್ಷ್ಮಿಯ ಆಟ ಎಲ್ಲರಿಗೂ ಅಚ್ಚುಮೆಚ್ಚು. ಕಳೆದ ಮೂರು ದಶಕಗಳಿಂದ ಕಟೀಲು ಕ್ಷೇತ್ರದಲ್ಲಿರುವ ಮಹಾಲಕ್ಷ್ಮಿಗೆ ಈಗ 39 ರ ಹರೆಯ. ಪ್ರತಿದಿನ ಆಟ, ತುಂಟಾಟದಲ್ಲಿ ಕಾಲ ಕಳೆಯುತ್ತಾಳೆ.

ನಾಗರಾಜನ ನಂತರ ಬಂದ ಮಹಾಲಕ್ಷ್ಮಿ

ಹೆಚ್ಚಿನ ಎಲ್ಲಾ ದೇವಸ್ಥಾನಗಳಲ್ಲಿ ಆನೆಗಳನ್ನು ಸಾಕುವಂತೆ ಕಟೀಲು ದೇವಳದಲ್ಲಿಯೂ ಆನೆ ಸಾಕಲಾಗುತ್ತಿದೆ. ಕಟೀಲು ದೇವಳದಲ್ಲಿ ಈ ಹಿಂದೆ ನಾಗರಾಜ ಎಂಬ ಗಂಡಾನೆ ಇತ್ತು. ಈ ಆನೆಯ ಸಾವಿನ ನಂತರ 1994ರಲ್ಲಿ ಹೆಣ್ಣು ಮರಿಯಾನೆಯನ್ನು ತಂದು ಅದಕ್ಕೆ ಮಹಾಲಕ್ಷ್ಮಿ ಎಂದು ಹೆಸರಿಡಲಾಗಿತ್ತು. ಇದೀಗ ಕಳೆದ ಎರಡೂವರೆ ವರ್ಷಗಳಿಂದ ಮೂರು ಮಾವುತರಾದ ಫೈರೋಜ್, ಅಲ್ತಾಫ್ ಮತ್ತು ಮುಜಾಹಿದ್ ಆನೆಗೆ ಪ್ರತಿದಿನ ಆಟವನ್ನು ಕಲಿಸುತ್ತಿದ್ದಾರೆ.

ಈಕೆ ಸಕಲಕಲಾವಲ್ಲಭೆ!

ಫುಟ್‍ಬಾಲ್, ಕ್ರಿಕೆಟ್ ಆಟಗಳನ್ನು ಆನೆಗೆ ಕಲಿಸಲಾಗಿದ್ದು, ಆನೆಯೂ ಖುಷಿಯಿಂದ ಆಟ ಆಡುತ್ತಿದೆ. ಪ್ರತಿನಿತ್ಯ ಒಂದೆರಡು ಗಂಟೆ ಆನೆಗೆ ಅಭ್ಯಾಸವನ್ನು ನಡೆಸಲಾಗುತ್ತಿದೆ. ಅಲ್ಲದೇ ಪೈಪ್ ಮೂಲಕ ನೀರು ಕೊಟ್ಟರೆ ಪೈಪ್ ಹಿಡಿದು ಮಹಾಲಕ್ಷ್ಮಿಯೇ ಸ್ನಾನಕ್ಕಿಳಿಯುತ್ತಾಳೆ. ಪೈಪ್ ಮತ್ತು ಸೊಂಡಿಲ ಮೂಲಕ ತನ್ನ ಬೆನ್ನು, ಮೈ ಕೈಗೆ ನೀರು ಹಾಕಿ ಸ್ನಾನ ಮಾಡುತ್ತದೆ.

ಪ್ರತೀ ದಿನದ ಜೀವನ ಶೈಲಿಯೇ ಅದ್ಭುತ

ಇದನ್ನೂ ಓದಿ: Cyber Crime: ಜನರೇ ಎಚ್ಚರ.. ಎಚ್ಚರ.. ಸೈಬರ್ ಅಪರಾಧಿಗಳ ಹೊಸ ತಂತ್ರ ಇದು!

ಅಲ್ಲದೆ ಪ್ರತೀ ದಿನ ದೇವಸ್ಥಾನಕ್ಕೆ ಬಂದು ಗಂಟೆ ಬಡಿದು ನಮಸ್ಕಾರ ಮಾಡಿ ಹೋಗುತ್ತದೆ. ಪ್ರತಿದಿನದ ವಾಕಿಂಗ್ ವೇಳೆ ಕಟೀಲಿನ ಸ್ಥಳೀಯ ವರ್ತಕರು ಕಲ್ಲಂಗಡಿ ಸೇರಿದಂತೆ ಹಣ್ಣುಗಳನ್ನು ನೀಡಿ ಮಹಾಲಕ್ಷ್ಮಿಗೆ ವಂದನೆಯನ್ನು ಸಲ್ಲಿಸುತ್ತಾರೆ. ಮಹಾಲಕ್ಷ್ಮಿಗೆ ಹಣ್ಣು ನೀಡಿ ಭಕ್ತರು ಆಶೀರ್ವಾದ ಪಡೆದುಕೊಳ್ಳುತ್ತಾರೆ.