Makara Sankranti:ದಕ್ಷಿಣ ಕನ್ನಡದಲ್ಲಿ ವರ್ಷದ ಮೊದಲ ಹಬ್ಬದ ಸಂಭ್ರಮ, ಬೆಳೆ ಸಮೃದ್ಧಿಯಾಗಿ ಬರಲಿ ಎಂದು ದೇವರಲ್ಲಿ ಬೇಡಿಕೆ! | Makara Sankranti | ದಕ್ಷಿಣ ಕನ್ನಡ

Makara Sankranti:ದಕ್ಷಿಣ ಕನ್ನಡದಲ್ಲಿ ವರ್ಷದ ಮೊದಲ ಹಬ್ಬದ ಸಂಭ್ರಮ, ಬೆಳೆ ಸಮೃದ್ಧಿಯಾಗಿ ಬರಲಿ ಎಂದು ದೇವರಲ್ಲಿ ಬೇಡಿಕೆ! | Makara Sankranti | ದಕ್ಷಿಣ ಕನ್ನಡ

Last Updated:

ದಕ್ಷಿಣ ಕನ್ನಡದ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬದ ವಿಶೇಷ ಪೂಜೆಗಳು ನಡೆದಿದ್ದು, ಭಕ್ತರು ದೇವರ ದರ್ಶನ ಪಡೆದು ಬೆಳೆಗಳಿಗೆ ಪೂಜೆ ಸಲ್ಲಿಸಿದರು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ರಾಜ್ಯದ ಕೆಲವೆಡೆ ಇಂದು ಮಕರ ಸಂಕ್ರಾತಿ (Makara Sankranti) ಹಬ್ಬ ಮಾಡಿದ್ದಾರೆ. ಹಬ್ಬದ (Festival) ಸಂಭ್ರಮ ಮನೆಮಾಡಿದ್ದು, ಹೊಸ ಸಂಭ್ರಮದ ಹಿನ್ನಲೆಯಲ್ಲಿ ದೇವಸ್ಥಾನಗಳಲ್ಲಿ (Temples) ವಿಶೇಷ ಪೂಜೆ (Special Puja) ಪುನಸ್ಕಾರಗಳು ನಡೆದಿವೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಶಿವಕ್ಷೇತ್ರ ಪುತ್ತೂರಿನ (Puttur) ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಮಕರ ಸಂಕ್ರಮಣದ ಹಿನ್ನಲೆಯಲ್ಲಿ ದೇವರಿಗೆ ವಿಶೇಷ ಪೂಜೆ ಸೇರಿದಂತೆ ಹಲವು ಸೇವೆಗಳನ್ನೂ ನೆರವೇರಿಸಲಾಗಿದೆ.

ದೇವಸ್ಥಾನಕ್ಕೆ ಹೂವಿನ ಅಲಂಕಾರ

ಕಾಲು ದೀಪಗಳನ್ನು ಹಚ್ಚಿ ದೇವರಿಗೆ ದೀಪದ ಪೂಜೆಯನ್ನೂ ಮಾಡಲಾಗಿದ್ದು, ಹಬ್ಬದ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ಹೂವಿನ ಅಲಂಕಾರವನ್ನೂ ಮಾಡಲಾಗಿದೆ. ಭಕ್ತಾಧಿಗಳು ವಿಶೇಷವಾಗಿ ಈ ದಿನದಂದು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಮೂಲಕುಂದಿನ ದಿನಗಳು ಸಂತಸದಿಂದ ಕಳೆಯಲಿ ಎನ್ನುವ ಪ್ರಾರ್ಥನೆಯನ್ನು ದೇವರ ಮುಂದೆ ಮಾಡುತ್ತಿದ್ದಾರೆ.

ಬೆಳೆಗಳಿಗೆ ಪೂಜೆ

ಕೃಷಿ ಪ್ರಧಾನವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕರ ಸಂಕ್ರಾಂತಿಗೆ ವಿಶೇಷತೆಯಿದ್ದು, ಹಲವು ಕಡೆಗಳಲ್ಲಿ ಸಾರ್ವಜನಿಕ ಪೂಜೆಗಳನ್ನು ಮಾಡಲಾಗುತ್ತದೆ. ಕೃಷಿಕರು ಈ ದಿನದಂದು ತಾವು ಬೆಳೆದ ಬೆಳೆಗಳಿಗೆ ಪೂಜೆ ನೆರವೇರಿಸುತ್ತರಲ್ಲದೆ,