Last Updated:
ಮಂಗಳೂರಿನ ಶ್ರೀಮಂಗಳಾದೇವಿ ಕ್ಷೇತ್ರದಲ್ಲಿ ನವರಾತ್ರಿಯ ವಿಜಯದಶಮಿಗೆ 100ಕ್ಕಿಂತ ಹೆಚ್ಚು ಮಕ್ಕಳಿಗೆ ಶಾಸ್ತ್ರೋಕ್ತ ಅಕ್ಷರಾಭ್ಯಾಸ ನಡೆಯಿತು, ವಿದ್ಯಾದಶಮೀ ಸಂಪ್ರದಾಯ ಪಾಲನೆ.
ಮಂಗಳೂರು: ಅಕ್ಷರಾಭ್ಯಾಸ ಎಂದರೆ ಕೊಲ್ಲೂರು, ಶೃಂಗೇರಿ (Sringeri) ನೆನಪಾಗುವುದು ಸಾಮಾನ್ಯ. ಆದರೆ, ಇಲ್ಲೊಂದು ದಿನ ಮಂಗಳೂರಿನ ಈ ದೇವಾಲಯದಲ್ಲೂ (Temple) ಕೂಡ ಅಕ್ಷರಾಭ್ಯಾಸವನ್ನು ಮಾಡಿಸಲಾಗುತ್ತದೆ. ಇದು ಕೂಡ ಪುರಾತನ (Ancient) ದೇಗುಲವಾಗಿದ್ದು, ಇಲ್ಲಿ ಅಕ್ಷರಾಭ್ಯಾಸ ಮಾಡಿಸುವುದೇಕೆ ತಿಳಿಯೋಣ ಬನ್ನಿ.
ನವರಾತ್ರಿಯ ಕೊನೆಯ ದಿನವಾದ ನಿನ್ನೆ ವಿಜಯದಶಮಿಯ ಪ್ರಯುಕ್ತ ಮಂಗಳೂರಿನ ಪ್ರಸಿದ್ಧ ದೇವಿ ಆಲಯ ಶ್ರೀಮಂಗಳಾದೇವಿ ಕ್ಷೇತ್ರದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ನಡೆಯಿತು. ಒಂಬತ್ತು ದಿನಗಳ ಪರ್ಯಂತವಾಗಿ ನಡೆಯುವ ನವರಾತ್ರಿ ಮಹೋತ್ಸವದ ಕೊನೆಯ ನಾಲ್ಕು ದಿನ ಶಾರದಾಪೂಜೆ ನಡೆಯುತ್ತದೆ. ಈ ಸಮಯದಲ್ಲಿ ದೇವತೆಗಳು ವಿದ್ಯಾಬೋಧನೆಯನ್ನು ಮಾಡಿದರು ಎಂಬ ಪೌರಾಣಿಕ ಹಿನ್ನೆಲೆಯಲ್ಲಿ ನವರಾತ್ರಿಯ ವೇಳೆ ಶಾರದಾ ಪೂಜೆಯನ್ನು ಮಾಡಲಾಗುತ್ತದೆ.
ಆದ್ದರಿಂದ ಎಳೆಯ ಮಕ್ಕಳಿಗೆ ಅಕ್ಷರಾಭ್ಯಾಸ ಆರಂಭಿಸಲು ವಿಜಯದಶಮಿ ಪ್ರಶಸ್ತವಾದ ದಿನ. ಈ ದಿನ ಪುರೋಹಿತರಿಂದ ಪುಟಾಣಿ ಮಕ್ಕಳಿಗೆ ಶಾಸ್ತ್ರೋಕ್ತವಾಗಿ ಅಕ್ಷರಾಭ್ಯಾಸ ಮಾಡಿಸುವ ಸಂಪ್ರದಾಯವಿದೆ. ತಂದೆಯೇ ಮಗುವನ್ನು ತೊಡೆಯಲ್ಲಿ ಕುಳ್ಳಿರಿಸಿ ಬೆಳ್ತಿಗೆ ಅಕ್ಕಿಯಲ್ಲಿ ಅರಸಿನದ ತುಂಡಿನಿಂದ ಅಥವಾ ತೋರು ಬೆರಳಿನಿಂದ ಕೈ ಹಿಡಿದು ಬರೆಯಿಸುತ್ತಾರೆ. ಹೀಗೆ ಬರೆಯಿಸುವಾಗ ಮೊದಲಿಗೆ ಶ್ರೀ ಗಣಾಧಿಪತಯೇ ನಮಃ, ಓಂ ನಾಮ ಹಾಗೂ ಅ ಕಾರಾದಿ ಅಕ್ಷರಗಳನ್ನು ಬರೆಸಲಾಗುತ್ತದೆ. ಆದ್ದರಿಂದ ವಿಜಯ ದಶಮಿಯ ದಿನವನ್ನು ‘ವಿದ್ಯಾದಶಮೀ’ ಎಂದು ಕರೆಯಲಾಗುತ್ತದೆ.
100ಕ್ಕಿಂತ ಹೆಚ್ಚು ಮಕ್ಕಳಿಗೆ ಅಕ್ಷರಾಭ್ಯಾಸ
Dakshina Kannada,Karnataka
October 03, 2025 1:11 PM IST