Mangaluru: ತೂಕ ಇಳಿಸಲು ಸಹಕಾರಿ ಈ ಕಾಡು ಮಾವು; ಆರೋಗ್ಯದ ಗುಣಗಳೊಂದಿಗೆ ಸವಿಯ ಸೊಗಸು | dakshina kannada forest mango fruit health benefits

Mangaluru: ತೂಕ ಇಳಿಸಲು ಸಹಕಾರಿ ಈ ಕಾಡು ಮಾವು; ಆರೋಗ್ಯದ ಗುಣಗಳೊಂದಿಗೆ ಸವಿಯ ಸೊಗಸು | dakshina kannada forest mango fruit health benefits

Last Updated:

ಕಾಡು ಮಾವಿನ ಹಣ್ಣುಗಳು ಸ್ಥಳೀಯವಾಗಿ ಸಿಗುತ್ತವೆ ಮತ್ತು ಅದ್ಭುತ ರುಚಿ ಹಾಗೂ ಸುವಾಸನೆ ಹೊಂದಿವೆ. ಇವು ಆರೋಗ್ಯಕ್ಕೆ ಸಹಾಯಕರಾಗಿದ್ದು, ಜೀರ್ಣಕ್ರಿಯೆ, ಕರುಳಿನ ಆರೋಗ್ಯ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ.

X

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಮಾವಿನ ಹಣ್ಣು (Mango Fruit) ಅಂದಾಕ್ಷಣ ಮಾರುಕಟ್ಟೆಯಲ್ಲಿ (Market) ಮಲ್ಲಿಕಾ, ಮಲಗೋಬಾ, ರಸಪೂರಿ, ಅಲ್ಫೋನ್ಸೊ, ತೋತಾಪುರಿ ಅಂತಾ ವಿಧ-ವಿಧವಾದ ಮಾವಿನ ಹಣ್ಣಿನ ರುಚಿಗಳು ಸಿಗುತ್ತವೆ. ಆದರೆ ಕಾಡು ಮಾವಿನ ಹಣ್ಣಿನ ರುಚಿ ಎಷ್ಟು ಜನಕ್ಕೆ ಗೊತ್ತಿದೆ ಹೇಳಿ. ಸ್ಥಳೀಯವಾಗಿ ಹಲವಾರು ಕಾಡು ಮಾವುಗಳು (Forest Mango) ಇವೆ. ಹಾಗೆಯೇ ಇವುಗಳ ರುಚಿ ಕೂಡ ಅದ್ಭುತವಾಗಿರುತ್ತದೆ. ಹಳ್ಳಿಗಳ ಕಡೆ ಈ ಹಣ್ಣುಗಳನ್ನೇ ಹೆಚ್ಚಾಗಿ ಸೇವಿಸಲಾಗುತ್ತದೆ. ಆದರೆ ಇವುಗಳನ್ನು ಪಟ್ಟಣದ ಮಾರುಕಟ್ಟೆಗೆ ತರುವ ಪ್ರಯತ್ನ ಅಷ್ಟಾಗಿ ನಡೆಯುತ್ತಿಲ್ಲ. ಆದರೆ ಇತ್ತೀಚೆಗೆ ಕಾಡುಮಾವಿನ ಹಣ್ಣಿನ ರುಚಿ ನಗರಕ್ಕೂ ಪಸರಿಸಿದ್ದು, ಹಣ್ಣುಗಳ ರಸಕ್ಕೆ ಮನಸೋಲದವರೇ ಇಲ್ಲ.

ದೇಶೀಯ ಮಾವಿನ ಹಣ್ಣುಗಳು ಅದ್ಭುತ ರುಚಿಯೊಂದಿಗೆ ಸುವಾಸನೆಯನ್ನೂ ಹೊಂದಿವೆ. ಸ್ಥಳೀಯವಾಗಿ ಸಿಗುವ ಮಾವು ಸಾಂಪ್ರದಾಯಿಕವಾಗಿ ವಿಭಿನ್ನ ಸುವಾಸನೆ ಮತ್ತು ಗುಣಲಕ್ಷಣಗಳನ್ನು ಹೊಂದಿರುತ್ತವೆ. ಬೇರೆ ಹಣ್ಣುಗಳು ಮಳೆಗಾಲದಲ್ಲಿ ಭಾರಿ ಮಳೆಯಿಂದಾಗಿ ನಾಶವಾಗುತ್ತವೆ. ಆದರೆ ಈ ಕಾಡು ಮಾವುಗಳು ವರ್ಷದ ಆರಂಭದಲ್ಲಿ ಅಂದರೆ ಮಾರ್ಚ್‌ ಅಥವಾ ಏಪ್ರಿಲ್‌ ವೇಳೆಗೆ ಫಲ ನೀಡುತ್ತವೆ. ಹೀಗಾಗಿ ಮಳೆಯಿಂದ ಈ ಹಣ್ಣುಗಳು ನಾಶವಾಗುವುದಿಲ್ಲ..

ಕಾಡಿನಲ್ಲಿರುವ ಅಥವಾ ಕೃಷಿ ಭೂಮಿಯ ಗಡಿಯಲ್ಲಿರುವ ಬೃಹತ್ ಮರಗಳ ಮೇಲೆ ಗೊಂಚಲುಗಳಾಗಿ ಬೆಳೆಯುತ್ತವೆ. ಬೇಸಿಗೆಯಲ್ಲಿ ಮರಗಳ ಮೇಲೆ ನೈಸರ್ಗಿಕವಾಗಿ ಹಣ್ಣಾಗುವ ಹಣ್ಣುಗಳು ನೆಲದ ಮೇಲಿನ ಒಣಗಿದ ಎಲೆಗಳ ಮೇಲೆ ಬೀಳುತ್ತವೆ. ಈ ರುಚಿಕರವಾದ ಹಣ್ಣುಗಳನ್ನು ಜನರು ತಮ್ಮ ಮೈ ಮನಸ್ಸು ಮರೆತು ಸವಿಯುತ್ತಾರೆ.

ಇದನ್ನೂ ಓದಿ: Dakshina Kannada: ಮಂಗಳೂರಿನ ಕಡಲತೀರದಲ್ಲಿ ಸೀಗಲ್‌ಗಳ ಕಲರವ: ವಿದೇಶಿ ಹಕ್ಕಿಗಳ ವಲಸೆ ವೈಭವ

ಕಾಡು ಮಾವಿನ ರಸವು ನಿರ್ವಿವಾದದ ರುಚಿಯನ್ನು ಹೊಂದಿದ್ದು, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇದು ಆರೋಗ್ಯಕರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದರ ನಾರುಗಳು ಹೊಟ್ಟೆ ತುಂಬಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಾರುಕಟ್ಟೆಗೆ ತರಹೇವಾರಿ ಮಾವಿನ ಹಣ್ಣುಗಳು ಬಂದರೂ ಕಾಡು ಮಾವಿನ ಹಣ್ಣಿನ ರುಚಿಯನ್ನು ಮಾತ್ರ ಸವಿದವನೇ ಬಲ್ಲ..