Last Updated:
ಬೈಕ್ ನಲ್ಲಿ ಹೋಗೋ ಮಹಿಳೆಯರು ಈ ಸ್ಟೋರಿ ನೋಡಲೇಬೇಕು. ಮಂಗಳೂರಿನಲ್ಲಿ ಮಗನ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದ ತಾಯಿಯೋರ್ವರ ಸೀರೆ ಬೈಕ್ ಚಕ್ರಕ್ಕೆ ಸಿಲುಕಿ ರಸ್ತೆಯಲ್ಲಿ ಬಿದ್ದಿದ್ದಾರೆ.
ಮಂಗಳೂರು: ಬೈಕ್ ಆಗಲಿ, ಕಾರೇ ಆಗಲಿ.. (Bike or Car) ವಾಹನದಲ್ಲಿ ಸಂಚರಿಸುವಾಗ ಮೈಯೆಲ್ಲಾ ಕಣ್ಣಾಗಿರ್ಬೇಕು. ಸ್ವಲ್ಪ ಎಚ್ಚರ ತಪ್ಪಿದ್ರೂ ನಡೆಯೋದು (Awareness) ದುರಂತವೇ. ಅದರಲ್ಲೂ ಬೈಕ್‌ನಲ್ಲಿ ಹೋಗುವಾಗ್ಲಂತೂ ಎಷ್ಟು ಹುಷಾರ್ ಆಗಿದ್ರೂ ಸಾಲಲ್ಲ. ಯಾಕಂದ್ರೆ, ಒಂದೇ ಒಂದು ಕ್ಷಣ ಯಾಮಾರಿದರೂ ದೊಡ್ಡ ದುರಂತವೇ ನಡೆದು (Mangaluru) ಹೋಗ್ತವೆ. ಇಲ್ಲಾಗಿದ್ದೂ ಇದೆ, ಹೆಣ್ಮಗಳೊಬ್ಬಳ ಅಜಾಗರೂಕತೆಗೆ ಆಸ್ಪತ್ರೆ ಬೆಡ್ (Hospital) ಸೇರುವಂತಾಗಿದೆ.
ಹೆಣ್ಮಕ್ಕಳು ಬೈಕ್‌ನಲ್ಲಿ ಹೋಗುವಾಗ ಎಷ್ಟು ಸೇಫ್ಟಿಯಾಗಿದ್ರೂ ಸಾಲಲ್ಲ. ಅದರಲ್ಲೂ ಸೀರೆ ಉಟ್ಕೊಂಡು ಬೈಕ್ ಹತ್ತಿದ್ರಂತೂ ತುಂಬಾನೇ ಹುಷಾರ್ ಆಗಿರ್ಬೇಕು. ಇದಕ್ಕೆ ಈ ದೃಶ್ಯವೇ ಸಾಕ್ಷಿ ನೋಡಿ, ಮಂಗಳೂರು ನಗರದ ಸುರತ್ಕಲ್ ಬಳಿಯ ಕಾನಾ ಅನ್ನೋ ಸ್ಥಳದಲ್ಲಿ ತಾಯಿಯನ್ನ ಬೈಕ್ ಮೇಲೆ ಕೂರಿಸಿಕೊಂಡಿದ್ದವ, ಬಸ್‌ನ್ನ ಓವರ್ ಟೇಕ್ ಮಾಡಿದ್ದಾನೆ. ಈ ವೇಳೆ ಇದ್ದಕ್ಕಿದ್ದಂತೆ ಬೈಕ್‌ನ ಚಕ್ರಕ್ಕೆ ಸೀರೆ ಸಿಲುಕಿದೆ. ಅಷ್ಟೇ, ನೋಡ ನೋಡ್ತಿದ್ದಂತೆ ಬೈಕ್‌ನಲ್ಲಿ ಕೂತಿದ್ದ ಹೆಣ್ಮಗಳು ನೆಲಕಪ್ಪಳಿಸಿದ್ದಾಳೆ. ಬಿದ್ದ ಸ್ಪೀಡ್ ಐದಾರು ಅಡಿ ದೂರ ಹೋಗಿದ್ದಾಳೆ.
ಬೈಕ್‌ನ ಹಿಂದೆಯೇ ಖಾಸಗಿ ಬಸ್ ಬರ್ತಿತ್ತು. ಅಪ್ಪಿತಪ್ಪಿ ಬಸ್‌ನ ಡ್ರೈವರ್ ಆ್ಯಕ್ಸಿಲರೇಟರ್ ರೈಸ್ ಮಾಡಿದರೆ ನಡೆಯಬಾರದ ಘಟನೆ ನಡೆದು ಹೋಗ್ತಿತ್ತು. ಅದೃಷ್ಟವಶಾತ್, ಬಸ್ ಚಾಲಕನ ಜಾಣ್ಮೆಯಿಂದ ಯಾವ್ದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಆದರೆ, ಹೆಲ್ಮೆಟ್ ಹಾಕದೇ ಇದ್ದಿದ್ರಿಂದ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರಿದ್ದಾರೆ. ಅಪಘಾತದ ದೃಶ್ಯ ಬಸ್‌ನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ನಡುಗಿಸುವಂತಿದೆ.
Bangalore [Bangalore],Bangalore,Karnataka
December 04, 2025 5:58 PM IST