Last Updated:
ಸಿಲ್ವರ್ ಕ್ರೂಸ್ ಫ್ಲೀಟ್‌ನಲ್ಲಿರುವ ಪ್ರತಿಷ್ಠಿತ ಹಡಗು ಎಂಎಸ್ ಸಿಲ್ವರ್ ವಿಸ್ಪರ್ 186 ಮೀಟರ್ ಉದ್ದ, 6.20 ಮೀಟರ್ ಅಗಲ ಮತ್ತು 28,258 ಟನ್‌ಗಳಷ್ಟು ಭಾರವಿದೆ.
ಮಂಗಳೂರಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿವೆ. ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಈ ಋತುವಿನ ಮೊದಲ ವಿದೇಶಿ ಹಡಗು ಆಗಮಿಸಿದೆ. ಹೌದು, ಎಂಎಸ್ ಸಿಲ್ವರ್ ವಿಸ್ಪರ್ ಕ್ರೂಸ್(MS Silver Whisper Cruise) ಎನ್ ಎಂ ಪಿ ಎ(NMPA)ಯ ಬರ್ತ್ ನಂಬರ್ ನಾಲ್ಕಕ್ಕೆ ಆಗಮಿಸಿದೆ. ಈ ಕ್ರೂಸ್ ಅಂತರಾಷ್ಟ್ರೀಯ ಪ್ರವಾಸದಲ್ಲಿದ್ದು, ಕೇಪ್ ಟೌನ್ ಮುಂಬೈನಿಂದ ಮಂಗಳೂರು, ಮುಂದೆ ಕೊಲಂಬೋ ಕಡೆಗೆ ಸಾಗಲಿದೆ..
ಐಷಾರಾಮಿ ಬಹಮಿಯನ್ ಕ್ರೂಸ್ ಮುಂಬಯಿ ಮೂಲಕ ಮಂಗಳೂರಿಗೆ ಆಗಮಿಸಿದೆ. ಈ ಕ್ರೂಸ್ ನಲ್ಲಿ 296 ಸಿಬ್ಬಂದಿ ಮತ್ತು 299 ಮಂದಿ ಪ್ರಯಾಣಿಕರಿದ್ದರು. ಸಿಲ್ವರ್ ಕ್ರೂಸ್ ಫ್ಲೀಟ್‌ನಲ್ಲಿರುವ ಪ್ರತಿಷ್ಠಿತ ಹಡಗು ಎಂಎಸ್ ಸಿಲ್ವರ್ ವಿಸ್ಪರ್ 186 ಮೀಟರ್ ಉದ್ದ, 6.20 ಮೀಟರ್ ಅಗಲ ಮತ್ತು 28,258 ಟನ್‌ಗಳಷ್ಟು ಭಾರವಿದೆ.
ಇದನ್ನೂ ಓದಿ: Kukke Subramanya: ಬೆಳ್ಳಿ ಗೆಜ್ಜೆಯಲ್ಲಿ ಮಿಂಚಿದ ಕುಕ್ಕೆಯ ಯಶಸ್ವಿ!
ಎನ್ ಎಂ ಪಿ ಎ(NMPA) ಯಲ್ಲಿ ಇಳಿದ ಪ್ರಯಾಣಿಕರು ಮೂಡಬಿದಿರೆಯ ಸಾವಿರ ಕಂಬಗಳ ಬಸದಿ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಸಂತ ಆಲೋಷಿಯಸ್ ಚಾಪೆಲ್ ಮತ್ತು ಪಿಲಿಕುಳದ ಕುಶಲಕರ್ಮಿಗಳ ಗ್ರಾಮಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ.
NMPA ಗೆ ಬಂದಿರುವ ಮೊದಲ ವಿದೇಶಿ ಕ್ರೂಸ್ ಇದಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರೂಸ್ ಗಳು ವಿದೇಶಿ ಪ್ರವಾಸಿಗರನ್ನು ಹೊತ್ತು ಮಂಗಳೂರಿಗೆ ಆಗಮಿಸಲಿವೆ.
Mangalore,Dakshina Kannada,Karnataka
December 11, 2024 5:19 PM IST