Mangaluru Attraction: ಕಚೇರಿ ತಲೆಬಿಸಿ ಕಳೆಯೋಕೆ ಸಾಥ್‌ ನೀಡಿದವು ಕಲರ್‌ ಫುಲ್ ಮೀನುಗಳು!‌ ಇಲ್ಲಿ ಮಕ್ಕಳನ್ನ ಕರೆತರೋದು ಮರಿಬೇಡಿ | Mangaluru Zilla Panchayat Aquarium unveils attraction of various fish | ದಕ್ಷಿಣ ಕನ್ನಡ

Mangaluru Attraction: ಕಚೇರಿ ತಲೆಬಿಸಿ ಕಳೆಯೋಕೆ ಸಾಥ್‌ ನೀಡಿದವು ಕಲರ್‌ ಫುಲ್ ಮೀನುಗಳು!‌ ಇಲ್ಲಿ ಮಕ್ಕಳನ್ನ ಕರೆತರೋದು ಮರಿಬೇಡಿ | Mangaluru Zilla Panchayat Aquarium unveils attraction of various fish | ದಕ್ಷಿಣ ಕನ್ನಡ

Last Updated:

ಮಂಗಳೂರಿನ ಉರ್ವಸ್ಟೋರ್ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಕ್ವೇರಿಯಂನಲ್ಲಿ 15 ಜಾತಿಯ ಮೀನುಗಳು, ಅಪರೂಪದ ಒಣಮೀನು ಪ್ರದರ್ಶನ, ಉಚಿತ ಪ್ರವೇಶ, ಸಾರ್ವಜನಿಕರಿಗೆ ಮನೋರಂಜನೆ ತಾಣವಾಗಿದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಸರ್ಕಾರಿ ಕಛೇರಿಗಳೆಂದರೆ (Government Office) ಸ್ವಚ್ಛತೆ ಇಲ್ಲ ಅಂತಾ ಮೂಗುಮುರಿಯುವವರೇ ಹೆಚ್ಚು. ಆದರೆ ಮಂಗಳೂರಿನ (Mangaluru) ಉರ್ವಸ್ಟೋರ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿರುವ ಅಕ್ವೇರಿಯಂ ಕಛೇರಿಗೆ ರತ್ನ ಮುಕುಟದಂತಿದೆ. ಮೀನುಗಾರಿಕಾ ಇಲಾಖೆಯಿಂದ ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣವಾದ ಅಕ್ವೇರಿಯಂನಲ್ಲಿ ವಿವಿಧ ಮೀನುಗಳು (Fish) ಕಛೇರಿಗೆ ಬಂದವರ ಆಕರ್ಷಣೆಗೆ ಕಾರಣವಾಗಿದೆ.

ಅಪರೂಪದ ಒಣಮೀನುಗಳ ಆಕರ್ಷಣೆ

ಇಲ್ಲಿ ಹಲವು ಬಗೆಯ ಮೀನುಗಳನ್ನು ಕಾಣಬಹುದಾಗಿದೆ. ಅಪರೂಪದ ಒಣಮೀನುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಅಕ್ವೇರಿಯಂನಲ್ಲಿ ವಿವಿಧ ಜಾತಿಯ ಮೀನುಗಳನ್ನು ಹಾಕಲಾಗಿದೆ. ಸುಮಾರು ಹದಿನೈದು ಜಾತಿಯ ಮೀನುಗಳನ್ನು ಅಕ್ವೇರಿಯಂನಲ್ಲಿ ಹಾಕಲಾಗಿದೆ.

ಇಲ್ಲಿರೋ ಮೀನುಗಳು ಯಾವುದು ಗೊತ್ತಾ?

ಗೋಲ್ಡ್ ಫಿಶ್, ಕೊಯಿ ಕಾರ್ಪ್, ರೈನ್ ಬೋ ಶಾರ್ಕ್, ರೊರಾಮಿ, ಬ್ಲಾಕ್ ಟೆಟ್ರಾ, ಅರೋವನ, ರೋಸಿ ಬಾರ್ಬ್, ಫ್ಲವರ್ ಹಾರ್ನ್, ಸಿಲ್ವರ್ ಡಾಲರ್ ಫಿಶ್, ಏಂಜಲ್ ಫಿಶ್, ಪಿರಾಹ್ನ, ಝೀಬ್ರಾ ಫಿಶ್, ಸೋರ್ಡ್ ಟೈಲ್, ಮೋಲಿ ಎಂಬ ಜಾತಿಯ ಮೀನುಗಳನ್ನು ಅಕ್ವೇರಿಯಂನಲ್ಲಿ ಹಾಕಲಾಗಿದೆ. ಜೊತೆಗೆ ಮೀನುಗಳ ವಿಶೇಷ, ಅವುಗಳ ವೈಜ್ಞಾನಿಕ ಹೆಸರು, ಅವುಗಳ ಮೂಲ, ಆಹಾರ ಪದ್ಧತಿ, ಸಂತಾನೋತ್ಪತ್ತಿ ಯಾವ ರೀತಿ ಮಾಡುತ್ತದೆ ಎಂಬಿತ್ಯಾದಿ ಎಲ್ಲಾ ಮಾಹಿತಿಗಳ ಫಲಕವನ್ನು ಹಾಕಲಾಗಿದೆ.

ಮನದ ಒತ್ತಡ ನಿವಾರಿಸೋ ತಂತ್ರ, ಅಕ್ವೇರಿಯಂ ಮಂತ್ರ!

ಸರ್ಕಾರಿ ಕಛೇರಿಯಲ್ಲಿ ವಿವಿಧ ಕೆಲಸಗಳಿಗಾಗಿ ಬರುವ ಸಾರ್ವಜನಿಕರಿಗೆ ಈ ಅಕ್ವೇರಿಯಂ ಮನದ ಒತ್ತಡವನ್ನು ನಿವಾರಿಸುತ್ತದೆ. ಕಳೆದ ಕೆಲ ತಿಂಗಳ ಹಿಂದೆ ನಿರ್ವಹಣೆ ಇಲ್ಲದೇ ಹಾಳಾಗಿದ್ದ ಅಕ್ವೇರಿಯಂ ಈಗ ಮತ್ತೆ ಜೀವ ಪಡೆದಿದ್ದು ಜನರಲ್ಲೂ ಖುಷಿ ತಂದಿದೆ.

ನಿರ್ವಹಣೆ ಹೇಗೆ? 

ಇದನ್ನೂ ಓದಿ: Communal Harmony: ಸಿಹಿ ಅಕ್ಕಿ ರೊಟ್ಟಿಯಿಂದ ಒಂದಾದ ಹಿಂದೂ-ಮುಸ್ಲಿಂ, ಇಲ್ಲಿನ ಉರೂಸ್‌ ಹೆಣ್ಮಕ್ಳಿಗೆ ತವರು ಮನೆ ಹಬ್ಬ!

ಇದು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ತೆರೆದಿರುತ್ತದೆ, ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ. ಬೆಳಿಗ್ಗೆ 10 ರಿಂದ ಸಾಯಂಕಾಲ 6 ವರೆಗೆ ಇಲ್ಲಿ ಪ್ರವಾಸಿಗರು ಅಥವಾ ಜಿಲ್ಲಾ ಪಂಚಾಯತ್‌ ಗೆ ಕಾರ್ಯ ನಿಮಿತ್ತ ಬಂದ ಸಾರ್ವಜನಿಕರು ಭೇಟಿ ನೀಡಬಹುದು. ಈ ಮೂರು ವರ್ಷಗಳ ಹಿಂದೆ ಆಂಭವಾಗಿ ಹಾಗೆಯೇ ಅನೇಕ ಅಡೆತಡೆ ನಡುವೆ ಈಗ ಒಂದು ಒಳ್ಳೆ ಮನೋರಂಜನೆ ತಾಣವಾಗಿ ಈ ಅಕ್ವೇರಿಯಂ ಬೆಳೆದಿದೆ. ಅಂದಾಜು 10 ಲಕ್ಷ ಖರ್ಚಿನಲ್ಲಿ ಈ ಅಕ್ವೇರಿಯಂ ನಿರ್ಮಾಣವಾಗಿದೆ.