Last Updated:
ಕರಾವಳಿ ಉತ್ಸವ ಮೈದಾನಲ್ಲಿ ನಡೆದ “ಪಿಲಿ ನಲಿಕೆ” ಹುಲಿ ಕುಣಿತ ಸ್ಪರ್ಧೆಯಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರ ಶಿವಂ ದುಬೆ ಭಾಗವಹಿಸಿದ್ರು, ಸ್ಯಾಂಡಲ್ ವುಡ್ ನಟರಾದ ಡಾಲಿ ಧನಂಜಯ್, ನವೀನ್ ಶಂಕರ್, ಯಶ್ ಶೆಟ್ಟಿ, ರಾಜ್ ಶೆಟ್ಟಿ ಸೇರಿದಂತೆ ಹಲವು ನಟರು ಭಾಗವಹಿಸಿ, ಹುಲಿ ವೇಷದ ರಂಗು ಹೆಚ್ಚಿಸಿದ್ರು.
ಮಂಗಳೂರು ದಸರಾ ಸಂಭ್ರಮವನ್ನು ಹೆಚ್ಚಿಸೋದು ಹುಲಿ ಕುಣಿತದ ಅಬ್ಬರ.. ಆದರೆ ಹುಲಿ ಕುಣಿತದ ರಂಗನ್ನು ಹೆಚ್ಚಿಸಿದ್ರು ಬಾಲಿವುಡ್ ಮುನ್ನಬಾಯಿ, ಕ್ರಿಕೆಟರ್ ಶಿವಂ ದುಬೆ…ಸ್ಯಾಂಡಲ್‌ವುಡ್ ಡಾಲಿ… ಹೇಗಿತ್ತು ಹುಲಿ ಕುಣಿತದ ಗತ್ತು ಗಮ್ಮತ್ತು ಅಂತಾ ನೀವೇ ನೋಡಿ…
ಮಂಗಳೂರು ದಸರಾ ಅಂದ್ರೆ ಹುಲಿ ಕುಣಿತ.. ಹುಲಿ ಕುಣಿತ ಅಂದ್ರೆ ಮಂಗಳೂರು ದಸರಾ.. ಕಡಲ ತಡಿಯ ದಸರಾ ಗತ್ತು ಗಮ್ಮತ್ತು ಅದ್ಭುತ.. ಮಂಗಳೂರು ದಸರಾದಲ್ಲಿ ಅದ್ಧೂರಿಯಾಗಿ ಹುಲಿ ಕುಣಿತ ದಸರಾ ಮೆರುಗು ಇಮ್ಮಡಿಗೊಳಿಸುತ್ತಿದೆ… ಮಂಗಳೂರಿನ ಬಲ್ಲಾಲ್ ಬಾಗ್‌ನಲ್ಲಿ, ಫ್ರೆಂಡ್ಸ್ ಬಳ್ಳಾಲ್‌ಬಾಗ್ ಬಿರುವೆರ್ ಕುಡ್ಲ ವತಿಯಿಂದ ನಡೆದ ಹುಲಿವೇಷದ ಊದುಪೂಜೆಯಲ್ಲಿ ಬಾಲಿವುಡ್ ಮುನ್ನಬಾಯಿ ಸಂಜಯ್ ದತ್ ಭಾಗಿಯಾಗಿ ಹುಲಿವೇಷ ಕುಣಿತ ಕಂಡು ಫುಲ್‌ಖುಷ್ ಆಗಿದ್ದಾರೆ.
ಇದನ್ನೂ ಓದಿ: Train Service: ಭಕ್ತಾದಿಗಳಿಗೆ ಗುಡ್‌ನ್ಯೂಸ್- ಮುರುಡೇಶ್ವರದಿಂದ ತಿರುಪತಿಗೆ ರೈಲು ಸೇವೆ ಪ್ರಾರಂಭ
ಇನ್ನೂ, ಕರಾವಳಿ ಉತ್ಸವ ಮೈದಾನಲ್ಲಿ ನಡೆದ “ಪಿಲಿ ನಲಿಕೆ” ಹುಲಿ ಕುಣಿತ ಸ್ಪರ್ಧೆಯಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರ ಶಿವಂ ದುಬೆ ಭಾಗವಹಿಸಿದ್ರು, ಸ್ಯಾಂಡಲ್ ವುಡ್ ನಟರಾದ ಡಾಲಿ ಧನಂಜಯ್, ನವೀನ್ ಶಂಕರ್, ಯಶ್ ಶೆಟ್ಟಿ, ರಾಜ್ ಶೆಟ್ಟಿ ಸೇರಿದಂತೆ ಹಲವು ನಟರು ಭಾಗವಹಿಸಿ, ಹುಲಿ ವೇಷದ ರಂಗು ಹೆಚ್ಚಿಸಿದ್ರು.. ಈ ವೇಳೆ ತುಳುವಿನಲ್ಲಿ ಮಾತು ಪ್ರಾರಂಭಿಸಿದ ಶಿವಂ ದುಬೆ, ಕರಾವಳಿಯ ಹುಲಿಕುಣಿತದ ತಾಸೆ ಶಬ್ದ ಕೇಳಿ ತುಂಬಾ ಸಂತೋಷವಾಯಿತು. ದೇವಸ್ಥಾನಕ್ಕೆ ಬಂದ ಅನುಭವವಾಯಿತು. ನನಗೆ ಈ ವೈವಿಧ್ಯ ಹೊಸತಾದರೂ ತುಂಬಾ ಇಷ್ಟವಾಯಿತು ಅಂತ ಸಂತಸ ಹಂಚಿಕೊಂಡ್ರು.
ಒಟ್ಟಿನಲ್ಲಿ ಕರಾವಳಿಯಲ್ಲಿ ಅದ್ದೂರಿ ದಸರಾ ನಡೆಯುತ್ತಿದ್ದು, ಹುಲಿ ವೇಷ ಸಂಭ್ರಮ ಸಡಗರವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಶನಿವಾರ ದಸರಾದ ಅದ್ದೂರಿ ಶೋಭಾಯಾತ್ರೆ ನಡೆದು ಮಂಗಳೂರು ದಸರಾಗೆ ತೆರೆ ಬೀಳಲಿದೆ.
Dakshina Kannada,Karnataka
October 13, 2024 3:52 PM IST