Mangaluru Fishing: ಮುಗೀತು ಮಳೆಗಾಲದ ರಜೆ, ಕಡಲಿಗಿಳಿಯಲು ಸಿದ್ಧರಾದ ಮೀನುಗಾರರು! | Fishing boats, | ದಕ್ಷಿಣ ಕನ್ನಡ

Mangaluru Fishing: ಮುಗೀತು ಮಳೆಗಾಲದ ರಜೆ, ಕಡಲಿಗಿಳಿಯಲು ಸಿದ್ಧರಾದ ಮೀನುಗಾರರು! | Fishing boats, | ದಕ್ಷಿಣ ಕನ್ನಡ

Last Updated:

ಮೀನುಗಾರರು ಮಳೆಗಾಲದ ರಜೆಯ ನಂತರ ಮಂಗಳೂರಿನಲ್ಲಿ ಕಡಲಿಗಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. ಬೋಟ್‍ಗಳಿಗೆ ಐಸ್ ಲೋಡ್, ಅಗತ್ಯ ವಸ್ತುಗಳ ಸಿದ್ಧತೆ, 450 ಬಾಕ್ಸ್ ಮಂಜುಗಡ್ಡೆ, 4000 ಲೀಟರ್ ಡಿಸೇಲ್ ಅಗತ್ಯ.

+

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಮಳೆಗಾಲದ ರಜೆ (Holiday) ಅವಧಿ ಮುಗಿದು ಮೀನುಗಾರರು (Fishermen) ಮತ್ತೆ ಕಡಲಿಗಿಳಿಯಲು ಸಿದ್ಧತೆ ಆರಂಭಿಸಿದ್ದಾರೆ. ಬಂದರು ನಗರಿ ಮಂಗಳೂರಿನ (Mangaluru) ಮೀನುಗಾರಿಕಾ ಬಂದರು ಸದ್ಯ ಚಟುವಟಿಕೆಯ ತಾಣವಾಗಿ ಬದಲಾಗಿದೆ. ಹವಾಮಾನ ವೈಪರೀತ್ಯ ಇಲ್ಲವಾದಲ್ಲಿ ಇನ್ನು ವಾರದೊಳಗೆ ಬಹುತೇಕ ಎಲ್ಲಾ ಮೀನುಗಾರಿಕಾ ಬೋಟ್ ಗಳು (Boat) ಕಡಲಿಗಿಳಿಯಲಿವೆ. ಟ್ರಾಲ್ ಬೋಟ್, ಪರ್ಸಿನ್ ಬೋಟ್ ಗಳು ಕಡಲಿಗಿಳಿಯಲು ಎಲ್ಲಾ ಸಿದ್ಧತೆ ಮುಕ್ತಾಯಗೊಂಡಿದ್ದು, ಪೂರ್ಣ ಮಟ್ಟದ ಮೀನುಗಾರಿಕೆ ಆರಂಭಗೊಳ್ಳಲು ಇನ್ನೂ ಹತ್ತು ದಿನಗಳು ಬೇಕಾಗಬಹುದು.

ಬೋಟ್‍ಗಳಿಗೆ ಐಸ್ ಲೋಡ್ ಮಾಡುವ ಕೆಲಸ

ಈಗಾಗಲೇ ಬೋಟ್‍ಗಳಿಗೆ ಐಸ್ ಲೋಡ್ ಮಾಡುವ ಕೆಲಸ ನಡೆಯುತ್ತಿದ್ದು, ಜೋಡಿಸಿಟ್ಟ ಬಲೆಗಳನ್ನು ಬೋಟ್‍ಗೆ ಏರಿಸುವ ಕಾರ್ಯವೂ ಆರಂಭಗೊಂಡಿದೆ. ಆಳ ಸಮುದ್ರದಲ್ಲಿ ಮೀನುಗಾರಿಗೆ ನಡೆಸುವ ಸಂದರ್ಭದಲ್ಲಿ ಮೀನುಗಾರರಿಗೆ ಬೇಕಾದ ಅಗತ್ಯ ವಸ್ತುಗಳಾದ ಅಕ್ಕಿ, ತಿಂಡಿ-ತಿನಿಸುಗಳನ್ನು ಸಮರ್ಪಕವಾಗಿ ಜೋಡಿಸುವ ಕಾರ್ಯ ಭರದಿಂದ ಸಾಗಿದೆ.

ಮೀನುಗಾರರಿಗೆ ಆಹಾರ ತಯಾರಿಸಲು ಸಿದ್ಧತೆ

ಒಮ್ಮೆ ಮೀನುಗಾರಿಕೆಗೆ ತೆರಳುವ ಬೋಟ್‍ಗಳು ವಾಪಾಸಾಗಲು 6 ಅಥವಾ ಅದಕ್ಕಿಂತಲೂ ಹೆಚ್ಚು ದಿನಗಳು ಬೇಕಾಗುತ್ತವೆ. ಪ್ರತೀ ಟ್ರಾಲ್ ಬೋಟ್ ಗಳಲ್ಲಿ ಸುಮಾರು 10 ರಿಂದ 15 ಮಂದಿ ಮೀನುಗಾರಿದ್ದರೆ. ಪರ್ಸಿನ್ ಬೋಟ್ ಗಳಲ್ಲಿ ಮೀನುಗಾರರ ಸಂಖ್ಯೆ 30 ಕ್ಕೂ ಮಿಕ್ಕಿರುತ್ತವೆ. ಬೋಟ್ ಒಳಗೆಯೇ ಮೀನುಗಾರರಿಗೆ ಆಹಾರ ತಯಾರಿಸಲು ಬೇಕಾದ ಸಣ್ಣ ಅಡುಗೆ ಕೋಣೆ, ಗ್ಯಾಸ್ ಸಿಲಿಂಡರ್, ಅಕ್ಕಿ, ಚಾಹ, ಹುಡಿ ತರಕಾರಿ ಹೀಗೆ ಎಲ್ಲಾ ಅಗತ್ಯ ವಸ್ತುಗಳನ್ನು ಇಡಲಾಗುತ್ತದೆ. ಸುಮಾರು 8000 ಲೀಟರ್ ನೀರನ್ನೂ ಅಗತ್ಯ ಅವಶ್ಯಕತೆಗಾಗಿ ಕೊಂಡೊಯ್ಯಲಾಗುತ್ತದೆ.

450 ಬಾಕ್ಸ್ ಮಂಜುಗಡ್ಡೆ ಬೇಕು

ಪ್ರತಿಯೊಂದು ಟ್ರಾಲ್ ಬೋಟ್ ಗಳಿಗೆ ಒಮ್ಮೆ ಸಮುದ್ರಕ್ಕೆ ಇಳಿದು ಮೀನುಗಾರಿಕೆಯಲ್ಲಿ ತೊಡಗಿ ವಾಪಾಸು ಬರುವತನಕ ಸುಮಾರು 4000 ಲೀಟರ್ ಡಿಸೇಲ್ ಬೇಕಾಗುತ್ತದೆ. ಹಿಡಿದ ಮೀನನ್ನು ತೀರಕ್ಕೆ ಬರುವ ತನಕ ಸಂರಕ್ಷಿಸಿಡಲು 450 ಬಾಕ್ಸ್ ಗಳನ್ನು ಮಂಜುಗಡ್ಡೆ ಬೇಕಾಗುತ್ತದೆ. ಒಮ್ಮೆ ಸಮುದ್ರಕ್ಕೆ ಇಳಿಯಲು ಆರಂಭಿಸಿದ ಬೋಟ್ ಗಳಲ್ಲಿ ಫಿಶ್ ಫೈಂಡರ್, ಲೈಫ್ ಜಾಕೆಟ್, ಮೆಡಿಕಲ್ ಕಿಟ್ ಎಲ್ಲದರ ವ್ಯವಸ್ಥೆಯನ್ನೂ ಬೋಟ್ ನಲ್ಲಿ ಇರಿಸಬೇಕಾಗುತ್ತದೆ. ಮಂಗಳೂರು ಬಂದರಿನಲ್ಲಿ ಸ್ಥಳೀಯ ಮೀನುಗಾರರ ಜೊತೆಗೆ ತಮಿಳುನಾಡು, ಆಂದ್ರ, ಒಡಿಸ್ಸಾ, ಜಾಖರ್ಂಡ್ ಮತ್ತು ಮಹಾರಾಷ್ಟ್ರದ ಕಾರ್ಮುಕರೂ ಇದ್ದು, ಈ ಎಲ್ಲಾ ಕಾರ್ಮಿಕರು ಮಳೆಗಾಲದ ರಜೆಗೆ ತಮ್ಮ ತಮ್ಮ ಊರಿಗೆ ಹೋದವರು ಇದೀಗ ಮತ್ತೆ ಮಂಗಳೂರು ಬಂದರಿನತ್ತ ವಾಪಾಸ್ ಬರಲು ಆರಂಭಿಸಿದ್ದಾರೆ.