Mangaluru Girl Achievement: 1 ಗಂಟೆ ಸುದೀರ್ಘ ಕೂರ್ಮಾಸನ ಯೋಗ- ಇಂಡಿಯಾ ಬುಕ್ ಆಫ್ ರೆಕಾರ್ಡ್‌ ದಾಖಲಿಸಿದ 13 ವರ್ಷದ ಬಾಲಕಿ | Mangaluru Girl Achievement in kurmasana

Mangaluru Girl Achievement: 1 ಗಂಟೆ ಸುದೀರ್ಘ ಕೂರ್ಮಾಸನ ಯೋಗ- ಇಂಡಿಯಾ ಬುಕ್ ಆಫ್ ರೆಕಾರ್ಡ್‌ ದಾಖಲಿಸಿದ 13 ವರ್ಷದ ಬಾಲಕಿ | Mangaluru Girl Achievement in kurmasana

Last Updated:

ಮೇಘನಾ ಎಚ್.ಶೆಟ್ಟಿಗಾರ್ ದೇರಬೈಲ್ ನೆಕ್ಕಿಲಗುಡ್ಡೆಯ ಹರೀಶ್ ಶೆಟ್ಟಿಗಾರ್ ಹಾಗೂ ಕವಿತಾ ಶೆಟ್ಟಿಗಾರ್ ದಂಪತಿಯ ಪುತ್ರಿ. ಲೇಡಿಹಿಲ್ ವಿಕ್ಟೋರಿಯಾ ಹೈಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿನಿ.

X

ವಿಡಿಯೋ ಇಲ್ಲಿ ನೋಡಿ

1ಗಂಟೆ 17ಸೆಕೆಂಡುಗಳ ಕಾಲ ಸುದೀರ್ಘ ಕೂರ್ಮಾಸನ ಯೋಗ ಮಾಡಿ ಮಂಗಳೂರಿನ 13ವರ್ಷದ ಬಾಲಕಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾಳೆ. ಮೇಘನಾ ಎಚ್‌. ಶೆಟ್ಟಿಗಾರ್ ಎಂಬ ಬಾಲಕಿಯೇ ಈ ಸಾಧನೆ ಮಾಡಿದವಳು. ಕೂರ್ಮಾಸನ ಯೋಗವೆಂದರೆ ಎರಡೂ ಕಾಲನ್ನು ಅಗಲಕ್ಕೆ ಚಾಚಿ ಕೈಯನ್ನು ಕಾಲಿನ ಅಡಿಗೆ ಇಟ್ಟು ಬೆನನ್ನು ಬಗ್ಗಿಸಿ ತಲೆಯನ್ನು ನೆಲದಮೇಲೆ ಇಟ್ಟು ಆಮೆಯ ಭಂಗಿಯಲ್ಲಿ ಕಾಣುವಂತೆ ಯೋಗ ಮಾಡುವುದು. ಮೇಘನಾ ಎಚ್.ಶೆಟ್ಟಿಗಾರ್ ಸೆಪ್ಟೆಂಬರ್ 27ರಂದು ಕೂರ್ಮಾಸನ ಯೋಗ ಮಾಡಿ ಇದರ ವೀಡಿಯೋವನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್‌‌ಗೆ ಕಳುಹಿಸಲಾಗಿತ್ತು. ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌‌ ಇದನ್ನು ಪರಿಗಣಿಸಿದೆ.

ಇದನ್ನೂ ಓದಿ: Kannada Rajyotsava: ಗಡಿಯಲ್ಲಿ ಹೇಗಿದೆ ಗೊತ್ತಾ ಕನ್ನಡ ಹಬ್ಬದ ತಯಾರಿ?

ಮೇಘನಾ ಕಳೆದ 8ವರ್ಷಗಳಿಂದ ಯೋಗ ಶಿಕ್ಷಕಿ ಕವಿತಾ ಅಶೋಕ್‌ರಿಂದ ಯೋಗ ತರಬೇತಿ ಪಡೆಯುತ್ತಿದ್ದಾಳೆ. ಈ ಹಿಂದೆ ಇದೇ ಆಸನದಲ್ಲಿ ಮಧ್ಯಪ್ರದೇಶದ ಶೇತಾ ನೆಮ್ ಎಂಬ ಬಾಲಕಿಯ 46ನಿಮಿಷ 26ಸೆಕೆಂಡ್ 50ಮಿಲಿ ಸೆಕೆಂಡ್ ದಾಖಲೆಯನ್ನು ಮುರಿದ ಮೇಘನಾ, 1 ಗಂಟೆ 17ಸೆಕೆಂಡುಗಳ ಕಾಲು ಅಲ್ಲಾಡದೆ ಕೂರ್ಮಾಸನ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌‌ ದಾಖಲಿಸಿದ್ದಾಳೆ.

ಮೇಘನಾ ಎಚ್.ಶೆಟ್ಟಿಗಾರ್ ದೇರಬೈಲ್ ನೆಕ್ಕಿಲಗುಡ್ಡೆಯ ಹರೀಶ್ ಶೆಟ್ಟಿಗಾರ್ ಹಾಗೂ ಕವಿತಾ ಶೆಟ್ಟಿಗಾರ್ ದಂಪತಿಯ ಪುತ್ರಿ. ಲೇಡಿಹಿಲ್ ವಿಕ್ಟೋರಿಯಾ ಹೈಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿನಿ. ಈಕೆಯ ಯೋಗ ಶಿಕ್ಷಕಿ ಕವಿತಾ ಅಶೋಕ್‌ ಅವರೂ ಪದ್ಮ ಶೀರ್ಷಾಸನ ಯೋಗದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲಿಸಿದ್ದು, ತನ್ನ 10ಮಂದಿ ವಿದ್ಯಾರ್ಥಿಗಳನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲಿಸಲು ಪಣ ತೊಟ್ಟಿದ್ದಾರೆ. ಮೇಘನಾ ಎಚ್.ಶೆಟ್ಟಿಗಾರ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲಿಸಿದ ಇವರ ಎರಡನೇ ವಿದ್ಯಾರ್ಥಿನಿ.