Last Updated:
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 16 ಜೋಡಿಗಳ ಸಾಮೂಹಿಕ ವಿವಾಹ ಸಂಭ್ರಮದಿಂದ ನಡೆಯಿತು
ದಕ್ಷಿಣ ಕನ್ನಡ: ಕಲಿಯುಗದ ಪ್ರತ್ಯಕ್ಷ ದೇವರೆಂದೇ ಭಕ್ತರಿಂದ ಕರೆಯಲ್ಪಡುವ ಶ್ರೀನಿವಾಸ (Srinivasa) ದೇವರಿಗೆ (God) ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಅದಕ್ಕೂ ಮುಂದಚೆ ಸಮಿತಿ ವತಿಯಿಂದ ಇತಿಹಾಸ ಪ್ರಸಿದ ಪುತ್ತೂರು (Puttur) ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ (Temple) ದೇವರಮಾರು ಗದ್ದೆಯಲ್ಲಿ 16 ನವ ಜೋಡಿಗಳಿಗೆ ಸಾಮೂಹಿಕ ವಿವಾಹ ನ.30ರಂದು ಬೆಳಗ್ಗೆ ನಡೆಯಿತು.
16 ನವ ಜೋಡಿಗಳು ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರ ಸಮ್ಮುಖದಲ್ಲಿ ಸಪ್ತಪದಿ ತುಳಿಯುವ ಮೂಲಕ ನವಜೀವನಕ್ಕೆ ಕಾಲಿಟ್ಟರು. ಯಾವ ರೀತಿಯಲ್ಲಿ ಇತರ ಮದುವೆಗಳು ವೈಭವೋಪೇತವಾಗಿ ನಡೆಯುವಂತೆ ಮದುವೆಯ ದಿಬ್ಬಣದ ಜೊತೆಗೆ ಹಲವು ಸಂಪ್ರದಾಯ ಪದ್ಧತಿಗಳ ಮೂಲಕ ನಡೆಯುವ ಮದುವೆಯ ಕ್ರಮಕ್ಕೂ ಅವಕಾಶವನ್ನು ನೀಡಲಾಗಿತ್ತು.
ಮದುವೆ ದಿಬ್ಬಣದಲ್ಲಿ ನೂರಕ್ಕೂ ಮಿಕ್ಕಿದ ವಾಹನಗಳ ಜೊತೆಗೆ 16 ಜೋಡಿಗಳೂ ಕಲ್ಯಾಣ ಮಂಟಪಕ್ಕೆ ಬಂದು ನೆರೆದಿದ್ದವರ ಮೊಗದಲ್ಲಿ ಖುಷಿಯನ್ನೂ ತಂದಿತ್ತು.
ಮಧ್ಯಾಹ್ನ ಅನ್ನಸಂತರ್ಪಣೆಯೂ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ನರಸಿಂಹ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
Dakshina Kannada,Karnataka
December 01, 2025 4:21 PM IST