Last Updated:
ಇಂಗ್ಲೆಂಡ್‌ಗೆ ಈ ಸರಣಿ 2011ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಆಶಸ್ ಗೆಲ್ಲುವ ಅವಕಾಶವಿದೆ. 2015ರ ನಂತರ ಇಂಗ್ಲೆಂಡ್ ಆ್ಯಶಸ್ ಗೆಲ್ಲಲಾಗಿಲ್ಲ. ಆದರೆ ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮ್ಯಾಕ್‌ಕಲಮ್‌ರ ನೇತೃತ್ವದಲ್ಲಿ ‘ಬಾಝ್ಬಾಲ್’ ಶೈಲಿಯ ಕ್ರಿಕೆಟ್ ಅನ್ನು ಆಸ್ಟ್ರೇಲಿಯಾದ ವೇಗ ಮತ್ತು ಬೌನ್ಸಿ ಪಿಚ್‌ಗಳಲ್ಲಿ ಪರೀಕ್ಷಿಸುವ ದೊಡ್ಡ ಚಾಲೆಂಜ್ ಇದೆ.
2025-26ರ ಬಹುನಿರೀಕ್ಷಿತ ಆಶಸ್ ಟೆಸ್ಟ್ ಸರಣಿ (Ashes Test Series) ಆಸ್ಟ್ರೇಲಿಯಾದಲ್ಲಿ (Australia) ನಡೆಯಲಿದೆ. ಈಗಾಗಲೇ ಕಳೆದ ಐದು ವರ್ಷಗಳಿಂದ 20ಕ್ಕೂ ಹೆಚ್ಚು ಶತಕ ಸಿಡಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ಲೆಜೆಂಡ್ ಆಗಿ ಗುರುತಿಸಿಕೊಂಡಿರುವ ಇಂಗ್ಲೆಂಡ್ ತಂಡದ ಜೋ ರೂಟ್ ಆಟವನ್ನ ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಚ್ಚರಿ ಎಂದರೆ ಇಂಗ್ಲೆಂಡ್‌ರ ಖ್ಯಾತ ಬ್ಯಾಟರ್ ಜೋ ರೂಟ್ ಆಸ್ಟ್ರೇಲಿಯಾದಲ್ಲಿ ಇನ್ನೂ ಟೆಸ್ಟ್ ಶತಕ ಸಾಧಿಸಿಲ್ಲ. ಆಸಿಸ್ ಬೌಲರ್ಗಳು ಜೂಟ್ ಶತಕ ಸಿಡಿಸುವುದನ್ನ ತಡೆಯಲು ಸನ್ನದ್ದರಾಗುತ್ತಿದ್ದಾರೆ. ಆದರೆ ಈ ಬಾರಿ ರೂಟ್ ಶತಕ ಸಿಡಿಸಿದ್ದರೆ ತಾವೂ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ (MCG)ನಲ್ಲಿ ನಗ್ನವಾಗಿ ಸುತ್ತುತ್ತೇನೆ ಎಂದು ಆಸ್ಟ್ರೇಲಿಯಾದ ಲೆಜೆಂಡರಿ ಕ್ರಿಕೆಟರ್ ಮ್ಯಾಥ್ಯೂ ಲೆಜೆಂಡ್ ಪ್ರತಿಜ್ಞೆ ಮಾಡಿದ್ದಾರೆ. ಐದು ಟೆಸ್ಟ್ ಪಂದ್ಯಗಳ ಆಶಸ್ ಸರಣಿ ನವೆಂಬರ್ 21ರಂದು ಪರ್ತ್‌ನಲ್ಲಿ ಆರಂಭವಾಗುತ್ತದೆ.
ಯೂಟ್ಯೂಬ್‌ನ ‘ಆಲ್ ಓವರ್ ಬಾರ್ ದಿ ಕ್ರಿಕೆಟ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಹೇಡನ್, ” ಈ ಸಮ್ಮರ್ನಲ್ಲಿ ರೂಟ್ ಶತಕ ಸಿಡಿಸದಿದ್ದರೆ, ನಾನು MCGನಲ್ಲಿ ನಗ್ನವಾಗಿ ಸುತ್ತುತ್ತೇನೆ” ಎಂದು ಹೇಳಿದ್ದಾರೆ. ರೂಟ್‌ರ ಅದ್ಭುತ ಫಾರ್ಮ್‌ನಿಂದ ಹೇಡನ್ ಈ ರೀತಿ ಧೈರ್ಯ ಮಾಡಿಕೊಂಡಿದ್ದಾರೆ. 2021ರಿಂದ 61 ಟೆಸ್ಟ್‌ಗಳಲ್ಲಿ ರೂಟ್ 5,720 ರನ್ ಸೂರೆಗೈದಿದ್ದಾರೆ, ಅವರ ಸರಾಸರಿ 56.63. ಈ ಅವಧಿಯಲ್ಲಿ 22 ಶತಕಗಳು ಮತ್ತು 17 ಅರ್ಧಶತಕಗಳು ಸೇರಿವೆ, ಅತಿ ಗರಿಷ್ಠ ಸ್ಕೋರ್ 262. ವಿಶ್ವದ ಯಾವುದೇ ಬ್ಯಾಟರ್ ರೂಟ್ ಸನಿಹ ಬರಲು ಸಾಧ್ಯವಾಗಿಲ್ಲ.
ರೂಟ್‌ರ ಕಡೆಯ ಟೆಸ್ಟ್ ಸರಣಿ ಭಾರತದ ವಿರುದ್ಧದ ತವರು ಸರಣಿಯಾಗಿತ್ತು. ಅಲ್ಲಿ ಅವರು 5 ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ 537 ರನ್‌ಗಳನ್ನು ಮಾಡಿದ್ದರು, ಸರಾಸರಿ 67.14 ರೂಪದಲ್ಲಿ, 3 ಶತಕಗಳು ಮತ್ತು 1 ಅರ್ಧಶತಕದೊಂದಿಗೆ. ಅವರು ಸರಣಿಯ ಎರಡನೇ ಅತಿ ಹೆಚ್ಚು ಸ್ಕೋರರ್ ಮತ್ತು ಇಂಗ್ಲೆಂಡ್‌ರ ಅತ್ಯಂತ ಉತ್ತಮ ಬ್ಯಾಟರ್ ಆಗಿದ್ದರು.
ಆಸ್ಟ್ರೇಲಿಯಾದಲ್ಲಿ 14 ಟೆಸ್ಟ್‌ಗಳಲ್ಲಿ ರೂಟ್ 892 ರನ್‌ಗಳನ್ನು ಮಾಡಿದ್ದಾರೆ, ಸರಾಸರಿ 35.68 ರೂಪದಲ್ಲಿ. ಆದರೆ ಇಲ್ಲಿ ಒಂದೂ ಶತಕ ಸಿಡಿಸಿಲ್ಲ. 9 ಅರ್ಧಶತಕಗಳು ಇದ್ದರೂ, ಅತಿ ಹೆಚ್ಚು ಸ್ಕೋರ್ 89 ಮಾತ್ರ. ಟೆಸ್ಟ್ ಕ್ರಿಕೆಟ್ನಲ್ಲಿ ರೂಟ್ ಸಾರ್ವಕಾಲಿಕ ಎರಡನೇ ಅತಿ ದೊಡ್ಡ ಸ್ಕೋರರ್ ಆಗಿದ್ದಾರೆ. 158 ಪಂದ್ಯಗಳ 288 ಇನ್ನಿಂಗ್ಸ್‌ಗಳಲ್ಲಿ 13,543 ರನ್‌ಗಳು, ಸರಾಸರಿ 51.29, 39 ಶತಕಗಳು ಮತ್ತು 66 ಅರ್ಧಶತಕಗಳನ್ನ ಸಿಡಿಸಿದ್ದಾರೆ. ಹಲವಾರು ದಾಖಲೆಗಳನ್ನ ಮಾಡಿರುವ ರೂಟ್ ಆಸ್ಟ್ರೇಲಿಯಾದಲ್ಲಿ ಮಾತ್ರ ಇನ್ನೂ ಶತಕದ ಬರ ಎದುರಿಸುತ್ತಿದ್ದಾರೆ.
ಇಂಗ್ಲೆಂಡ್‌ಗೆ ಈ ಸರಣಿ 2011ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಆಶಸ್ ಗೆಲ್ಲುವ ಅವಕಾಶವಿದೆ. 2015ರ ನಂತರ ಇಂಗ್ಲೆಂಡ್ ಆ್ಯಶಸ್ ಗೆಲ್ಲಲಾಗಿಲ್ಲ. ಆದರೆ ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮ್ಯಾಕ್‌ಕಲಮ್‌ರ ನೇತೃತ್ವದಲ್ಲಿ ‘ಬಾಝ್ಬಾಲ್’ ಶೈಲಿಯ ಕ್ರಿಕೆಟ್ ಅನ್ನು ಆಸ್ಟ್ರೇಲಿಯಾದ ವೇಗ ಮತ್ತು ಬೌನ್ಸಿ ಪಿಚ್‌ಗಳಲ್ಲಿ ಪರೀಕ್ಷಿಸುವ ದೊಡ್ಡ ಚಾಲೆಂಜ್ ಇದೆ. ಇಂಗ್ಲೆಂಡ್ ಆಸ್ಟ್ರೇಲಿಯಾದಲ್ಲಿ 2011ರಲ್ಲಿ ಕೊನೆಯ ಬಾರಿ ಆ್ಯಶಸ್ ಗೆದ್ದಿತ್ತು.
1ನೇ ಟೆಸ್ಟ್: ಪರ್ತ್ ಸ್ಟೇಡಿಯಂ, ನವೆಂಬರ್ 21-25
2ನೇ ಟೆಸ್ಟ್: ಗ್ಯಾಬ್ಬಾ, ಬ್ರಿಸ್ಬೇನ್ (ಡೇ/ನೈಟ್), ಡಿಸೆಂಬರ್ 4-8
3ನೇ ಟೆಸ್ಟ್: ಅಡಿಲೇಡ್ ಓವಲ್, ಡಿಸೆಂಬರ್ 17-21
4ನೇ ಟೆಸ್ಟ್: MCG, ಮೆಲ್ಬರ್ನ್, ಡಿಸೆಂಬರ್ 26-30
5ನೇ ಟೆಸ್ಟ್: SCG, ಸಿಡ್ನಿ, ಜನವರಿ 4-8
September 12, 2025 5:45 PM IST
Mathew Hayden: ಆ್ಯಶಸ್ ಸರಣಿಯಲ್ಲಿ ಆತ ಶತಕ ಸಿಡಿಸದಿದ್ದರೆ ನಗ್ನವಾಗಿ MCG ಸುತ್ತಾ ಸುತ್ತುತ್ತೇನೆ! ಆಸೀಸ್ ಲೆಜೆಂಡರಿ ಕ್ರಿಕೆಟರ್ ಪ್ರತಿಜ್ಞೆ