Last Updated:
37 ವರ್ಷದ ಮ್ಯಾಥ್ಯೂ ವೇಡ್ ಕಳೆದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. 2021ರಲ್ಲಿ ಆಸ್ಟ್ರೇಲಿಯಾದ ಮೊದಲ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 17 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿ ಮಿಂಚಿದ್ದರು.
ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ (Mathew Wade) ಇನ್ನೂ ವೃತ್ತಿಪರ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಅವರು ಐಪಿಎಲ್‌ನಲ್ಲಿ (IPL) ಗುಜರಾತ್ ಟೈಟನ್ಸ್ (GT) ತಂಡದ ಸಹಾಯಕ ಕೋಚ್ ಕೂಡ ಆಗಿದ್ದಾರೆ, ಆದರೆ ಅವರು ಕ್ರಿಕೆಟ್ ಅನ್ನು ಸಂಪೂರ್ಣವಾಗಿ ಬಿಡುತ್ತಿಲ್ಲ. ಏಕದಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಮ್ಯಾಥ್ಯೂ ವೇಡ್ 65 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇದು ಆಸ್ಟ್ರೇಲಿಯಾದಲ್ಲಿ ತಸ್ಮೇನಿಯಾ ಮತ್ತು ವಿಕ್ಟೋರಿಯಾ ನಡುವೆ ನಡೆದ ಲಿಸ್ಟ್ ಎ ಪಂದ್ಯವಾಗಿತ್ತು. ಆಸ್ಟ್ರೇಲಿಯಾದಲ್ಲಿ, ಇದನ್ನು ದೇಶೀಯ ಕ್ರಿಕೆಟ್‌ನಲ್ಲಿ ಒಡಿಐ ಕಪ್ ಎಂದು ಕರೆಯಲಾಗುತ್ತದೆ. ಇಂದಿನ ಪಂದ್ಯದಲ್ಲಿ ವೇಡ್ ಸಿಡಿಲಬ್ಬರದ ಶತಕ ಸಿಡಿಸಿ ಗಮನ ಸೆಳೆದರು.
ಮ್ಯಾಥ್ಯೂ ವೇಡ್ 65 ಎಸೆತಗಳಲ್ಲಿ ತಮ್ಮ 10ನೇ ಲಿಸ್ಟ್ ಎ ಶತಕವನ್ನು ತಲುಪಿದರು. ಇದಕ್ಕೂ ಮುನ್ನ ಮಿಚೆಲ್ ಓವನ್ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿ ತಸ್ಮೆನಿಯಾ ತಂಡಕ್ಕೆ ಉತ್ತಮ ಆರಂಭ ನೀಡಿದರು, ತಂಡ ಕೇವಲ 20 ಓವರ್‌ಗಳಲ್ಲಿ 135/4 ಸ್ಕೋರ್ ತಲುಪಲು ಸಹಾಯ ಮಾಡಿದರು. ಆರನೇ ಸ್ಥಾನದಲ್ಲಿ ಬಂದ ಮ್ಯಾಥ್ಯೂ ವೇಡ್ ಓವನ್ ಅವರ ಪ್ರಯತ್ನಗಳು ವ್ಯರ್ಥವಾಗದಂತೆ ನೋಡಿಕೊಂಡರು. ಅವರು ಆಸ್ಟ್ರೇಲಿಯಾದ ಟೆಸ್ಟ್ ಆಲ್‌ರೌಂಡರ್ ಬ್ಯೂ ವೆಬ್‌ಸ್ಟರ್ ಅವರೊಂದಿಗೆ 101 ರನ್‌ಗಳ ಜೊತೆಯಾಟವನ್ನ ಹಂಚಿಕೊಂಡರು. ವೆಬ್‌ಸ್ಟರ್ 95 ಎಸೆತಗಳಲ್ಲಿ 81 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ವೆಬ್‌ಸ್ಟರ್ ವಿಕೆಟ್ ನಂತರವೂ ಮ್ಯಾಥ್ಯೂ ವೇಡ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಅನ್ನು ಮುಂದುವರೆಸಿದರು ಮತ್ತು ಕೇವಲ 65 ಎಸೆತಗಳಲ್ಲಿ ತಮ್ಮ ಶತಕವನ್ನು ತಲುಪಿದರು. ಅವರು 68 ಎಸೆತಗಳಲ್ಲಿ 105 ರನ್ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಬಾರಿಸಿದರು. ಅಕ್ಟೋಬರ್ 2023ರ ನಂತರ ಇದು ಅವರ ಮೊದಲ ಶತಕವಾಗಿದೆ, ಈ ಹಿಂದೆ ಅದೇ ಟೂರ್ನಮೆಂಟ್‌ನಲ್ಲಿ ಕ್ವೀನ್ಸ್‌ಲ್ಯಾಂಡ್ ವಿರುದ್ಧ 105 ರನ್ ಗಳಿಸಿದ್ದರು. ಒಟ್ಟಾರೆಯಾಗಿ, ಇದು ಅವರ ಹತ್ತನೇ ಲಿಸ್ಟ್ ಎ ಶತಕವಾಗಿದೆ. ಪಂಜಾಬ್‌ನ ಮಾಜಿ ಕ್ರಿಕೆಟಿಗ ನಿಖಿಲ್ ಚೌಧರಿ ಕೂಡ ಏಳನೇ ಸ್ಥಾನದಲ್ಲಿ 49 ಎಸೆತಗಳಲ್ಲಿ 67 ರನ್ ಗಳಿಸುವ ಮೂಲಕ ತಸ್ಮೇನಿಯಾ ತಂಡವು 381 ರನ್ ಗಳಿಸಲು ಸಹಾಯ ಮಾಡಿದರು, ಆದರೆ ತಂಡವು ಇನ್ನಿಂಗ್ಸ್‌ನಲ್ಲಿ ಮೂರು ಎಸೆತಗಳು ಬಾಕಿ ಇರುವಾಗ ಆಲೌಟ್ ಆಯಿತು.
37 ವರ್ಷದ ಮ್ಯಾಥ್ಯೂ ವೇಡ್ ಕಳೆದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. 2021ರಲ್ಲಿ ಆಸ್ಟ್ರೇಲಿಯಾದ ಮೊದಲ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 17 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ ಅವರು ಶಾಹೀನ್ ಅಫ್ರಿದಿ ಎಸೆತದಲ್ಲಿ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿ ಆಸ್ಟ್ರೇಲಿಯಾಗೆ ರೋಚಕ ಗೆಲುವಿಗೆ ಕಾರಣರಾದರು.
September 19, 2025 8:51 PM IST