ಹೋಳಿ ವಿಶೇಷ ; ಸ್ತ್ರೀಯರಂತೆ ವೇಷ ಧರಿಸಿ ಪೂಜೆ ಸಲ್ಲಿಸುವ ಪುರುಷರು – ಬಯಸಿದ್ದು ಈಡೇರುವ ನಂಬಿಕೆ – HOLY CELEBRATION

ಹೋಳಿ ವಿಶೇಷ ; ಸ್ತ್ರೀಯರಂತೆ ವೇಷ ಧರಿಸಿ ಪೂಜೆ ಸಲ್ಲಿಸುವ ಪುರುಷರು – ಬಯಸಿದ್ದು ಈಡೇರುವ ನಂಬಿಕೆ – HOLY CELEBRATION

ಕರ್ನೂಲು ಜಿಲ್ಲೆಯ ಸಂತೆಕೂಡ್ಲೂರು ಗ್ರಾಮದಲ್ಲಿ ಗಂಡಸರು ಹೆಣ್ಣಿನ ವೇಷ ಧರಿಸಿ

ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಶಿಷ್ಟವಾಗಿ ಹೋಳಿ ಹಬ್ಬವನ್ನ ಆಚರಿಸುತ್ತಾ ಬಂದಿದ್ದಾರೆ.

ಕರ್ನೂಲು (ಆಂಧ್ರ ಪ್ರದೇಶ): ಹೋಳಿ ಕಾಮ ದಹನ ಮತ್ತು ಬಣ್ಣದ ಹಬ್ಬ. ಆದರೆ, ಜಿಲ್ಲೆಯ ಆದೋನಿ ಮಂಡಲದ ಸಂತೆಕೂಡ್ಲೂರು ಗ್ರಾಮದಲ್ಲಿ

ವಿಶಿಷ್ಟವಾದ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿ ಹೋಳಿ ಬಂದೊಡನೆ ಪುರುಷರು ಸ್ತ್ರೀಯರಂತೆ ವೇಷ ಧರಿಸುತ್ತಾರೆ. ಅಲ್ಲದೇ,

ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

ತಲೆಮಾರುಗಳಿಂದಲೂ ಈ ಸಂಪ್ರದಾಯವನ್ನ ಮುಂದುವರೆಸಿಕೊಂಡು ಬಂದಿದ್ದಾರೆ. ಹೋಳಿ ದಿನ ಗಂಡಸರು ಸೀರೆ ಉಟ್ಟು ಹೆಣ್ಣಿನಂತಾಗುತ್ತಾರೆ.

ಈ ದಿನ ರತಿ – ಮನ್ಮಥನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

men in womens dress tradiition ritual

”ಹೋಳಿ ಹಬ್ಬದ ದಿನದಂದು ಸಂತೆಕೂಡ್ಲೂರು ಗ್ರಾಮದಲ್ಲಿ ಪುರುಷರಿಗೆ ಸೀರೆ, ಆಭರಣ, ಹೂವುಗಳಿಂದ ಅಲಂಕಾರ ಮಾಡಲಾಗುತ್ತದೆ.

ತಮ್ಮ ಗ್ರಾಮದಲ್ಲಿ ಹಲವು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದೆ. ಈ ಆಚರಣೆ ಕರ್ನಾಟಕ ರಾಜ್ಯದಿಂದ ಬಂದಿದೆ” ಎನ್ನುತ್ತಾರೆ ಗ್ರಾಮಸ್ಥರು.

ಸ್ತ್ರೀಯರಂತೆ ವೇಷತೊಟ್ಟು ಪೂಜಿಸಿದರೆ ಬಯಸಿದ ಕಾರ್ಯಗಳು ನೆರವೇರುತ್ತವೆ ಎಂದು ಇಲ್ಲಿನ ಪುರುಷರು ನಂಬಿದ್ದಾರೆ.

ಈ ರೀತಿ ಪೂಜಿಸುವುದರಿಂದ ಬೆಳೆಗಳು ಚೆನ್ನಾಗಿ ಬರುತ್ತವೆ, ಗ್ರಾಮಕ್ಕೆ ತೊಂದರೆಯಾಗುವುದಿಲ್ಲ ಮತ್ತು ಮನೆಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ

ಎಂಬುದು ಇಲ್ಲಿನವರ ನಂಬಿಕೆಯಾಗಿದೆ. ಪ್ರತಿ ವರ್ಷ ಹೋಳಿ ಹಬ್ಬಕ್ಕೆ ವಿವಿಧ ರಾಜ್ಯಗಳಿಂದ ಭಕ್ತರು ಈ ವಿಚಿತ್ರ ಆಚರಣೆ ವೀಕ್ಷಿಸಲು ಬರುತ್ತಾರೆ.