MI vs CSK: ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ! 17 ವರ್ಷದ ಬಿಗ್ ಹಿಟ್ಟರ್‌ಗೆ ಪ್ಲೇಯಿಂಗ್‌-11ನಲ್ಲಿ ಚಾನ್ಸ್ ಕೊಟ್ಟ ಸಿಎಸ್‌ಕೆ | IPL 2025 CSK vs Mumbai Dhoni Leads with New Strategy

MI vs CSK: ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ! 17 ವರ್ಷದ ಬಿಗ್ ಹಿಟ್ಟರ್‌ಗೆ ಪ್ಲೇಯಿಂಗ್‌-11ನಲ್ಲಿ ಚಾನ್ಸ್ ಕೊಟ್ಟ ಸಿಎಸ್‌ಕೆ | IPL 2025 CSK vs Mumbai Dhoni Leads with New Strategy

17 ವರ್ಷದ ಆಯುಷ್ ಮ್ಹಾತ್ರೆಗೆ ಅವಕಾಶ

ಗಾಯಗೊಂಡ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ ಟೂರ್ನಿಯಿಂದ ಹೊರಗುಳಿದ ಬಳಿಕ ಮಾಜಿ ನಾಯಕ ಎಂ ಎಸ್ ಧೋನಿ ನಾಯಕನಾಗಿ ಸಿಎಸ್‌ಕೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇನ್ನೂ ಇಂದಿನ ಪಂದ್ಯದಲ್ಲಿ ರಾಹುಲ್ ತ್ರಿಪಾಟಿ ಅವರನ್ನು ತಂಡದಿಂದ ಕೈಬಿಟ್ಟಿದ್ದು, 17 ವರ್ಷದ ಆಯುಷ್ ಮ್ಹಾತ್ರೆಗೆ ಅವಕಾಶ ನೀಡಿದ್ದಾರೆ.

ಉಭಯ ತಂಡಗಳಿಗೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದು ಎನಿಸಿದೆ. ಅದರಲ್ಲೂ ವಿಶೇಷವಾಗಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈಗಾಗಲೇ ಚೆನ್ನೈ ಆಡಿರುವ 7 ಪಂದ್ಯಗಳಲ್ಲಿ ಕೇವಲ 2ನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಇತ್ತ ಮುಂಬೈ ಇಂಡಿಯನ್ಸ್ ತಂಡ ಕೂಡ ಬಲಿಷ್ಠವಾಗಿದ್ದು, ಈ ಬಾರಿಯ ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರಿಲ್ಲ. ಸದ್ಯ 7 ಪಂದ್ಯಗಳಲ್ಲಿ 3 ಗೆಲುವು ಹಾಗೂ 4 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: IPL Record: ಪಂಜಾಬ್ ವಿರುದ್ಧ ಜಸ್ಟ್ 50 ರನ್ ಸಿಡಿಸಿದ್ರೆ ಸಾಕು! IPLನ ಆಲ್​​ ಟೈಮ್ ರೆಕಾರ್ಡ್ ಉಡೀಸ್ ಮಾಡಲಿದ್ದಾರೆ ಕಿಂಗ್ ಕೊಹ್ಲಿ!

ಉಭಯ ತಂಡಗಳ ಪ್ಲೇಯಿಂಗ್ 11

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರಿಯಾನ್ ರಿಕೆಲ್ಟನ್(ವಿಕೀ), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ಅಶ್ವನಿ ಕುಮಾರ್ ಸ್ಥಾನ ಪಡೆದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಶೇಕ್ ರಶೀದ್, ರಚಿನ್ ರವೀಂದ್ರ, ಆಯುಷ್ ಮ್ಹಾತ್ರೆ, ರವೀಂದ್ರ ಜಡೇಜಾ, ಶಿವಂ ದುಬೆ, ವಿಜಯ್ ಶಂಕರ್, ಜೇಮಿ ಓವರ್‌ಟನ್, ಎಂಎಸ್ ಧೋನಿ ( ನಾಯಕ\ ವಿಕೀ), ನೂರ್ ಅಹ್ಮದ್, ಖಲೀಲ್ ಅಹ್ಮದ್, ಮಥೀಶ ಪತಿರಣ ಸ್ಥಾನ ಪಡೆದಿದ್ದಾರೆ.