MI vs GT: ಎಲಿಮಿನೇಟರ್​​ನಲ್ಲಿ ಗುಜರಾತ್ ಬಗ್ಗುಬಡಿದ ಮುಂಬೈ! ಕ್ವಾಲಿಫೈಯರ್​ 2ಕ್ಕೆ ಅರ್ಹತೆ ಪಡೆದ 5 ಬಾರಿಯ ಚಾಂಪಿಯನ್​ | MI Stun GT Mumbai Indians Win Thrilling Eliminator Book Qualifier 2 Spot

MI vs GT: ಎಲಿಮಿನೇಟರ್​​ನಲ್ಲಿ ಗುಜರಾತ್ ಬಗ್ಗುಬಡಿದ ಮುಂಬೈ! ಕ್ವಾಲಿಫೈಯರ್​ 2ಕ್ಕೆ ಅರ್ಹತೆ ಪಡೆದ 5 ಬಾರಿಯ ಚಾಂಪಿಯನ್​ | MI Stun GT Mumbai Indians Win Thrilling Eliminator Book Qualifier 2 Spot

Last Updated:

ಮುಂಬೈ ಇಂಡಿಯನ್ಸ್ ಐಪಿಎಲ್ 2025 ಎಲಿಮಿನೇಟರ್​ನಲ್ಲಿ 20 ರನ್​ಗಳಿಂದ ಗೆದ್ದು ಕ್ವಾಲಿಫೈಯರ್ 2ಕ್ಕೆ ಅರ್ಹತೆ ಪಡೆದಿದೆ. ಮೊದಲು ಬ್ಯಾಟಿಂಗ್ ಮಾಡಿ 228 ರನ್​ಗಳಿಸಿದ್ದ ಮುಂಬೈ, ಗುಜರಾತ್ ಟೈಟನ್ಸ್ ತಂಡವನ್ನು 208 ರನ್​ಗಳಿಗೆ ನಿಯಂತ್ರಿಸಿತು.

ಗುಜರಾತ್ ಮಣಿಸಿದ ಮುಂಬೈ ಇಂಡಿಯನ್ಸ್ಗುಜರಾತ್ ಮಣಿಸಿದ ಮುಂಬೈ ಇಂಡಿಯನ್ಸ್
ಗುಜರಾತ್ ಮಣಿಸಿದ ಮುಂಬೈ ಇಂಡಿಯನ್ಸ್

ಐಪಿಎಲ್ 2025ರ ಎಲಿಮಿನೇಟರ್​ ಪಂದ್ಯದಲ್ಲಿ  ಮುಂಬೈ ಇಂಡಿಯನ್ಸ್ ಅದ್ಭುತ ಪ್ರದರ್ಶನ ತೋರಿ  ರನ್​ಗಳ ಗೆಲವು ಸಾಧಿಸಿ ಕ್ವಾಲಿಫೈಯರ್​ 2ಕ್ಕೆ ಅರ್ಹತೆ ಪಡೆದುಕೊಂಡಿದೆ. ಮೊದಲು ಬ್ಯಾಟಿಂಗ್​ನಲ್ಲಿ ಪ್ರಾಬಲ್ಯ ಸಾಧಿಸಿ 228 ರನ್​ಗಳಿಸಿದ್ದ 5 ಬಾರಿಯ ಚಾಂಪಿಯನ್​, ಬೌಲಿಂಗ್​​ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 208 ಕ್ಕೆ ನಿಯಂತ್ರಿಸುವ ಮೂಲಕ 20 ರನ್​ಗಳಿಂದ ಗೆಲುವು ಸಾಧಿಸಿತು. ಇದೀಗ ಕ್ವಾಲಿಫೈಯರ್ 2 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಜೂನ್ 1ರಂದು ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ಸೋಲು ಕಂಡ ಗುಜರಾತ್ ಟೈಟನ್ಸ್ ಟೂರ್ನಿಯಿಂದ ಹೊರಬಿದ್ದಿದೆ.

ಡು ಆರ್​ ಡೈ ಪಂದ್ಯದಲ್ಲಿ 229ರನ್​ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್​ಗೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್​ನಲ್ಲೇ ನಾಯಕ ಶುಭ್​ಮನ್ ಗಿಲ್​ (1) ಟ್ರೆಂಟ್ ಬೌಲ್ಡ್ ಬೌಲಿಂಗ್​​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ನಂತರ 2ನೇ ವಿಕೆಟ್​ಗೆ ಕುಸಾಲ್ ಮೆಂಡಿಸ್ ಹಾಗೂ ಸಾಯಿ ಸುದರ್ಶನ್ 64 ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು.  ಕುಸಾಲ್ ಮೆಂಡಿಸ್ 10 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಿತ 20 ರನ್​ಗಳಿಸಿ ಸ್ಯಾಂಟ್ನರ್ ಬೌಲಿಂಗ್​​ನಲ್ಲಿ ಹಿಟ್ ವಿಕೆಟ್ ಆದರು.  ಈ ಹಂತದಲ್ಲಿ ಒಂದಾದ ಸಾಯಿ ಸುದರ್ಶನ್​ ಜೊತೆಗೂಡಿದ ಮತ್ತೊಮ್ಮ ತಮಿಳುನಾಡು ಸ್ಟಾರ್ ವಾಷಿಂಗ್ಟನ್ ಸುಂದರ್ 3ನೇ ವಿಕೆಟ್​  44 ಎಸೆತಗಳಲ್ಲಿ 84 ರನ್​ಗಳ ಜೊತೆಯಾಟ ನೀಡಿ ಪಂದ್ಯದಲ್ಲಿ ಗುಜರಾತ್​ ರೇಸ್​ನಲ್ಲಿ ಉಳಿಯುವಂತೆ ಮಾಡಿದರು.

24  ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್​ ಸಹಿತ 48 ರನ್​ಗಳಿಸಿದ್ದ ವಾಷಿಂಗ್ಟನ್ ಸುಂದರ್​ರನ್ನ ಯಾರ್ಕರ್ ಕಿಂಗ್ ಬುಮ್ರಾ ಕ್ಲೀನ್ ಬೌಲ್ಡ್ ಮಾಡಿ ಮುಂಬೈಗೆ ಬಿಗ್ ಬ್ರೇಕ್ ತಂದುಕೊಟ್ಟರು. ಈ ಓವರ್​ನಲ್ಲಿ ವಿಕೆಟ್ ಪಡೆದಿದ್ದಲ್ಲದೆ ಕೇವಲ 4 ರನ್ ನೀಡಿ ರನ್​ಗತಿಗೂ ಕಡಿವಾಣ ಹಾಕಿದರು. 2 ಓವರ್​ ನಂತರ ಸಾಯಿ ಸುದರ್ಶನ್​ ಕೂಡ ಗ್ಲೀಸನ್ ಬೌಲಿಂಗ್​ನಲ್ಲಿ ಔಟ್ ಆದರು. 49 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ 80 ರನ್​ಗಳಿಸಿದರು.

ಶೆರ್ಫಾನ್ ರುದರ್ಫೋರ್ಡ್ ಕೂಡ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರು. 15 ಎಸೆತಗಳಲ್ಲಿ 4 ಬೌಂಡರಿ ಸಹಿತ 24 ರನ್​ಗಳಿಸಿ ಬೌಲ್ಟ್​ಗೆ ವಿಕೆಟ್ ಒಪ್ಪಿಸುತ್ತಿದ್ದಂತೆ ಮುಂಬೈ ಗೆಲುವು ಬಹುತೇಖ ಖಚಿವಾಯಿತು. ರಾಹುಲ್ ತೆವಾಟಿಯಾ 11 ಎಸೆತಗಳಲ್ಲಿ ಅಜೆಯ 16, ಶಾರುಖ್ ಖಾನ್ 7 ಎಸೆತಗಳಲ್ಲಿ 13 ರನ್ ರನ್ಗಳಿಸಿ 200ರ ಗಡಿದಾಟಲಷ್ಟೇ ಶಕ್ತರಾದರು.​

ಟಾಸ್​ ಗೆದ್ದು ಬ್ಯಾಟಿಂಗ್ ಮಾಡುವ ಅಚ್ಚರಿಯ ನಿರ್ಧಾರ ತೆಗೆದುಕೊಂಡು ಮುಂಬೈ ಇಂಡಿಯನ್ಸ್​ಗೆ ರೋಹಿತ್ ಶರ್ಮಾ ಹಾಗೂ ಬೈರ್​ಸ್ಟೋವ್​ ಭರ್ಜರಿ ಆರಂಭ ನೀಡಿದರು. ಈ ಇಬ್ಬರು ಲೆಜೆಂಡರಿ ಬ್ಯಾಟ್ಸ್​ಮನ್​ಗಳು ಪವರ್‌ಪ್ಲೇನಲ್ಲಿ 79 ರನ್ ಸೂರೆಗೈದರು. ರೋಹಿತ್ 33 ರನ್ ಗಳಿಸಿದರೆ, ಜಾನಿ 44 ರನ್ ಗಳಿಸಿದರು. ಆದರೆ ಜಾನಿ ಬೈರ್‌ಸ್ಟೋವ್ 22 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ಗಳ ಸಹಿತ 47 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಸಾಯಿ ಕಿಶೋರ್ ಇಂಗ್ಲೆಂಡ್ ಆಟಗಾರನನ್ನ ಔಟ್ ಮಾಡಿ ಗುಜರಾತ್​ಗೆ ಮೊದಲ ಬ್ರೇಕ್ ನೀಡಿದರು.

ಬೈರ್​ಸ್ಟೋವ್ ನಂತರ ಬಂದ ಸೂರ್ಯಕುಮಾರ್ ಯಾದವ್ ಕೂಡ ತಮ್ಮ ಅಮೋಘ ಪ್ರದರ್ಶನ ಮುಂದುವರಿಸಿದರು. 2ನೇ ವಿಕೆಟ್​​ಗೆ ರೋಹಿತ್ ಜೊತೆಗೆ ಸೇರಿ 34 ಎಸೆತಗಳಲ್ಲಿ 59 ರನ್​ಗಳ ಜೊತೆಯಾಟ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ 20 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್​ಗಳ ಸಹಿತ 33 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇವರನ್ನೂ ಕೂಡ ಸಾಯಿ ಕಿಶೋರ್ ಪೆವಿಲಿಯನ್​ಗಟ್ಟಿದರು.

ಇನ್ನು ರೋಹಿತ್ ಶರ್ಮಾ 28 ಎಸೆತಗಳಲ್ಲಿ 47ನೇ ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ 50 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್​ಗಳ ನೆರವಿನಿಂದ 81 ರನ್​ಗಳಿಸಿ ಪ್ರಸಿಧ್ ಕೃಷ್ಣಗೆ ವಿಕೆಟ್ ನೀಡಿದರು. ತಿಲಕ್ ವರ್ಮಾ 11 ಎಸೆತಗಳಲ್ಲಿ 3 ಸಿಕ್ಸರ್​ ಜೊತೆ 25 ರನ್​ಗಳಿಸಿ ಸಿರಾಜ್​ ಬೌಲಿಂಗ್​​ನಲ್ಲಿ ಕುಸಾಲ್ ಮೆಂಡಿಸ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.