ಟಾಸ್ ಕುರಿತು ಹಾರ್ದಿಕ್ ಹೇಳಿದ್ದೇನು?
ಟಾಸ್ ಗೆದ್ದ ಬಳಿಕ ಹಾರ್ದಿಕ್ ಪಾಂಡ್ಯ, ‘ಪಿಚ್ ಚೆನ್ನಾಗಿ ಕಾಣುತ್ತಿದೆ. ವಾಂಖೆಡೆಯಲ್ಲಿ ಇಬ್ಬನಿ ಬೀಳುತ್ತದೆಯೋ ಇಲ್ಲವೋ ಎಂದು ಹೇಳಲು ಸಾಧ್ಯವಿಲ್ಲ. ಆರಂಭದಲ್ಲಿ ನಮಗೆ ಸ್ವಲ್ಪ ಸ್ವಿಂಗ್ ಸಿಗಬಹುದು, ಆದ್ದರಿಂದ ಚೇಸಿಂಗ್ ಉತ್ತಮ ಆಯ್ಕೆ ಎಂದು ನಾನು ಭಾವಿಸಿದ್ದೇನೆ ಎಂದರು’.
ಮುಂದುವರೆದು ಮಾತನಾಡಿದ ಅವರು, ರೋಹಿತ್ ಶರ್ಮಾ ಅವರನ್ನು ಆಡುವ ಆಡುವ XI ರ ಬಳಗದಿಂದ ಕೈಬಿಟ್ಟಿರುವ ಕುರಿತು ಮಾತನಾಡಿದ ಅವರು, “ನಾವು ಉತ್ತಮ ಲಯಕ್ಕೆ ಬರಲು ಮತ್ತು ಉತ್ತಮ ಆರಂಭವನ್ನು ಪಡೆಯಲು ಬಯಸುತ್ತೇವೆ. ಒಟ್ಟಾರೆಯಾಗಿ ನಾವು ಉತ್ತಮ ಕ್ರಿಕೆಟ್ ಆಡಲು ಬಯಸುತ್ತೇವೆ, ಶಾಂತವಾಗಿರಲು ಬಯಸುತ್ತೇವೆ. ವಿಲ್ ಜ್ಯಾಕ್ಸ್ ಮರಳಿದ್ದಾರೆ ಮತ್ತು ಅಶ್ವಿನಿ ಕುಮಾರ್ ಪಾದಾರ್ಪಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಅಜಿಂಕ್ಯಾ ಹೇಳಿದ್ದೇನು
ಟಾಸ್ ಕುರಿತು ಮಾತನಾಡಿದ ಅಜಿಂಕ್ಯಾ ರಹಾನೆ, ನಾವು ಕೂಡ ಮೊದಲು ಬೌಲಿಂಗ್ ಮಾಡಲು ಬಯಸಿದ್ದೆವು ಎಂದು ಅಜಿಂಕ್ಯ ರಹಾನೆ ಹೇಳಿದರು. ಆದರೆ ವಿಕೆಟ್ ನೋಡಿದಾಗ ನನಗೆ ಗೊಂದಲವಾಯಿತು. ವಾಂಖೆಡೆ ಸಾಮಾನ್ಯವಾಗಿ ಉತ್ತಮ ಬ್ಯಾಟಿಂಗ್ ಪಿಚ್ ಆಗಿದೆ. ಆದ್ದರಿಂದ ಟಾಸ್ ಕಳೆದುಕೊಳ್ಳುವುದು ಉತ್ತಮವೆಂದು ತೋರುತ್ತದೆ ಎಂದರು.
ಸ್ವಲ್ಪ ಗಾಳಿ ಇದೆ, ಇಬ್ಬನಿ ಇಲ್ಲ. ನಾವು ಉತ್ತಮವಾಗಿ ಸ್ಕೋರ್ ಮಾಡಲು ಪ್ರಯತ್ನಿಸುತ್ತೇವೆ ಮತ್ತು ನಮ್ಮ ಬೌಲರ್ಗಳು ತಮ್ಮ ಡಿಫೆಂಡ್ ಮಾಡಿಕೊಳ್ಳುತ್ತಾರೆ ಎಂದರು. ನಾವು ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ, ಪ್ರತಿ ಪಂದ್ಯದಲ್ಲೂ ಉತ್ತಮ ಕ್ರಿಕೆಟ್ ಆಡಲು ನಮಗೆ ಅವಕಾಶ ಸಿಗುತ್ತದೆ. ಮೋಯಿನ್ ಅವರನ್ನು ಸುನಿಲ್ ಬದಲಾಯಿಸಿದ್ದಾರೆ.
ಇದನ್ನೂ ಓದಿ: KKR vs MI: ಕೊಲ್ಕತ್ತಾ ವಿರುದ್ಧ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ! ಮೊದಲ ಗೆಲುವಿನ ವಿಶ್ವಾಸದಲ್ಲಿ ಹಾರ್ದಿಕ್
ಕಳೆದೆರಡು ಪಂದ್ಯದಲ್ಲಿ ರೋಹಿತ್ ವೈಫಲ್ಯ
ಇನ್ನೂ ಈ ಪಂದ್ಯದಲ್ಲಿ ವಿಶೇಷ ಏನು ಅಂದ್ರೆ, ರೋಹಿತ್ ಶರ್ಮಾ ಅವರು ಕಳೆದ 15 ವರ್ಷದಲ್ಲಿ ಐಪಿಎಲ್ನಲ್ಲಿ ಮುಂಬೈನ ವಾಂಖೆಡೆಯಲ್ಲಿ ನಡೆದ ಪಂದ್ಯದಿಂದ ಹೊರಗುಳಿದಿರುವುದು ಇದೇ ಮೊದಲು. ರೋಹಿತ್ ಶರ್ಮಾ ಕಳೆದ ಎರಡೂ ಪಂದ್ಯದಲ್ಲೂ ಕೂಡ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು ಎಂಬುದು ಗಮನಾರ್ಹ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಲೇಯಿಂಗ್ XI : ಕ್ವಿಂಟನ್ ಡಿ ಕಾಕ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಅಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ ಮತ್ತು ವರುಣ್ ಚಕ್ರವರ್ತಿ ಇದ್ದಾರೆ.
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರಿಯಾನ್ ರಿಕೆಲ್ಟನ್, ವಿಲ್ ಜಾಕ್ಸ್(ವಿಕೀ), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಟ್ರೆಂಟ್ ಬೌಲ್ಟ್, ಅಶ್ವನಿ ಕುಮಾರ್, ವಿಘ್ನೇಶ್ ಪುತೂರ್ಗೆ ಅವಕಾಶ ನೀಡಲಾಗಿದೆ.
March 31, 2025 8:00 PM IST