6ನೇ ವೈಫಲ್ಯ ಕಂಡ ರೋಹಿತ್ ಶರ್ಮಾ
163 ರನ್ಗಳ ಸುಲಭ ಚೇಸಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಸ್ಫೋಟಕ ಆರಂಭ ಪಡೆಯಿತಾದರೂ ದೊಡ್ಡದಾಗಿ ಪರಿವರ್ತಿಸಿಕೊಳ್ಳುವಲ್ಲಿ ಎಡವಿತು. 16 ಎಸೆತಗಳಲ್ಲಿ 3 ಸಿಕ್ಸರ್ಗಳ ಸಹಿತ 26 ರನ್ಗಳಿಸಿದ್ದ ರೋಹಿತ್ ಶರ್ಮಾ 4ನೇ ಓವರ್ನಲ್ಲೆ ವಿಕೆಟ್ ಕಳೆದುಕೊಂಡರು. ಇದು ಅವರ ಸತತ 6ನೇ ವೈಫಲ್ಯವಾಗಿದೆ. 6 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಒಂದು ಪಂದ್ಯದಲ್ಲೂ ಕೂಡ 50ರ ಜೊತೆಯಾಟ ಪಡೆಯಲಿಲ್ಲ. ಆದರೆ ರೋಹಿತ್ ವೈಫಲ್ಯ ಇಂದು ತಂಡಕ್ಕೆ ದೊಡ್ಡ ಹೊಡೆತ ನೀಡಲಿಲ್ಲ.
ಇದನ್ನೂ ಓದಿ: IPL 2025: ಒಂದೇ ಓವರ್ನಲ್ಲಿ ಹೆಚ್ಚು ಎಸೆತ ಬೌಲ್! ಐಪಿಎಲ್ನಲ್ಲಿ ಸಂದೀಪ್ ಶರ್ಮಾ ಕೆಟ್ಟ ದಾಖಲೆ
ಮಧ್ಯಮ ಕ್ರಮಾಂಕದಿಂದ ಉತ್ತಮ ಆಟ
2ನೇ ವಿಕೆಟ್ಗೆ ಒಂದಾದ ರಯಾನ್ ರಿಕಲ್ಟನ್ ಹಾಗೂ ವಿಲ್ ಜಾಕ್ಸ್ 37 ರನ್ ಸೇರಿಸಿದರು. ರಿಕಲ್ಟನ್ 23 ಎಸೆತಗಳಲ್ಲಿ 5 ಬೌಂಡರಿ ಸಹಿತ 31 ರನ್ಗಳಿಸಿ ಹರ್ಷಲ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ಅನ್ಸಾರಿ ಓವರ್ನಲ್ಲಿ ಔಟ್ ಆಗಿದ್ದ ಅವರು, ಕ್ಲಾಸೆನ್ ಸ್ಟಂಪ್ ಮುಂದೆ ಕೈಹಾಕಿದ್ದರಿಂದ ನೋಬಾಲ್ ಆಗಿ ಜೀವದಾನ ಪಡೆದಿದ್ದರು. ಆದರೆ ಆ ಜೀವದಾನವನ್ನ ದೊಡ್ಡದಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು.
ಗೆಲುವಿನ ಗಡಿ ದಾಟಿಸಿದ ತಿಲಕ್ -ಪಾಂಡ್ಯ
ಬೌಲಿಂಗ್ನಲ್ಲಿ 2 ವಿಕೆಟ್ ಪಡೆದು ಮಿಂಚಿದ್ದ ವಿಲ್ ಜಾಕ್ಸ್ ಬ್ಯಾಟಿಂಗ್ನಲ್ಲೂ ಮಿಂಚಿದರು. 26 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 36 ರನ್ಗಳಿಸಿದರು. ಔಟ್ ಆಗುವ ಮುನ್ನ ಜಾಕ್ಸ್- ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 52 ರನ್ ಜೊತೆಯಾಟ ಕಲೆಯಾಕಿದ್ದರು. ಸೂರ್ಯಕುಮಾರ್ ಯಾದವ್ 15 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ಗಳ ಸಹಿತ 26 ರನ್ಗಳಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 9 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸೇರಿ 21 ರನ್ಗಳಿಸಿ ಗೆಲುವಿಗೆ 1ರನ್ ಬೇಕಿದ್ದಾಗ ಔಟ್ ಆದರು. ತಿಲಕ್ ವರ್ಮಾ 17 ಎಸೆತಗಳಲ್ಲಿ ಅಜೇಯ 21 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಹೈದರಾಬಾದ್ ಪರ ನಾಯಕ ಪ್ಯಾಟ್ ಕಮಿನ್ಸ್ 26ಕ್ಕೆ3, ಇಶಾನ್ ಮಾಲಿಂಗ್ 36ಕ್ಕೆ2, ಹರ್ಷಲ್ ಪಟೇಲ್ 31ಕ್ಕೆ1 ವಿಕೆಟ್ ಪಡೆದರು.
ಇದನ್ನೂ ಓದಿ: ರಾಜಸ್ಥಾನ್ ವಿರುದ್ಧ ಡಕ್ಔಟ್ ಆದ್ರೂ ವಿಶೇಷ ಸಾಧನೆ ಮಾಡಿದ ಕರುಣ್ ನಾಯರ್! ಐಪಿಎಲ್ನಲ್ಲಿ ಇವರೇ ಮೊದಲು
ಪರದಾಡಿದ ಹೈದರಾಬಾದ್ ಬ್ಯಾಟರ್ಸ್
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಪವರ್ ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳಲಿಲ್ಲವಾದರೂ, ಕೇವಲ 46 ರನ್ಗಳಿಸಿದರು. ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 40 ರನ್ಗಳಿಸಿದರು. ಇದೇ ಇಡೀ ಇನ್ನಿಂಗ್ಸ್ನಲ್ಲಿ ಗರಿಷ್ಠ ಸ್ಕೋರ್ ಆಯಿತು. ಇನ್ನು ಟ್ರಾವಿಸ್ ಹೆಡ್ 29 ಎಸೆತಗಳಲ್ಲಿ ಕೇವಲ 28, ನಿತೀಶ್ ಕುಮಾರ್ ರೆಡ್ಡಿ 21 ಎಸೆತಗಳಲ್ಲಿ 19 ರನ್ಗಳಿಸಿ ದಯನೀಯ ವೈಫಲ್ಯ ಅನುಭವಿಸಿದರು.
ಹೆನ್ರಿಚ್ ಕ್ಲಾಸೆನ್ 28 ಎಸೆತಗಳನ್ನ ಎದುರಿಸಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 37 ರನ್ ಸಿಡಿಸಿ 19ನೇ ಓವರ್ನಲ್ಲಿ ಬುಮ್ರಾ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಆದರೆ ಹಾರ್ದಿಕ್ ಪಾಂಡ್ಯ ಎಸೆದ ಕೊನೆಯ ಓವರ್ನಲ್ಲಿ ಅನಿಕೇತ್ ವರ್ಮಾ ಹಾಗೂ ಪ್ಯಾಟ್ ಕಮಿನ್ಸ್ 22 ರನ್ ಸೂರೆಗೈದು ತಂಡದ ಮೊತ್ತವನ್ನ 162ಕ್ಕೆ ಕೊಂಡೊಯ್ದರು. ಅನಿಕೇತ್ 8 ಎಸೆತಗಳಲ್ಲಿ ಅಜೇಯ 18 ರನ್ಗಳಿಸಿದರೆ, ಪ್ಯಾಟ್ ಕಮಿನ್ಸ್ ಅಜೇಯ 8 ರನ್ಗಳಿಸಿದರು.
ಮುಂಬೈ ಬೌಲರ್ಗಳ ಪೈಕಿ ವಿಲ್ ಜಾಕ್ಸ್ 14ಕ್ಕೆ2, ಹಾರ್ದಿಕ್ ಪಾಂಡ್ಯ 42ಕ್ಕೆ1, ಜಸ್ಪ್ರೀತ್ ಬುಮ್ರಾ 21ಕ್ಕೆ1, ಟ್ರೆಂಟ್ ಬೌಲ್ಟ್ 29ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
April 17, 2025 11:21 PM IST