ಆದರೆ ಸತ್ಯ ತಿಳಿದ ಬಳಿಕ ಹೆಚ್ಚಿನವರು ಅಚ್ಚರಿ ಸೂಚಿಸಿದ್ದಾರೆ. ಮಿಯಾ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ತನ್ನನ್ನು ಚಿತ್ರಿಸಿರುವ ಎಐ ಚಾಲಿತ ಇಮೇಜ್‌ಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರಗಳ ಕೆಳಗೆ ಕ್ಯಾಪ್ಶನ್ ಅನ್ನು ಇವರು ಬರೆದುಕೊಂಡಿದ್ದು ಈವೆಂಟ್ ಇನ್ನೂ ಮುಗಿದಿಲ್ಲ ಆದರೆ ಪಾರ್ಟಿಯು ಸಂಪೂರ್ಣ ಇತರ ಗೇಮ್‌ಗಳಿಗಾಗಿ, ನಿಮ್ಮ ಮೆಚ್ಚಿನ ವಿಂಬಲ್ಡನ್ ಮ್ಯಾಚ್ ಯಾವುದು ಎಂದು ಕೇಳಿದ್ದಾರೆ. ವಿಂಬಲ್ಡನ್, ಟೆನ್ನಿಸ್‌ಲೈಫ್ ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಹಂಚಿಕೊಂಡಿದ್ದಾರೆ.
ಈ ಪೋಸ್ಟ್‌ಗೆ 55,000 ಮೆಚ್ಚುಗೆಗಳು ಬಂದಿದ್ದು, ಇವರು ಪ್ರಭಾವಿ ಎಐ, ಡಿಜಿಟಲ್ ಸ್ಟೋರಿಟೆಲ್ಲರ್ ಎಂಬುದನ್ನು ಉಲ್ಲೇಖಿಸದಿದ್ದರೂ ಸಾಮಾಜಿಕ ತಾಣದಲ್ಲಿ ಇದು ಹೈಲೈಟ್ ಆಗಿದೆ.
ಹೆಚ್ಚಿನ ಬಳಕೆದಾರರು ಮಿಯಾ ಅವರ ಪೋಸ್ಟ್‌ಗಳಿಗೆ ಕಾಮೆಂಟ್‌ಗಳನ್ನು ಬರೆದುಕೊಂಡಿದ್ದು ನೀವು ಎಐ ಇಮೇಜ್ ಎಂದು ಅನ್ನಿಸುವುದೇ ಇಲ್ಲ ಎಂದು ತಿಳಿಸಿದ್ದಾರೆ.
ಟೆನ್ನಿಸ್ ಕ್ರೀಡಾಕೂಟದಲ್ಲಿ ನೀವಿರುವುದು ಬಹುದೊಡ್ಡ ಅದೃಷ್ಟ, ಕ್ರೀಡಾಕೂಟವನ್ನು ಆನಂದಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಆಕೆ ನೈಜವಾದ ವ್ಯಕ್ತಿಯಲ್ಲ ಎಂದು ಒಬ್ಬರು ಬರೆದಿದ್ದರೆ, ಇನ್ನೊಬ್ಬ ಬಳಕೆದಾರರು ಇರಿ, ಇವರು ನಿಜವಾದ ವ್ಯಕ್ತಿಯಲ್ಲವೇ? ನನಗೆ ತುಂಬಾ ಗೊಂದಲವಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಮಿಯಾ ಝೆಲು ಅನಾಮಧೇಯರಾಗಿದ್ದು ತಮ್ಮ ಎಐ ರಚಿತ ಪೋಸ್ಟ್‌ಗಳ ಮೂಲಕ ಇವರು ಗಮನಸೆಳೆದಿದ್ದಾರೆ. ಡಿಜಿಟಲ್ ಕುಟುಂಬದಲ್ಲಿ ಮಿಯಾ ಝಿಲು ಒಬ್ಬರಲ್ಲ, ಅವರ ಎಐ ರಚಿತ ಸಹೋದರಿ ಅನಾ ಝೆಲು ಕೂಡ ಖ್ಯಾತಿ ಪಡೆದ ಪರ್ಸನಾಲಿಟಿ ಎಂದೆನಿಸಿದ್ದಾರೆ.
ಇವರು ಕೂಡ ತಮ್ಮ ಇನ್‌ಸ್ಟಾ ಖಾತೆಯಲ್ಲಿ 300,000 ಕ್ಕೂ ಹೆಚ್ಚಿನ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಅನಾ ಮಾರ್ಚ್ 14 ರಂದು ಮಿಯಾ ಅವರನ್ನು ತಮ್ಮ ಅನುಯಾಯಿಗಳಿಗೆ ಪರಿಚಯಿಸಿದರು ಇದು ಅವರ ಕುಟುಂಬ ಬಾಂಧವ್ಯವನ್ನು ಬಲಪಡಿಸಿದೆ.
ಮಿಯಾ ಆಗಾಗ್ಗೆ ಭಾವನಾತ್ಮಕ ಪೋಸ್ಟ್‌ಗಳನ್ನು, ಶೀರ್ಷಿಕೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಡಿಜಿಟಲ್ ವಲಯದಲ್ಲಿ ಆರಂಭಿಕ ಮತ್ತು ಪ್ರಸಿದ್ಧ ಉದಾಹರಣೆಗಳಲ್ಲಿ ಒಬ್ಬರಾದ ಲಿಲ್ ಮಿಕೆಲಾ 2016 ರಲ್ಲಿ ತಮ್ಮ ಚೊಚ್ಚಲ ಪ್ರವೇಶದ ನಂತರ 2.4 ಮಿಲಿಯನ್ ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಸಂಗ್ರಹಿಸಿದ್ದಾರೆ ಮತ್ತು ಗಿವೆಂಚಿ ಮತ್ತು ಶನೆಲ್‌ನಂತಹ ಬ್ರ್ಯಾಂಡ್‌ಗಳ ಪ್ರಚಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬಾರ್ಸಿಲೋನಾ ಮೂಲದ ಗುಲಾಬಿ ಕೂದಲಿನ A.I. ಮಾಡೆಲ್ ಐಟಾನಾದ ಸೃಷ್ಟಿಕರ್ತರು ಸಪ್ಲಿಮೆಂಟ್‌ಗಳಿಂದ ಆರಂಭಿಸಿ ಹೇರ್ ಕೇರ್‌ವರೆಗಿನ ಬ್ರ್ಯಾಂಡ್ ಡೀಲ್‌ಗಳ ಮೂಲಕ ತಿಂಗಳಿಗೆ $10,000 ಗಳಿಸುತ್ತಾರೆ ಎಂದು ವರದಿಯಾಗಿದೆ.
A.I. ಪರಿಕರಗಳು ಮತ್ತು CGI ಬಳಸಿ ರಚಿಸಲಾದ ಈ ಫೋಟೋಗಳನ್ನು ಜನರು ಕಸ್ಟಮೈಸ್ ಮಾಡಿಕೊಳ್ಳಬಹುದು. ಗೌಪ್ಯತೆಯನ್ನು ಗೌರವಿಸುವ ಸೃಷ್ಟಿಕರ್ತರಿಗೆ ಮತ್ತು ಕಡಿಮೆ-ವೆಚ್ಚದ, ಸಂಪೂರ್ಣವಾಗಿ ನಿಯಂತ್ರಿಸಬಹುದಾದ ಮಾರ್ಕೆಟಿಂಗ್ ಆಯ್ಕೆಗಳನ್ನು ಹುಡುಕುತ್ತಿರುವ ಬ್ರ್ಯಾಂಡ್‌ಗಳಿಗೆ ಈ ಡಿಜಿಟಲ್ ಪರ್ಸನಾಲಿಟಿಗಳು ಒಂದು ಉತ್ತಮ ಆಯ್ಕೆಯಾಗಿವೆ.
ವಿಂಬಲ್ಡನ್ ಸಮಯದ ಮಿಯಾಳ ಫೋಟೋಗಳನ್ನು ಬಳಕೆದಾರರು ಆರಂಭದಲ್ಲಿ ನಿಜವೆಂದೇ ಭಾವಿಸಿದ್ದರು ಆದರೆ ಆಕೆಯ ಎಐ ಗುರುತು ಬಹಿರಂಗವಾದಾಗ ಅನೇಕ ಕಾಮೆಂಟ್‌ಗಳನ್ನು ಈ ಚಿತ್ರಗಳು ಸ್ವೀಕರಿಸಿದವು ಆದರೆ ಇದರಿಂದ ಮಿಯಾ ಇನ್ನಷ್ಟು ಪ್ರಸಿದ್ಧರಾದರು ಎಂಬುದು ಸುಳ್ಳಲ್ಲ.
July 17, 2025 10:47 PM IST